National

ಪಾಕ್ ಕ್ರಿಕೆಟಿಗ ರಜಾ ಹಸನ್ ಭಾರತ ಮೂಲದ ಪೂಜಾ ಬೊಮನ್ ಜೊತೆ ಎಂಗೇಜ್: ನ್ಯೂಯಾರ್ಕ್‌ನಲ್ಲಿ ಸೆಟಲ್

ಪಾಕಿಸ್ತಾನ ಕ್ರಿಕೆಟಿಗ ರಜಾ ಹಸನ್ ಭಾರತ ಮೂಲದ ಹಿಂದೂ ಯುವತಿ ಪೂಜಾ ಬೊಮನ್ ಜೊತೆ ನ್ಯೂಯಾರ್ಕ್‌ನಲ್ಲಿ ಸೆಟಲ್ ಆಗಿದ್ದು, ಇವರ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ರಜಾ ಹಸನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೂಜಾ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು, ತಮ್ಮಿಬ್ಬರ ಪ್ರೀತಿಯ ಕುರಿತ ಸಂತೋಷ ಹಂಚಿಕೊಂಡಿದ್ದಾರೆ.

ಪೂಜಾ ಬೊಮನ್ ಇಸ್ಲಾಂಗೆ ಮತಾಂತರ?
ವರದಿಗಳ ಪ್ರಕಾರ, ಪೂಜಾ ಬೊಮನ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಒಪ್ಪಿಕೊಂಡಿದ್ದಾಳೆ. 2024ರಲ್ಲಿ, ರಜಾ ಹಸನ್ ಮತ್ತು ಪೂಜಾ ಅವರ ನಿಶ್ಚಿತಾರ್ಥದ ಸುದ್ದಿ ಬಹಿರಂಗವಾಗಿತ್ತು. ನ್ಯೂಯಾರ್ಕ್‌ನಲ್ಲಿ ಅವರಿಬ್ಬರ ಪ್ರೇಮಾಂಕುರ ಹುಟ್ಟಿಕೊಂಡಿದ್ದು, ಇದೀಗ ಇಬ್ಬರೂ ಅಲ್ಲಿಯೇ ನೆಲೆಸಿದ್ದಾರೆ.

“ಇಂದು ನಾನು ಪೂಜಾ ಜೊತೆ ಎಂಗೇಜ್ ಆಗಿದ್ದೇನೆ. ನಾನು ನನ್ನ ಜೀವನದ ಪ್ರೀತಿಯನ್ನು ಎಂದೆಂದಿಗೂ ನನ್ನದಾಗಿರಬೇಕೆಂದು ಕೇಳಿದೆ, ಮತ್ತು ಅವಳು ಹೌದು ಎಂದು ಹೇಳಿದಳು! ಒಟ್ಟಿಗೆ ನಮ್ಮ ಪ್ರಯಾಣಕ್ಕಾಗಿ ಉತ್ಸುಕನಾಗಿದ್ದೇನೆ” ಎಂದು ರಜಾ ಹಸನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.

ರಜಾ ಹಸನ್ ಕ್ರಿಕೆಟ್ ವೃತ್ತಿಜೀವನ
2012ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಪಾಕಿಸ್ತಾನದ ಪರ ಅಖಾಡಕ್ಕಿಳಿದ ರಜಾ ಹಸನ್, 2014ರಲ್ಲಿ ಏಕದಿನ ಪಂದ್ಯವೊಂದರಲ್ಲೂ ಆಡಿದ್ದಾರೆ. ಅಲ್ಪಾವಧಿಯ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಅವರು ಒಟ್ಟು 10 ಟಿ20 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಮತ್ತು ಒಬ್ಬೇ ಒಂದು ಏಕದಿನ ಪಂದ್ಯದಲ್ಲಿ ಒಂದು ವಿಕೆಟ್ ಪಡೆದಿದ್ದಾರೆ. ನಂತರ ಅವರು ಪಾಕಿಸ್ತಾನ ತಂಡದಿಂದ ದೂರ ಉಳಿದಿದ್ದಾರೆ.

ಪಾಕ್ ಯುವಕರನ್ನು ಮದುವೆಯಾದ ಭಾರತೀಯರು
ಇದಕ್ಕೂ ಮೊದಲು, ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ 2010ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲೀಕ್ ಅವರನ್ನು ಮದುವೆಯಾಗಿದ್ದರು. ಆದರೆ 2024ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಸಿನ್ ಖಾನ್, ಭಾರತದ ನಟಿ ರೀನಾ ರಾಯ್ ಅವರನ್ನು ಮದುವೆಯಾಗಿದ್ದು, 1990ರಲ್ಲಿ ಇಬ್ಬರೂ ಬೇರ್ಪಟ್ಟರು. ಪಾಕ್ ಕ್ರಿಕೆಟಿಗ ಹಸನ್ ಅಲಿ ಸಹ 2019ರಲ್ಲಿ ಭಾರತ ಮೂಲದ ಸಮಿಯಾ ಅರ್ಜೂ ಅವರನ್ನು ಮದುವೆಯಾಗಿದ್ದರು.

ರಜಾ ಹಸನ್ ಮತ್ತು ಪೂಜಾ ಬೊಮನ್ ಅವರ ಸಂಬಂಧದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಮತ್ತು ಅವರ ವೈವಾಹಿಕ ಜೀವನ ಹೇಗಿರಲಿದೆ ಎಂಬ ಕುತೂಹಲವೂ ವ್ಯಕ್ತವಾಗುತ್ತಿದೆ.

ಭ್ರಷ್ಟರ ಬೇಟೆ

Recent Posts

ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಮತ್ತೊಂದು ಆರೋಪ: 2018 ರಿಂದ 2023 ರವರೆಗೆ ಮುಖ್ಯ ಶಿಕ್ಷಕಿಯ ಮೇಲೆ ಲೈಂಗಿಕ ದೌರ್ಜನ್ಯ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್…

7 hours ago

ರಾಜ್ಯದಲ್ಲಿ ಪಾರ್ಲೆ-ಜಿ ಉತ್ಪಾದನೆ ಸ್ಥಗಿತ, ಬಿಸ್ಕೆಟ್ ಅಭಾವದ ಆತಂಕ

Iran-Israel ಸಂಘರ್ಷದ ಪರೋಕ್ಷ ಪರಿಣಾಮವಾಗಿ ರಾಜ್ಯದಲ್ಲಿ ಬಿಸ್ಕೆಟ್ ಅಭಾವದ ಭೀತಿ ಎದುರಾಗಿದೆ. ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಬಳಸುವ Parle-G ಬಿಸ್ಕೆಟ್‌ಗಳ…

8 hours ago

ನವಲಗುಂದದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಮುಖ್ಯಶಿಕ್ಷಕ ಬಂಧನ

ಧಾರವಾಡ ಜಿಲ್ಲೆಯ Navalgund ತಾಲೂಕಿನ ಒಂದು ಗ್ರಾಮದಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯಶಿಕ್ಷಕನ ವಿರುದ್ಧ 10 ವರ್ಷದ…

20 hours ago

ಮೇಲಾಧಿಕಾರಿ ಕಿರುಕುಳ ಆರೋಪ: ಪಾವಗಡದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಆತ್ಮಹತ್ಯೆ

ತುಮಕೂರು ಜಿಲ್ಲೆಯ Pavagada ಪಟ್ಟಣದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಮೇಲಾಧಿಕಾರಿಗಳ ಕಿರುಕುಳದಿಂದ ಮನನೊಂದು ಅಧಿಕಾರಿಯೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು…

20 hours ago

14ರ ಬಾಲಕನಿಂದ ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭಿಣಿ? ವೈರಲ್ ವಿಡಿಯೋಗೆ ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. X ನಲ್ಲಿ ವೈರಲ್ ಆಗಿರುವ ಈ ವಿಡಿಯೋ…

20 hours ago

ಕೊನೆಗೂ 21 ದಿನಗಳ ಬಳಿಕ ಅಣುಸ್ಥಾವರದ ಮೇಲೆ ಅಮೆರಿಕ ದಾಳಿ! ಇರಾನ್ ಅಣು ಕೇಂದ್ರ ವಿಕಿರಣ ಸೋರಿಕೆ ಭೀತಿ ಹೆಚ್ಚಳ?

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ United States ಮತ್ತು Israel ಪಡೆಗಳು Iranನ ಅತ್ಯಂತ ಪ್ರಮುಖ ಪರಮಾಣು ಕೇಂದ್ರವಾದ Natanz…

20 hours ago