ಸೋಶಿಯಲ್ ಮೀಡಿಯಾದಲ್ಲಿ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿ, ರತನ್ ಧಿಲ್ಲೋನ್, ತಮ್ಮ ಮನೆಯಲ್ಲಿ ಪತ್ತೆಯಾದ ಎರಡು ದಾಖಲೆಗಳ ಫೋಟೋಗಳನ್ನು ಹಂಚಿಕೊಂಡು, ಅವುಗಳ ಬಗ್ಗೆ ಸಲಹೆ ಕೇಳಿದ್ದಾರೆ. “ನಮ್ಮ ಮನೆಯಲ್ಲಿ ಈ ದಾಖಲೆಗಳು ಸಿಕ್ಕಿವೆ. ಇವುಗಳನ್ನು ಹೇಗೆ ಬಳಸಬೇಕು ಎಂದು ನನಗೆ ತಿಳಿಯದು. ದಯವಿಟ್ಟು ಸಹಾಯ ಮಾಡಿ.” ಎಂದು ಅವರು X (ಹಳೆಯ Twitter) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನೆಟ್ಟಿಗರಿಂದ ಅಚ್ಚರಿ ಸ್ಪಂದನೆ – “ನೀವು ಲಕ್ಷಾಧಿಪತಿ!”
ಧಿಲ್ಲೋನ್ ಹಂಚಿಕೊಂಡ ದಾಖಲೆಗಳನ್ನು ನಿಜವಾಗಿ ಪರಿಶೀಲಿಸಿದ ಬಳಕೆದಾರರು, “ನೀವು ಈಗ ಲಕ್ಷಾಧಿಪತಿಯಾಗಿದ್ದೀರಿ!” ಎಂದು ಪ್ರತಿಕ್ರಿಯಿಸಿದರು. ಕಾರಣ, ಅವರು ಹಂಚಿಕೊಂಡ ದಾಖಲೆಗಳು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯ ಷೇರು ಖರೀದಿಯ ದಾಖಲೆಗಳಾಗಿವೆ.
1987 ಮತ್ತು 1992ರಲ್ಲಿ ಕೇವಲ ₹300ಗೆ ಖರೀದಿಸಿದ ಷೇರುಗಳು – ಇಂದಿನ ಮೌಲ್ಯ ಲಕ್ಷಗಳಲ್ಲಿ!
ಧಿಲ್ಲೋನ್ ಕುಟುಂಬ 1987ರಲ್ಲಿ 20 ಷೇರುಗಳು ಮತ್ತು 1992ರಲ್ಲಿ 10 ಷೇರುಗಳನ್ನು ಖರೀದಿಸಿದ್ದಿತು. ಆಗ, ಒಂದೊಂದು ಷೇರು ಕೇವಲ ₹10ಗೆ ಲಭ್ಯವಿತ್ತು. ಡಿಜಿಟಲ್ ವ್ಯವಸ್ಥೆ ಇಲ್ಲದ ಕಾರಣ, ಶೇರುಪತ್ರ (physical bonds) ರೂಪದಲ್ಲಿ ಈ ದಾಖಲೆಗಳನ್ನು ಹಂಚಲಾಗಿತ್ತು.
ಆದರೆ ಈಗ?
ಇತ್ತೀಚಿನ Splits (ಷೇರುಗಳ ವಿಭಜನೆ) ಗಳ ಪ್ರಕಾರ, ಅವರ 30 ಷೇರುಗಳು ಈಗ 960 ಆಗಿವೆ!
ಪ್ರಸ್ತುತ ಷೇರುಗಳ ಮೌಲ್ಯ (2024 ):
✔ 960 ಷೇರುಗಳ ಒಟ್ಟು ಮೌಲ್ಯ – ₹11.88 ಲಕ್ಷ
ಇದೇ ರೀತಿ ನೀವು ಶೇರುಪತ್ರಗಳ ಮಾಲೀಕರಾಗಿದ್ದರೆ ಏನು ಮಾಡಬೇಕು?
ಈ ಘಟನೆ ಹಳೆಯ ಹೂಡಿಕೆಗಳ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ. ನೆಟ್ಟಿಗರು ಧಿಲ್ಲೋನ್ ಗೆ, “ಇನ್ನು ಸ್ವಲ್ಪ ಹುಡುಕಾಡಿ, MRF ಷೇರುಗಳ ದಾಖಲೆಗಳು ಸಿಗಬಹುದು!” ಎಂದು ಟಾಂಗ್ ನೀಡಿದ್ದಾರೆ!
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…