ಬೆಂಗಳೂರು ರಾಜಕೀಯ ವಲಯದಲ್ಲಿ ಮಹದೇವಪುರ ಕ್ಷೇತ್ರದ ಬೆಳ್ಳಂದೂರು ಪ್ರದೇಶದ ಒಂದು ಸಣ್ಣ ಮನೆಯಲ್ಲಿ 80 ಮಂದಿ ಹೆಸರು ಮತದಾರರ ಪಟ್ಟಿಯಲ್ಲಿ ಇದೆ ಎಂಬ ಆರೋಪ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಆರೋಪವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹೊರ ಹಾಕಿದ್ದು, ದೇಶದ ರಾಜಕೀಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ. ಆದರೆ, ಇದರ ಹಿಂದಿರುವ ಸತ್ಯ ಏನು?
ಬೆಳ್ಳಂದೂರಿನ ಟೆಕ್ ಕಾರಿಡಾರ್‌ನಿಂದ ಸ್ವಲ್ಪ ಒಳಗೆ ಹೋಗಿದರೆ ಮುನಿರೆಡ್ಡಿ ಗಾರ್ಡನ್ ಎಂಬ ಸಣ್ಣ ವಸತಿ ಪ್ರದೇಶ ಸಿಗುತ್ತದೆ. ಇಲ್ಲಿ ಸಾಲಾಗಿ ನಿರ್ಮಿಸಿರುವ, ತಗಡಿನ ಶೀಟ್ ಹೊದಿಸಿದ 10×15 ಅಳತೆಯ ಪುಟ್ಟ ಮನೆಗಳಲ್ಲಿ ಹೊರರಾಜ್ಯಗಳಿಂದ ಬಂದ ಕೂಲಿ ಕಾರ್ಮಿಕರು ವಾಸಿಸುತ್ತಿದ್ದಾರೆ. ಈ ಸಾಲಿನಲ್ಲಿರುವ 35ನೇ ಸಂಖ್ಯೆಯ ಮನೆ ಈಗ ರಾಷ್ಟ್ರದ ಮಟ್ಟದಲ್ಲಿ ಸುದ್ದಿಯ ಕೇಂದ್ರವಾಗಿದೆ.
ಮನೆಯ ಮುಂದೆ ಮಾಧ್ಯಮದ ಹಾವಳಿ, ನೆರೆಮನೆಯವರ ಅನುಮಾನಭರಿತ ಮುಖಗಳು ಮತ್ತು ಮಧ್ಯದಲ್ಲಿ ಗಾಬರಿಯಿಂದ ನಿಂತಿದ್ದ ಪಶ್ಚಿಮ ಬಂಗಾಳ ಮೂಲದ ದೀಪಕ್ ಅವರ ಕುಟುಂಬ ಕಣ್ಣಿಗೆ ಬಿತ್ತು.
“ನಮ್ಮ ಜೀವನ ನರಕವಾಗಿದೆ” – ದೀಪಕ್
ಮಾತ್ರ ಒಂದು ತಿಂಗಳ ಹಿಂದೆ ಬಾಡಿಗೆಗೆ ಬಂದ ದೀಪಕ್, ಸ್ವಿಗ್ಗಿ ಡೆಲಿವರಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಂಪ್ಯೂಟರ್ ರಿಪೇರಿ ಅಂಗಡಿ ನಷ್ಟವಾದ ಬಳಿಕ ಬದುಕಿಗಾಗಿ ಬೆಂಗಳೂರಿಗೆ ಬಂದಿದ್ದ ಅವರು, ತಮ್ಮ ಮನೆ ಇಂತಹ ವಿವಾದದಲ್ಲಿ ಸಿಲುಕುತ್ತದೆ ಎಂದು ಕನಸೂ ಕಾಣಿರಲಿಲ್ಲ.
ಎರಡು ದಿನಗಳಿಂದ ನಮ್ಮ ಮೇಲೆ ಅಪರಾಧಿಗಳಂತೆ ವರ್ತಿಸುತ್ತಿದ್ದಾರೆ. ‘ನಿಮ್ಮ ಮನೆಯಲ್ಲಿ 80 ಜನರ ಹೆಸರುಗಳಿವೆ’ ಎಂದು ಪ್ರಶ್ನಿಸುತ್ತಾರೆ. ನನ್ನ ಮಗನನ್ನು ಆಟಕ್ಕೂ ಸೇರಿಸಿಕೊಳ್ಳುತ್ತಿಲ್ಲ. ಮನೆ ಮಾಲೀಕರು ಖಾಲಿ ಮಾಡಿಸಿದರೆ ನಾವು ಎಲ್ಲಿ ಹೋಗುವುದು? ನನ್ನ ಮತದಾರರ ಗುರುತಿನ ಚೀಟಿ ಪಶ್ಚಿಮ ಬಂಗಾಳದಲ್ಲಿದೆ, ಇಲ್ಲಿ ಅಲ್ಲ,” ಎಂದು ದೀಪಕ್ ಆತಂಕದಿಂದ ಹೇಳಿದ್ದಾರೆ.
“ಇದು ಶುದ್ಧ ಸುಳ್ಳು” – ಮನೆ ಮಾಲೀಕ ಜಯರಾಮ್ ರೆಡ್ಡಿ
ಈ 35 ಮನೆಗಳ ಮಾಲೀಕರಾದ ಜಯರಾಮ್ ರೆಡ್ಡಿ ಆರೋಪವನ್ನು ತಿರಸ್ಕರಿಸಿದ್ದಾರೆ.
ಇಲ್ಲಿರುವ ಮನೆಗಳು ಚಿಕ್ಕದಾಗಿದ್ದು, ಬಡ ಕೂಲಿ ಕಾರ್ಮಿಕರು ವಾಸಿಸುವರು. 80 ಮಂದಿ ಒಂದೇ ಮನೆಯಲ್ಲಿ ವಾಸಿಸುವುದು ಅಸಾಧ್ಯ. ಬಾಡಿಗೆದಾರರು ಕೆಲ ತಿಂಗಳು ಇದ್ದು ಬೇರೆ ಕಡೆ ಹೋಗುತ್ತಾರೆ, ಆದರೆ ತಮ್ಮ ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾಯಿಸುವುದಿಲ್ಲ. ಹೀಗಾಗಿ ಹಳೆಯ ಹೆಸರುಗಳು ಉಳಿದಿರಬಹುದು. ಯಾವುದೇ ತನಿಖೆಗೂ ನಾನು ಸಿದ್ಧ,” ಎಂದು ಅವರು ಹೇಳಿದ್ದಾರೆ.
ತಮ್ಮನ್ನು ‘ಬಿಜೆಪಿ ಸಂಘಟಕ’ ಎಂದು ವರದಿಯಾದ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದು, “ನಾನು ಬಿಜೆಪಿ ಮತದಾರ, ಆದರೆ ಪಕ್ಷದ ಪರ ಪ್ರಚಾರ ಮಾಡಿಲ್ಲ,” ಎಂದಿದ್ದಾರೆ.
ಚುನಾವಣಾಧಿಕಾರಿಗಳ ವಾದ: ತಾಂತ್ರಿಕ ದೋಷ
ಮುಖ್ಯ ಚುನಾವಣಾಧಿಕಾರಿ ಕಚೇರಿ ಮೂಲಗಳು, ಈ ವಿವಾದದ ಮೂಲ ತಾಂತ್ರಿಕ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.
“ನಾವು 80 ಹೆಸರುಗಳಿವೆ ಎಂದು ಹೇಳಿದ್ದೇವೆ, ಆದರೆ ಅವರು ಎಲ್ಲರೂ ಅಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿಲ್ಲ. ಅನೇಕರು ಮನೆ ಬಿಟ್ಟು ಹೋಗಿದ್ದರೂ ವಿಳಾಸ ಬದಲಾಯಿಸದ ಕಾರಣ ಹೆಸರುಗಳು ಉಳಿದಿವೆ. ಶೀಘ್ರದಲ್ಲೇ ಪಟ್ಟಿಯಿಂದ ಇಂತಹ ಹೆಸರುಗಳನ್ನು ತೆಗೆದುಹಾಕಲಾಗುತ್ತದೆ,” ಎಂದು ಮೂಲಗಳು ತಿಳಿಸಿದ್ದಾರೆ.
ಕಾಂಗ್ರೆಸ್ ಆರೋಪ, ಬಿಜೆಪಿ ವಿರುದ್ಧ ಕಿಡಿ
ಕಾಂಗ್ರೆಸ್ನ ಸ್ಥಳೀಯ ನಾಯಕ ಮೂರ್ತಿ, ಈ ಎಲ್ಲವನ್ನು ತಾಂತ್ರಿಕ ದೋಷವೆಂದು ತಳ್ಳಿಹಾಕಿದ್ದಾರೆ.
“ಮಹದೇವಪುರ ಕ್ಷೇತ್ರದಲ್ಲಿ ಒಂದೇ ಮನೆಯಲ್ಲಿ 80 ಹೆಸರುಗಳಿರುವುದು ನಿಜ. ಇಂತಹ ಪ್ರಕರಣಗಳು ಬೇರೆಡೆಗಳಲ್ಲೂ ಇದ್ದೇ ಇವೆ. ಇದು ಬಿಜೆಪಿ ನಡೆಸಿದ ವ್ಯವಸ್ಥಿತ ಅಕ್ರಮ. ಇವರಿಗೆ ಇಂತಹ ಕೆಲಸ ಮಾಮೂಲು,” ಎಂದು ಅವರು ಆರೋಪಿಸಿದ್ದಾರೆ.
ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…
ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…