ಮೂಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಎನ್.ಡೀ. (ಜಾರಿ ನಿರ್ದೇಶನಾಲಯ) ಅವರು ಅಕ್ರಮ ಹಣ ವರ್ಗಾವಣೆಯ ಯತ್ನದಲ್ಲಿ ಭಾಗಿಯಾಗಿದ್ದಾರೆಂದು ಹೇಳಿರುವಂತೆ ಬಹಿರಂಗಗೊಂಡಿದೆ. ಇ.ಡಿ. ಅವರ ತಾತ್ಕಾಲಿಕ ಸ್ಥಿರಾಸ್ತಿ ಜಪ್ತಿ ಆದೇಶದಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.
ಮುಡಾ ಜಮೀನನ್ನು ರೂ. 3,24,700 ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಆದರೂ, ಈ ಜಮೀನನ್ನು ಕಾನೂನುಬಾಹಿರವಾಗಿ ಡಿನೋಟಿಫಿಕೇಷನ್ ಮಾಡಿ, ರಾಜಕೀಯ ಪ್ರಭಾವ ಬಳಸಿ ಭೂಮಿಯ ಪರಿವರ್ತನೆಗೆ ಕಾರಣವಾಗುವಂತಾ ತಪ್ಪು ಮಾಹಿತಿ ಆಧರಿಸಿದ ವರದಿ ತಯಾರಿಸಿಕೊಳ್ಳಲಾಗಿದೆ ಎಂದು ಇ.ಡಿ. ಹೇಳಿದೆ. ಈ ಪ್ರಕ್ರಿಯೆಯಲ್ಲಿ, ಸಿಎಂ ಸಿದ್ದರಾಮಯ್ಯ ಅವರ ಸಹೋದ್ಯೋಗಿ ಬಿ.ಎಂ. ಮಲ್ಲಿಕಾರ್ಜುನಸ್ವಾಮಿ ಈ ಜಮೀನನ್ನು ಕೃಷಿ ಜಮೀನು ಎಂದು ಖರೀದಿಸಿದ್ದಾರೆ.
ಈ ವೇಳೆ, ಮುಡಾ ಇದನ್ನು ಬಡವಣಿಗೆ ಮೂಲಕ ಅಭಿವೃದ್ಧಿಪಡಿಸಿ, ನಿವೇಶನಗಳನ್ನು ಹಂಚಿಕೆಗೆ ಮುಂದಾಗಿದೆ. ಆದರೆ, ಇದರಲ್ಲಿ ಯಾವುದೇ ಕಾನೂನು ತಕರಾರು ಉದ್ಭವಿಸಿರಲಿಲ್ಲ. ನಂತರ, ಪ್ರಭಾವ ಪಡಿಸುವ ಮುಖಾಂತರ, ಮುಡಾ ಈ ನವೀನ ನಿವೇಶನಗಳನ್ನು 56 ಕೋಟಿಯಷ್ಟೆ ಬೆಲೆಯುಳ್ಳ ಸೈಟ್ ಗಳನ್ನು ಪರಿಹಾರವಾಗಿ ಪಡೆದಿದೆ ಎಂದು ಇ.ಡಿ. ಅಭಿಪ್ರಾಯಪಟ್ಟಿದೆ.
ಇ.ಡಿ.ಯ ಆದೇಶವು ಹೇಳಿದಂತೆ, ಮುಡಾ ಯೋಜನೆಯಲ್ಲಿ ಪಾಲ್ಗೊಂಡಂತೆ, ಈ ಪ್ರಕ್ರಿಯೆಯಲ್ಲಿ ಹಿಂದೆ ಮುಡಾ ಆಯುಕ್ತರಾಗಿದ್ದ ನಟೇಶ್ ಅವರು ಶಾಮೀಲಾಗಿದ್ದರು. ಪಿಎಂಎಲ್ಏ ಅಡಿ ತನಿಖೆ ಆರಂಭಿಸಿದ ನಂತರ, ಸಿಎಂ ಅವರ ಪತ್ನಿ ಬಿ.ಎಂ. ಪಾರ್ವತಿ ಅವರು 2024 ಅಕ್ಟೋಬರ್ 1 ರಂದು ಮುಡಾಗೆ 14 ನಿವೇಶನಗಳನ್ನು ಹಿಂದಿರುಗಿಸಿದರೂ, ಅಕ್ರಮ ಹಣ ವರ್ಗಾವಣೆಯ ಪ್ರಯತ್ನಗಳು ಸಾಗಿದವು ಎಂದು ಮುಂದುವರೆದ ವಿಚಾರಣೆ ಹೇಳುತ್ತಿದೆ.
ಇ.ಡಿ. ಅವರ ತಾತ್ಕಾಲಿಕ ಜಪ್ತಿ ಆದೇಶದಲ್ಲಿ, ಸಿದ್ದರಾಮಯ್ಯ, ಪಾರ್ವತಿ, ಮಲ್ಲಿಕಾರ್ಜುನಸ್ವಾಮಿ, ದೇವರಾಜು ಮತ್ತು ಮುಡಾ ಅಧಿಕಾರಿಗಳ ಜೊತೆಗೆ ವ್ಯವಹಾರಸ್ಥರು ಹಾಗೂ ಪ್ರಭಾವಿಗಳೂ ಈ ಅಕ್ರಮ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ…
ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…
ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…
ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…