Latest

ಗ್ರಾ.ಪಂ ಆಡಳಿತದಲ್ಲಿ ಪತ್ನಿಯ ಬದಲು ಪತಿಯ ಹಸ್ತಕ್ಷೇಪದಿಂದ ಮಾನಸಿಕ ಕಿರುಕುಳ; ಗ್ರಾ.ಪಂ ಸದಸ್ಯೆ ತಾಲೂಕು ಪಂಚಾಯತ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ.

ಕೊಟ್ಟೂರು:- ಅಂಬಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಹೊಳಲಮ್ಮ ನವರ ಪತಿ ಹನುಮಂತಪ್ಪ ಎಂಬುವವರ ಅಧಿಕಾರದ ಹಸ್ತಕ್ಷೇಪದಿಂದಾಗಿ ನನಗೆ ಮಾನಸಿಕ ಕಿರುಕುಳ ಉಂಟಾಗುತ್ತಿದೆ ಹಾಗೂ ಅನುದಾನದಲ್ಲಿ ತಾರತಮ್ಯವಾಗುತ್ತಿದೆ ಎಂದು ಕುಡಿತಿನಮಗ್ಗಿ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯೆ ಲಲಿತ ಕಾಳಚಾರಿ ಯವರು ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದ ಆವರಣದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಕುರಿತು ಮಾತನಾಡಿದ ಅವರು
ನನಗೆ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಯಾವುದೇ ಸಭೆಯಲ್ಲಿ ಆಗಲಿ ಅಥವಾ ಲೆಕ್ಕ ಪುಸ್ತಕದ ಬಗ್ಗೆ ಆಗಲಿ ಸರಿಯಾದ ಮಾಹಿತಿ ನೀಡುತ್ತಿಲ್ಲ ಇದರ ಬಗ್ಗೆ ಕೇಳಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯವರ ಗಂಡ ಹನುಮಂತಪ್ಪ ನವರು ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿ ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಬೆದರಿಸುವ ಪ್ರಯತ್ನ ಮಾಡುತ್ತಾರೆ.ಇದರ ಸಂಬಂಧ ನನಗೆ ಯಾವುದೇ ಅನುದಾನ ನೀಡುತ್ತಿಲ್ಲ ಈಗಾದರೆ ನಾನು ವಾರ್ಡಿನಲ್ಲಿ ಹೇಗೆ ಅಭಿವೃದ್ಧಿ ಮಾಡಲು ಸಾಧ್ಯ ಹಾಗೂ ಹಿಂದೆ ಮಾಡಿರುವ ಕೆಲಸಗಳ ಬಿಲ್ ಗಳನ್ನು ಸಹ ತಡೆಹಿಡಿದು ಮಾನಸಿಕವಾಗಿ ಕುಗ್ಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಇದರಿಂದಾಗಿ ನನಗೆ ನ್ಯಾಯ ಬೇಕೇ ಬೇಕೆಂದು ಈ ಸತ್ಯಾಗ್ರಹವನ್ನು ನಡೆಸಲು ಮುಂದಾಗಿದ್ದೇನೆ ಎಂದು ಕಣ್ಣೀರು ಹಾಕುತ್ತಾ ಹೇಳಿದರು.

ನಿನ್ನೆ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಉನ್ನತ ಅಧಿಕಾರಿಗಳು, ರಾಜಕೀಯ ನಾಯಕರು, ಮಹಿಳೆಯರು ಮುಖ್ಯವಾಹಿನಿಗೆ ಬರಬೇಕೆಂದು ಬರೀ ಟೊಳ್ಳು ಮಾತನಾಡಿದರೆ ಸಾಲದು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡವರನ್ನು ಸರಿ ಸಮಾನ ಅವಕಾಶಗಳು ದೊರಕಿಸಬೇಕು ಈ ರೀತಿ ಒಬ್ಬ ಗ್ರಾ.ಪಂ. ಮಹಿಳಾ ಸದಸ್ಯೆಯನ್ನು ದೌರ್ಜನ್ಯವಾಗಿ ನಡೆಸಿಕೊಂಡರೆ ಸರಿಯೇ ಮುಂದೆ ಈ ಘಟನೆಗಳು ಕಂಡು ಬಂದರೆ ಪ್ರತ್ಯಕ್ಷವಾಗಿ ಇವರ ಹೋರಾಟಕ್ಕೆ ನಮ್ಮ ಸಂಘಟನೆಯಿಂದ ಬೆಂಬಲ ಸೂಚಿಸಲಾಗುವುದು ಎಂದು ವಕೀಲ ಹನುಮಂತಪ್ಪ ಹಾಗೂ ರೈತ ಮುಖಂಡ ಗುಡಿಯಾರ ಮಲ್ಲಿಕಾರ್ಜುನ ನವರು ತಿಳಿಸಿದರು.

ನಂತರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆನಂದ್ ಕುಮಾರ್ ರವರು ಅಂಬಳಿ ಗ್ರಾಮ ಪಂಚಾಯಿತಿ ಪಿ ಡಿ ಒ ರವರನ್ನು ಸ್ಥಳಕ್ಕೆ ಕರೆಸಿ ವಾಸ್ತವ ಬಗ್ಗೆ ಚರ್ಚಿಸಿ ಇನ್ನು ಮುಂದೆ ಸಾಮಾನ್ಯ ಸಭೆಯಲ್ಲಿ ಪೊಲೀಸ್ ಸಹಾಯ ಪಡೆದು ಸಭೆಯನ್ನು ಮುಂದುವರೆಸಬೇಕು ಸಭೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರು ಮಾತ್ರ ಪರಿಗಣಿಸಬೇಕು ಬೇರೆಯವರು ಸಭೆಯಲ್ಲಿ ಹಸ್ತಕ್ಷೇಪ ಮಾಡದಂತೆ ಸಭೆಯನ್ನು ನಡೆಸಬೇಕೆಂದು ಹೇಳಿದರು ಹಾಗೂ ಸದಸ್ಯೆ ಲಲಿತಮ್ಮ ನವರು ಮಾಡಿರುವ ಕೆಲಸ ಅಧಿಕೃತ ದಾಖಲೆಗಳನ್ನು ಪಡೆದು ಬೇಗನೆ ಬಿಲ್ ಮಾಡುವಂತೆ ಸೂಚಿಸಿದರು, ಅಧ್ಯಕ್ಷರನ್ನು ಸದಸ್ಯರು ಬಿಟ್ಟು ಅವರ ಸಂಬಂಧಿಕರು ಅಧಿಕಾರದಲ್ಲಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಬೇಕು ಇದು ಏನಾದರು ಮುಂದುವರೆದರೆ ಪೊಲೀಸ್ ದೂರು ನೀಡಿ ಎಂದು ಖಡಕ್ ಸೂಚನೆ ನೀಡಿದರು. ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿ ಧರಣಿಯನ್ನು ಹಿಂಪಡೆಯುವಂತೆ ಹೇಳಿದರು ಮಾನ್ಯ ಅಧಿಕಾರಿಗಳು ಸ್ಪಂದಿಸಿ ಧರಣಿಯನ್ನು ಹಿಂಪಡೆಯಲಾಯಿತು.

ವರದಿ:- ಮಣಿಕಂಠ. ಬಿ

ಭ್ರಷ್ಟರ ಬೇಟೆ

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

1 week ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago