ಬೆಂಗಳೂರು: ಧರ್ಮಸ್ಥಳದಲ್ಲಿ ಪತ್ತೆಯಾಗಿರುವ ಪಾನ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸಂಬಂಧಿತ ದಾಖಲೆಗಳ ಮಾಲೀಕರ ಪರಿಚಯ ಈಗ ಬಹಿರಂಗವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಮೂಲದ ಸಿದ್ದಲಕ್ಷ್ಯಮ್ಮ ಎಂಬವರು ಈ ಕಾರ್ಡ್‌ಗಳ ಮಾಲಿಕತ್ವದ ಸಂಬಂಧ ತಮ್ಮ ಮಗ ಸುರೇಶ್ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.

ಸಿದ್ದಲಕ್ಷ್ಯಮ್ಮ ಪ್ರಕಾರ, ಅವರ ಪುತ್ರ ಸುರೇಶ್ ಸುಮಾರು ಐದು ತಿಂಗಳ ಹಿಂದೆ ಜಾಂಡಿಸ್‌ನಿಂದ ಮೃತಪಟ್ಟಿದ್ದ. “ನನಗೆ ಎಟಿಎಂ ಬಳಕೆಗಲ್ಲ. ನಾನು ಬಾಡಿಗೆ ಕಾರ್ಡ್ ಕೊಟ್ಟಿದ್ದೆ. ಅದನ್ನು ನನ್ನ ಮಗ ಸುರೇಶ್ ಬಳಸುತ್ತಿದ್ದ,” ಎಂದು ಅವರು ಸ್ಪಷ್ಟಪಡಿಸಿದರು.

ತಮ್ಮ ಪುತ್ರ ಧರ್ಮಸ್ಥಳಕ್ಕೆ ಹಿಂದೆಯೂ ಕೆಲವೊಮ್ಮೆ ತೆರಳಿದ್ದ ಸಂಗತಿಯನ್ನು ಸಿದ್ದಲಕ್ಷ್ಯಮ್ಮ ಹಂಚಿಕೊಂಡಿದ್ದಾರೆ. “ಪೊಲೀಸರು ಮೊನ್ನೆ ಬಂದು ನನ್ನ ಬಗ್ಗೆ ವಿಚಾರಿಸಿದರು. ನಾನು ಆಗ ಮನೆಯಲ್ಲಿ ಇರಲಿಲ್ಲ. ನಿನ್ನೆ ಮತ್ತೆ ಬಂದು ನನ್ನ ಫೋಟೋ ತೆಗೆದುಕೊಂಡು ಹೋದರು. ನಾವು ಕೆಲ ಸಮಯದ ಹಿಂದೆ ಪರ್ಸ್ ಕಳೆದುಕೊಂಡಿದ್ದೆವು. ಆದರೆ ಈ ಪರ್ಸ್ ಕಳೆವಿಕೆ ಪ್ರಕರಣಕ್ಕೂ, ಧರ್ಮಸ್ಥಳ ಶವ ಪತ್ತೆ ಪ್ರಕರಣಕ್ಕೂ ನಮ್ಮಿಗೆ ಯಾವುದೇ ಸಂಬಂಧವಿಲ್ಲ,” ಎಂದು ಅವರು ಹೇಳಿದರು.

ಮಗನ ಕುಡಿತದ ಸಮಸ್ಯೆಯೂ ಮನೆಯಲ್ಲಿನ ತೊಂದರೆಗಳಿಗೆ ಕಾರಣವಾಗಿತ್ತು ಎನ್ನುವಂತೆ ಅವರು ಹೇಳಿದ್ದಾರೆ. “ಸುರೇಶ್ ಮೂರು ವರ್ಷಗಳಿಂದ ನಮ್ಮ ಜೊತೆ ಇರಲಿಲ್ಲ. ಕುಡಿತ ಜಾಸ್ತಿಯಾಗಿತ್ತು. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ನಾನು ನಿಖರವಾಗಿ ಉತ್ತರ ನೀಡಿದ್ದೇನೆ,” ಎಂದು ಸಿದ್ದಲಕ್ಷ್ಯಮ್ಮ ಹೇಳಿದಾರೆ.

ಈ ಮಾಹಿತಿಯೊಂದಿಗೆ ಧರ್ಮಸ್ಥಳದಲ್ಲಿ ಪತ್ತೆಯಾದ ಶವ ಹಾಗೂ ಡಾಕ್ಯುಮೆಂಟ್‌ಗಳ ನಡುವಿನ ಸಂಪರ್ಕವನ್ನು ಪೊಲೀಸರು ಈಗ ಹೆಚ್ಚಿನ ನಿರೀಕ್ಷೆಯೊಂದಿಗೆ ತನಿಖೆ ಮುಂದುವರೆಸಿದ್ದಾರೆ.

Related News

error: Content is protected !!