ಯಾದಗಿರಿ: ಪ್ರಯಾಣಿಕರ ಪಯಣಕ್ಕೆ ಅವಶ್ಯಕವಾದ ಟಿಕೆಟ್ ನೀಡದೆ, ಸಾರ್ವಜನಿಕ ಸೇವೆಯ ಹೊಣೆಗಾರಿಕೆಯನ್ನು ಕಡೆಗಣಿಸಿದ ಘಟನೆಯೊಂದು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ಟಿಕೆಟ್ ಕೌಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಮಹೇಶ್‌ ಅವರು ತಮ್ಮ ಕರ್ತವ್ಯದ ಸಮಯದಲ್ಲಿ ಮೊಬೈಲ್‌ನಲ್ಲಿ ನಿರಂತರವಾಗಿ ಮಾತನಾಡುತ್ತಾ, ಪ್ರಯಾಣಿಕರನ್ನು ಗಂಟೆಗಟ್ಟಲೆ ಕಾಯಿಸಬಿಟ್ಟಿರುವುದು ಕಂಡುಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ನೂರಾರು ಜನ ಸರತಿ ಸಾಲಿನಲ್ಲಿ ನಿಂತು ಟಿಕೆಟ್‌ಗಾಗಿ ನಿರೀಕ್ಷಿಸುತ್ತಿದ್ದ ಸಂದರ್ಭ, ಕೋಪಗೊಂಡ ಪ್ರಯಾಣಿಕನೊಬ್ಬ ಈ ದೃಶ್ಯವನ್ನು ವಿಡಿಯೋದಲ್ಲಿ ದಾಖಲೆ ಮಾಡಿಕೊಂಡು ನೇರವಾಗಿ ಸ್ಟೇಷನ್ ಮಾಸ್ಟರ್‌ ಕಳುಹಿಸುತ್ತಾರೆ. ಮಾಹಿತಿ ಲಭ್ಯವಾಗುತ್ತಿದ್ದಂತೆಯೇ, ಯಾದಗಿರಿ ಸ್ಟೇಷನ್ ವ್ಯವಸ್ಥಾಪಕ ಭಾಗಿರಥ ಮೀನಾ ಕೂಡಲೇ ಸ್ಪಂದನೆ ನೀಡಿ, ಸಂಬಂಧಪಟ್ಟ ವರದಿಯನ್ನು ಗುಂತಕಲ್ ರೈಲ್ವೆ ವಿಭಾಗದ ಉನ್ನತ ಅಧಿಕಾರಿಗಳಿಗೆ ರವಾನಿಸುತ್ತಾರೆ.

ಘಟನೆಯ ಗಂಭೀರತೆಯನ್ನು ಮನಗಂಡ ಗುಂತಕಲ್ ವಿಭಾಗದ ಅಧಿಕಾರಿಗಳು ತಕ್ಷಣವೇ ಮಹೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಘಟನೆ ನೈತಿಕ ಜವಾಬ್ದಾರಿಯ ಕೊರತೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ನಿರ್ಲಕ್ಷ್ಯದ ಉದಾಹರಣೆಯಾಗಿ ರೈಲ್ವೆ ಇಲಾಖೆಯ ಒಳಪರಿಶೋಧನೆಯ ಕೇದ್ರಬಿಂದು ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ರೈಲ್ವೆ ಇಲಾಖೆ, ಈ ರೀತಿಯ ಉಲ್ಲಂಘನೆಗಳನ್ನು ಲಘುವಾಗಿ ತೆಗೆದುಕೊಳ್ಳದೆ, ಭದ್ರತೆ ಹಾಗೂ ಸಮಯಪಾಲನೆಯತ್ತ ಹೆಚ್ಚಿನ ಗಮನಹರಿಸುವ ನಿರೀಕ್ಷೆಯಿದೆ.

***

“ಭ್ರಷ್ಟರ ಬೇಟೆ” ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088070392

Related News

error: Content is protected !!