ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ನೆತ್ರಾವತಿ ನದಿ ದಡದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂಬ ಹೇಳಿಕೆ ದೇಶ-ರಾಜ್ಯ ಮಟ್ಟದಲ್ಲಿ ದೊಡ್ಡ ಕುತೂಹಲ, ಚರ್ಚೆಗೆ ಕಾರಣವಾಗಿದ್ದ ‘ಬುರುಡೆ ಪ್ರಕರಣ’ ಇದೀಗ ತೀವ್ರ ತಿರುವು ಪಡೆದುಕೊಂಡಿದೆ.
ಕಳೆದ 15 ದಿನಗಳಿಂದ ನಡೆದ ಶೋಧ ಕಾರ್ಯಾಚರಣೆಯ ಬಳಿಕ, ಸಾಕ್ಷಿದಾರನ ವಿಚಾರಣೆಯ ವೇಳೆ ಆಘಾತಕಾರಿ ಸತ್ಯಗಳು ಹೊರಬಿದ್ದಿವೆ ಎಂದು ಮೂಲಗಳು ತಿಳಿಸಿವೆ.
ಶೋಧ ಕಾರ್ಯಕ್ಕೆ ವಿರಾಮ
ಸಾಕ್ಷಿದಾರ ತೋರಿಸಿದ್ದ 17 ಜಾಗಗಳಲ್ಲಿ ಕೇವಲ 2 ಜಾಗಗಳಲ್ಲಿ ಮಾತ್ರ ಮಾನವ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (SIT) ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಬಳಿಕ, ಕಳೆದ ಎರಡು ದಿನಗಳಿಂದ ಸಾಕ್ಷಿದಾರನನ್ನು ತೀವ್ರ ವಿಚಾರಣೆ ನಡೆಸಲಾಗಿದೆ.
ಸಾಕ್ಷಿದಾರನ ಹೊಸ ಹೇಳಿಕೆ
ವಿಚಾರಣೆ ವೇಳೆ ಆತ ಹೀಗೆ ಹೇಳಿದ್ದಾನೆ ಎಂದು ವರದಿಯಾಗಿದೆ:
“2014ರ ನಂತರ ನಾನು ತಮಿಳುನಾಡಿನಲ್ಲಿ ವಾಸಿಸುತ್ತಿದ್ದೆ. 2023ರಲ್ಲಿ ಒಂದು ಗುಂಪು ನನ್ನನ್ನು ಸಂಪರ್ಕಿಸಿ, ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಬಗ್ಗೆ ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯಿಸಿತು.”
“ನಾನು ಕಾನೂನು ಪ್ರಕಾರವೇ ಶವಗಳನ್ನು ಹೂತಿದ್ದೇನೆ ಎಂದು ಹೇಳಿದ್ದರೂ, ಆ ಗುಂಪು ನನ್ನ ಮೇಲೆ ಒತ್ತಡ ಹೇರಿತು.”
“2023ರ ಡಿಸೆಂಬರ್‌ನಲ್ಲಿ ಆ ಗುಂಪು ನನ್ನನ್ನು ತಮಿಳುನಾಡಿನಿಂದ ಕರೆದುಕೊಂಡು ಬಂದು, ಪೊಲೀಸರ ಹಾಗೂ ನ್ಯಾಯಾಲಯದ ಮುಂದೆ ನಿರ್ದಿಷ್ಟ ಹೇಳಿಕೆ ನೀಡುವಂತೆ ಒತ್ತಾಯಿಸಿತು.”
ಸುಜಾತ ಭಟ್ ಪಾತ್ರ
ಸಾಕ್ಷಿದಾರನ ಪ್ರಕಾರ, ದೂರು ನೀಡಿದ ಮಹಿಳೆ ಸುಜಾತ ಭಟ್ ತಾನಗೆ ಧೈರ್ಯ ತುಂಬಿದ ಕಾರಣವೇ ಪೊಲೀಸರ ಹಾಗೂ ನ್ಯಾಯಾಲಯದ ಮುಂದೆ ಬಂದು ನಿಜ ಹೇಳಲು ಸಾಧ್ಯವಾಯಿತು. “ಅವರೆ ನನಗೆ ಧೈರ್ಯ ನೀಡದಿದ್ದರೆ, ನಾನು ಬರುವುದೇ ಆಗುತ್ತಿರಲಿಲ್ಲ,” ಎಂದು ಆತ ಬಾಯ್ಬಿಟ್ಟಿದ್ದಾನೆ.
ಗುಂಪಿನ ಒತ್ತಡ
ಸಾಕ್ಷಿದಾರ ಹೇಳುವಂತೆ, ಆ ಗುಂಪಿನ ಮೂವರು ಪ್ರತಿನಿತ್ಯ ಪೊಲೀಸರ ಮುಂದೆ ಏನು ಹೇಳಬೇಕು ಎಂದು ತನ್ನನ್ನು ತರಬೇತಿ ಮಾಡಿಸುತ್ತಿದ್ದರು. ಅದೇ ರೀತಿಯಲ್ಲಿ ಆತ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಎಸ್‌ಐಟಿ ತನಿಖೆ ಮುಂದುವರಿಕೆ
ಸಾಕ್ಷಿದಾರನ ಹೇಳಿಕೆಗಳನ್ನು ಎಸ್‌ಐಟಿ ಅಧಿಕಾರಿಗಳು ವಿಡಿಯೋ ರೂಪದಲ್ಲಿ ದಾಖಲಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ವಿಚಾರಣೆ ನಡೆಯುತ್ತಿದೆ.
ಹೀಗಾಗಿ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ನಿಜ-ಸುಳ್ಳಿನ ಬಲೆ ತೆರೆಯುವ ಕೆಲಸ ಎಸ್‌ಐಟಿ ಮುಂದುವರಿಸಿದೆ.
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…
ಚಿತ್ರದುರ್ಗ: ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮದ ಹತ್ತಿರ ನಡೆದ ವಿಶಿಷ್ಟ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಾಧುಗಳ ವೇಷ ತಾಳಿ ರೈತರ…
ಭೋಪಾಲ್ : ಪ್ರೀತಿಯನ್ನು ನಿರಾಕರಿಸಿದ ಶಿಕ್ಷಕಿಯ ಮೇಲೆ ಹದಿಹರೆಯದ ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ನರಸಿಂಹಪುರದಲ್ಲಿ…