Latest

ಕೊಲೆಯಾದ ರಹಿಮಾನ್‌ ಅವರ ಅಂತಿಮ ಸಂಸ್ಕಾರ ನಡೆಯಿತು; ಪೊಲೀಸ್ ಬಂದೋಬಸ್ತ್ ಕಠಿಣ

ಮಂಗಳೂರು ನಗರದಲ್ಲಿ ನಿನ್ನೆ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಅಬ್ದುಲ್ ರಹಿಮಾನ್‌ ಯಾನೆ ಮೋನು ಅವರ ಅಂತಿಮ ಸಂಸ್ಕಾರ ಇಂದು  ಬೆಳಗ್ಗೆ ಕಠಿಣ ಪೊಲೀಸ್ ಬಂದೋಬಸ್ತ್ ನಡುವೆಯೇ ನೆರವೇರಿತು.

ಮೃತದೇಹವನ್ನು ಮಂಗಳೂರಿನ ಕುತ್ತಾರ್ ಪ್ರದೇಶದಲ್ಲಿರುವ ಮದನಿ ನಗರ ಮಸೀದಿಗೆ ಕರೆತರಲಾಗಿದ್ದು, ಅಲ್ಲಿ ಮಯ್ಯತ್ ಸ್ನಾನ ನೆರವೇರಿಸಲಾಯಿತು. ಬಳಿಕ ಮಸೀದಿಯಲ್ಲಿಯೇ ಮಯ್ಯತ್ ನಮಾಝ್ ನೆರವೇರಿತು. ನಮಾಝ್  ಬಳಿಕ ಮೃತದೇಹವನ್ನು ಪೊಲೀಸ್ ಭದ್ರತೆಯೊಂದಿಗೆ ಕೊಳತ್ತಮಜಲಿಗೆ ಸಾಗಿಸಲಾಯಿತು.

ಕುತ್ತಾರ್, ತೊಕ್ಕೊಟ್ಟು, ಪಂಪ್‌ವೆಲ್‌, ಮಿತ್ತಬೈಲ್ ಮಾರ್ಗವಾಗಿ ಮೃತದೇಹವನ್ನು ಕೊಳತ್ತಮಜಲಿಯಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಯಿತು. ಬಳಿಕ ಅಲ್ಲಿನ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ಆವರಣದಲ್ಲಿ ದಫನ ವಿಧಿ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್‌ ಹಾಗೂ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ಬಂದೋಬಸ್ತ್ ನಿರ್ವಹಿಸಿದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

nazeer ahamad

Recent Posts

ಮನೆ ಬಳಕೆಗೆ ಸಿಗದ ಗೃಹಬಳಕೆಯ ಸಿಲಿಂಡರ್‌ಗಳು ಹೋಟೆಲ್‌ಗಳಲ್ಲಿ , ಅಧಿಕಾರಿಗಳ ನಿರ್ಲಕ್ಷ್ಯ

ಮುಂಡಗೋಡ: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಅಮೇರಿಕಾ ಉದ್ವಿಗ್ನತೆ (ಯುದ್ಧ) ಪರಿಣಾಮವಾಗಿ ಇಂಧನ ಕ್ಷೇತ್ರದಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯ…

1 hour ago

ಕರ್ನಾಟಕ ಹೈಕೋರ್ಟ್‌ನಲ್ಲಿ 70 ಹುದ್ದೆಗಳು: ಆಸಕ್ತರಿಗೆ ಉದ್ಯೋಗದ ಸುವರ್ಣಾವಕಾಶ

ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…

7 hours ago

ಕೋರ್ಟ್ ಉದ್ಯೋಗದ ಹೆಸರಿನಲ್ಲಿ ಕೋಟಿ ಕೋಟಿ ಮೋಸ: ಬೆಂಗಳೂರಿನಲ್ಲಿ ಫ್ರಾಡ್ ದಂಪತಿ ಬಂಧನ

ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…

7 hours ago

ಗಂಡ ಬಿಟ್ಟ ಮಹಿಳೆಯರೇ ಇವನ ಟಾರ್ಗೆಟ್; 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ..!

ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…

7 hours ago

ಗಂಡನಿಲ್ಲದ ವೇಳೆ ಬಾಡಿಗೆಗೆ ಇದ್ದ ಯುವಕನ ಜೊತೆ ಸರಸ; ಅಡ್ಡಿಯಾದ ಅತ್ತೆಯನ್ನು ಕೊಂದ ಸೊಸೆ

ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…

7 hours ago

ಗೌರಿಬಿದನೂರಿನಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಸಾವು, ಪುತ್ರನಿಗೆ ಗಾಯ

ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…

8 hours ago