ಪಾಟ್ನಾ (ಬಿಹಾರ) – ತಾಯಿಯೊಬ್ಬಳು ತನ್ನದೇ ಪುತ್ರನನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಬಿಹಾರದ ಪಾಟ್ನಾ ಗ್ರಾಮೀಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮೃತ ಬಾಲಕನನ್ನು ಶ್ರೇಯಾಂಸ್ (12) ಎಂದು ಗುರುತಿಸಲಾಗಿದ್ದು, ಆರೋಪಿ ತಾಯಿಯ ಹೆಸರು ರೋಮಾ ಕುಮಾರಿ (32) ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಶಾಲಾ ಶಿಕ್ಷಕಿಯಾಗಿರುವ ರೋಮಾ ಕುಮಾರಿ, ತನ್ನ ಶಾಲೆಯ ಪ್ರಿನ್ಸಿಪಾಲ್ ನಿರ್ಮಲ್ ಪಾಸ್ವಾನ್ ಜೊತೆಗೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳು. ಗಂಡನೊಂದಿಗೆ ವೈವಾಹಿಕ ಸಂಬಂಧಗಳು ಸರಿಯಾಗಿರದೆ ಪ್ರಿನ್ಸಿಪಾಲ್‌ನತ್ತ ಆಕರ್ಷಿತಳಾಗಿದ್ದ ಈಕೆ, ನಿರಂತರವಾಗಿ ತನ್ನ ಮನೆಗೆ ಅವನಿಗೆ ಬರುವ ಅವಕಾಶ ಕಲ್ಪಿಸುತ್ತಿದ್ದಳು.

ಈ ಸಂಬಂಧವನ್ನು ಶ್ರೇಯಾಂಸ್ ವಿರೋಧಿಸುತ್ತಿದ್ದ. ತಾಯಿಯ ನಡೆಗೆ ಅಸಂತೋಷ ವ್ಯಕ್ತಪಡಿಸುತ್ತಿದ್ದ ಮಗ, ಈ ಸಂಬಂಧವನ್ನು ನಿಲ್ಲಿಸುವಂತೆ ಹಲವು ಬಾರಿ ಬೇಡಿಕೆ ಇಟ್ಟಿದ್ದಾನೆ. ಮಗನ ಈ ವಿರೋಧವೇ ಕೊನೆಗೂ ಆಕೆಯ ಕ್ರೂರತೆಯ ಹೊರಹೋಗುವಂತೆ ಮಾಡಿದೆ.

ಮಗನನ್ನು ಹಲ್ಲೆ ಮಾಡಿ ಹತ್ಯೆಗೈದ ರೋಮಾ ಕುಮಾರಿ, ಬಳಿಕ ಶವವನ್ನು ಕೋನಹಾರ್ ಸೇತುವೆ ಬಳಿ ಎಸೆದು ಬೆಂಕಿ ಹಚ್ಚಿದ್ದಾಳೆ. ಶವವು ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಂಕಾಸ್ಪದ ಸ್ಥಿತಿಯಲ್ಲಿ ಶವ ಪತ್ತೆಯಾಗುತ್ತಿದ್ದಂತೆ ಪೊಲೀಸರು ತನಿಖೆ ಕೈಗೊಂಡು, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಪಾಪಿ ತಾಯಿಯ ಈ ಕೃತ್ಯ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.

Related News

error: Content is protected !!