Crime

ಅನೈತಿಕ ಸಂಬಂಧಕ್ಕೆ ವ್ಯಕ್ತಿ ಕೊಲೆ, 24 ಗಂಟೆಗಳಲ್ಲಿ ನಾಲ್ವರು ಆರೋಪಿಗಳ ಬಂಧನ.

ಕೋಲಾರ (ಜಿ) ಮುಳಬಾಗಿಲು: ದಿನಾಂಕ: 25/01/2025 ರಂದು ಶ್ರೀ ನಿತೀಶ್ ಸಿಂಗ್ ಬಿನ್ ಗೋಪಾಲ್ ಸಿಂಗ್ ಮುಳಬಾಗಲು ತಾಲ್ಲೂಕು ಮಲ್ಲಸಂದ್ರ ಗ್ರಾಮದಲ್ಲಿರುವ ಬಿ.ಎಂ.ಸಿ. ಗೌಡ ಕನ್ಸ್ ಟ್ರಕ್ಷನ್ಸ್ ನಲ್ಲಿ ಹೆಲ್ಪರ್ ಕೆಲಸ ಮಾಡುತ್ತಿದ್ದು, ತಮ್ಮ ಜೊತೆ ಉಮೇಶ್ ಕುಮಾರ್ ಸಿಂಗ್, ಮುಖೇಶ್ ಕುಮಾರ್ ಯಾದವ್, ಬಿಕ್ರಮ್ ಕುಮಾರ್ ಸಿಂಗ್ ರವರು ಒಟ್ಟಾಗಿ ಬಿ.ಎಂ.ಸಿ. ಗೌಡ ಕನ್ಸ್ ಟ್ರಕ್ಷನ್ಸ್ ಮಲ್ಲಸಂದ್ರ ಗ್ರಾಮದಲ್ಲಿ ಕ್ವಾಟ್ರಸ್ ನಲ್ಲಿ ವಾಸವಾಗಿದ್ದು, ತಮ್ಮ ಪಕ್ಕದ ರೂಮಿನಲ್ಲಿ ಸುರೇಶ್ ಕುಮಾರ್ ಹಾಗೂ ಇತರೆ ಸುಮಾರು ಕುಟುಂಬಗಳು ಸಹ ವಾಸವಾಗಿದ್ದು ದಿನಾಂಕ 14/01/2025 ರಂದು ಉಮೇಶ್ ಕುಮಾರ್ ಸಿಂಗ್ ರವರ ಪರಿಚಿತ ಕೌಲಾಸ್ ಪಾಲ್ ಅಲಿಯಾಸ್ ಕೌಲಾನ್ ಪಾಲ್ ಬಿನ್ ಹೇಮಚಂದ್ ಪಾಲ್, 35ವರ್ಷ, ಪೂವಪೋಕಾ ಗ್ರಾಮ ಮತ್ತು ಅಂಚೆ, ಮಯೂರ್ಬಾನ್ ಜಿಲ್ಲೆ, ಓರಿಸ್ಸಾ ರಾಜ್ಯದವನಾಗಿದ್ದು ಇವನ ಹೆಂಡತಿ ಶಿವಾನಿ ಅಲಿಯಾಸ್ ಮಿಲಿ ಪಾಲ್ ಇಬ್ಬರು ತಾವಿದ್ದ ಕಂಪನಿಗಯಲ್ಲಿ ಕೆಲಸಕ್ಕೆ ಬಂದು ತಮ್ಮ ಪಕ್ಕದ ಕ್ವಾಟ್ರಸ್ ನಲ್ಲಿ ವಾಸವಾಗಿದ್ದು, ಈ ಪರಿಚಯದ ಮೇಲೆ ಉಮೇಶ್ ಕುಮಾರ್ ಸಿಂಗ್ ಆಗಾಗ ಅವರ ಮನೆಗೆ ಹೋಗಿ ತರಕಾರಿಗಳನ್ನು ತೆಗೆದುಕೊಂಡು ಬರುತ್ತಿದ್ದಾಗ, ಮೂರು ದಿನಗಳ ಹಿಂದೆ ಕೌಲಾಸ್ ಪಾಲ್ ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಭಂದ ಇಟ್ಟುಕೊಂಡಿದ್ದೀಯಾ ಎಂದು ಉಮೇಶ್ ಕುಮಾರ್ ಸಿಂಗ್ ಮೇಲೆ ಜಗಳ ಮಾಡುತ್ತಿದ್ದು, ನಂತರ ತಾವು ಜಗಳ ಬಿಡಿಸಿ ಸಮಾಧಾನ ಪಡಿಸಿದ್ದರು. ಇದೇ ವಿಚಾರದಲ್ಲಿ ದಿನಾಂಕ:23/01/2025 ರಂದು ರಾತ್ರಿ ಸುಮಾರು 8.00 ಗಂಟೆ ಸಮಯದಲ್ಲಿ ಉಮೇಶ್ ಕುಮಾರ್ ಸಿಂಗ್ ಮತ್ತು ಕೌಲಾನ್ ಪಾಲ್ ಅಲಿಯಾಸ್ ಕೈಲಾಸ್ ಪಾಲ್ ರವರಿಬ್ಬರು ಜಗಳ ಮಾಡಿಕೊಂಡಿದ್ದು, ಮತ್ತೂಮ್ಮೆ ಸಮಾದಾನ ಪಡಿಸಿದರು. ನಂತರ ದಿನಾಂಕ 24/01/2025 ರಂದು ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ಸುರೇಶ್ ಕುಮಾರ್ ಬಿನ್ ಶಂಕರ್ ಮಂಡಲ್ ರವರು ತಮ್ಮ ರೂಮಿಗೆ ಬಂದು ಮಾಲೀಕರ ತಮ್ಮನಾದ ನಾರಾಯಣಗೌಡರ ಮೊಬೈಲ್ ನಿಂದ ತನ್ನ ಮೊಬೈಲ್ ಗೆ ಫೋನ್ ಮಾಡಿ ತಮ್ಮ ಫ್ಯಾಕ್ಟರಿ ಇರುವ ಎನ್ ಹೆಚ್ – 234 ರಸ್ತೆಯಲ್ಲಿ ಉಮೇಶ್ ಕುಮಾರ್ ಸಿಂಗ್ ಸತ್ತುಬಿದ್ದಿರುವುದಾಗಿ ತಿಳಿಸಿದರು. ನಂತರ ತಾವೆಲ್ಲರು ಸ್ಥಳಕ್ಕೆ ಹೋಗಿ ನೋಡಿದಾಗ ಉಮೇಶ್ ಕಮಾರ್ ಸಿಂಗ್ ನ ತಲೆಗೆ ಗಾಯವಾಗಿ ಮೆದುಳು ಹೊರಗಡೆ ಬಂದು ಸತ್ತಿರುವುದನ್ನು ಕಂಡು, ತಮ್ಮ ಸಹ ಕೆಲಸಗಾರರಾದ ಸತ್ಯಂ, ಮತ್ತು ಸುರೇಶ್ ಕುಮಾ‌ರ್ ರವರನ್ನು ವಿಚಾರಿಸಿದಾಗ ಕೌಲಾನ್ ಪಾಲ್ ಅಲಿಯಾಸ್ ಕೈಲಾಸ್ ಪಾಲ್ ರವರ ಮನೆಯಿಂದ ಉಮೇಶ್ ಕುಮಾರ್ ಸಿಂಗ್ ಕಿರುಚಾಟದ ಶಬ್ದ ಕೇಳಿಸಿತು, ಉಮೇಶ್ ಕುಮಾರ್ ಸಿಂಗ್ ಅನ್ನು ಕೈಲಾಸ್ ಪಾಲ್ ರವರ ಹೆಂಡತಿಯೊಂದಿಗೆ ಅನೈತಿಕ ಸಂಭಂದ ಇಟ್ಟುಕೊಂಡಿರುವ ವಿಚಾರವನ್ನು ಕೈಲಾಸ್ ಪಾಲ್ ರವರೆ ಸ್ವತಃ ಸಹ ಕೆಲಸಗಾರರ ಬಳಿ ಹೇಳಿಕೊಂಡಿರುವುದಾಗಿ ತಿಳಿಸಿದ್ದಾರೆ. ಉಮೇಶ್ ಕುಮಾರ್ ಸಿಂಗ್ ಗೆ ಒಂದು ಗತಿಕಾಣಿಸುವ ಉದ್ದೇಶದಿಂದ ಕೈಲಾಸ್ ಪಾಲ್ ರವರು ಆತನ ಹೆಂಡತಿ ಮತ್ತು ಇತರರ ಸಹಾಯದಿಂದ ಯೋಜನೆ ರೂಪಿಸಿಕೊಂಡು ಉಮೇಶ್ ಕುಮಾರ್ ಸಿಂಗ್ ಅನ್ನು ಕೈಲಾಸ್ ಸಿಂಗ್ ಹೆಂಡತಿ ಶಿವಾನಿ ಅಲಿಯಾಸ್ ಬಿಲಿ ರವರ ಸಹಾಯದಿಂದ ಕರೆಸಿಕೊಂಡು ಕಂಪನಿಯ ಒಳಗೆ ಬರುವ ರಸ್ತೆಯಲ್ಲಿ, ಕೈಲಾಸ್ ಪಾಲ್ ಆತನ ಹೆಂಡತಿ ಹಾಗೂ ಇತರರು ಸೇರಿಕೊಂಡು ಯಾವುದೋ ಆಯುದಗಳಿಂದ ಉಮೇಶ್ ಕುಮಾರ್ ಸಿಂಗ್ ನ ತಲೆಗೆ ಬಲವಾಗಿ ಹೊಡೆದು ಸಾಯಿಸಿ, ಕೌಲಾನ್ ಪಾಲ್ ಅಲಿಯಾಸ್ ಕೈಲಾಸ್ ಪಾಲ್ ಮತ್ತು ಆತನ ಹೆಂಡತಿ ಶಿವಾನಿ ಅಲಿಯಾಸ್ ಮಿಲಿ ಹಾಗೂ ಇತರರು ಕೊಲೆಯ ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಉಮೇಶ್ ಕುಮಾರ್ ಸಿಂಗ್ ಮೃತ ದೇಹವನ್ನು ಪ್ಯಾಕ್ಟರಿ ರಸ್ತೆಯಿಂದ ಎಳೆದುಕೊಂಡು ಹೋಗಿ ಎನ್ ಹೆಚ್ -234 ರಸ್ತೆಯ ಮದ್ಯಭಾಗದಲ್ಲಿ ಬಿಸಾಕಿ ಅಪಘಾತವಾಗಿರುವಂತೆ ಬಿಂಬಿಸಿದ್ದಾರೆ. ಈ ಪೂರ್ವ ಯೋಜನೆಯನ್ನು ರೂಪಿಸಿ ಉಮೇಶ್ ಕುಮಾರ್ ಸಿಂಗ್ ಕೊಲೆ ಮಾಡಿ, ಈ ಕೊಲೆಯನ್ನು ಮರೆಮಾಚಲು ಅಪಘಾತವೆಂದು ನಂಬಿಸಿ ನಟಿಸಿರುವಂತಹ ಕೌಲಾನ್ ಪಾಲ್ ಅಲಿಯಾಸ್ ಕೈಲಾಸ್ ಪಾಲ್, ಆತನ ಹೆಂಡತಿ ಶಿವಾನಿ ಅಲಿಯಾಸ್ ಮಿಲಿ ಹಾಗೂ ಇತರರ ಮೇಲೆ ಕಾನೂನು ಕ್ರಮ ಕೋರಿ ದೂರಿನ ಮೇರೆಗೆ ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ನಿಖಿಲ್ .ಬಿ ಐ.ಪಿ.ಎಸ್ ಹಾಗು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರವಿಶಂಕರ್ ಮತ್ತು ಜಗದೀಶ್ ಮಾರ್ಗದರ್ಶನದಲ್ಲಿ ಮುಳಬಾಗಿಲು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ನಂದಕುಮಾರ್ ಮುಂದಾಳತ್ವದಲ್ಲಿ ರಾಜಣ್ಣ ಪಿ.ಐ. ಮುಳಬಾಗಿಲು ನಗರ ಠಾಣೆ ರವರು ಪಿ.ಎಸ್.ಐ ವಿಠ್ಠಲ ವೈ ತಲವಾರ ಮುಳಬಾಗಿಲು ಗ್ರಾಮಾಂತರ ಠಾಣೆ, ಪಿ.ಎಸ್.ಐ ಮಮತ ಎಲ್ ಮುಳಬಾಗಿಲು ಗ್ರಾಮಾಂತರ ಠಾಣೆ, ಮತ್ತು ಸಿಬ್ಬಂದಿಯಾದ ಮಂಜುನಾಥ ರೆಡ್ಡಿ, ಮಂಜುನಾಥ, ರವೀಂದ್ರ, ಆನಂದ, ರಾಕೇಶ್ ಸಿದ್ದಣ್ಣ ಗಂಪ್ಯಾಳ ಒಳಗೊಂಡ ತಂಡ ಆರೋಪಿಗಳನ್ನು 24 ಗಂಟೆಗಳಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ , ಆರೋಪಿಗಳನ್ನು ವಿಚಾರಿಸಲಾಗಿ ಉಮೇಶ್ ಕುಮಾರ್ ಸಿಂಗ್ ರವರು ಶಿವಾನಿ ಮೇಲೆ ಕೈಲಾಸ್ ಅನೈತಿಕ ಸಂಬಂಧ ಹೊಂದಿದ್ದರಿಂದ ಕೈಲಾಸ್ ಪಾಲ್ ತಾನೇ ಕೊಲೆಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ.

ಆರೋಪಿಗಳಾದ 1) ಶಿವಾನಿ ಅಲಿಯಾಸ್ ಮಿಲಿ 2) ಕೌಲಾನ್ ಪಾಲ್ ಅಲಿಯಾಸ್ ಕೈಲಾಸ್ ಪಾಲ್, 3)ರಮೇಶ್ 4)ಸೋಮ ನ್ಯಾಯಾಂಗ ಬಂಧನಕ್ಕೆ ವೊಪ್ಪಿಸ್ಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ. ವರದಿ : ರೋಶನ್ ಜಮೀರ್

nazeer ahamad

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

1 week ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago