Latest

ನಕಲಿ ನೋಟುಗಳ ಮಾಯಜಾಲ: 6 ಲಕ್ಷ ಲೂಟಿ ನಡೆಸಿ ಮೋಸಗಾರ ನಾಪತ್ತೆ!

ಬೆಂಗಳೂರು: 6 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳ ಮೂಲಕ ವ್ಯಕ್ತಿಯೊಬ್ಬನನ್ನು ವಂಚಿಸಿದ ಘಟನೆ ರಾಜಧಾನಿಯ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಆಂಧ್ರ ಪ್ರದೇಶದ ಕಡಪ ಮೂಲದ ಸೈಯದ್ ಸಮೀರ್ ಎಂಬುವವರು, ಕುವೈತ್‌ನಲ್ಲಿ 14 ವರ್ಷಗಳಿಂದ ಕಾರು ಚಾಲಕನಾಗಿ ಕೆಲಸ ಮಾಡಿದ್ದರು. ತಮ್ಮ ಕುಟುಂಬ ಬೆಂಗಳೂರು ನಗರದಲ್ಲಿರುವ ಕಾರಣ ಅವರು ಇಲ್ಲಿ ಬಂದಿದ್ದರು. ಈ ಸಂದರ್ಭ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೈಯದ್ ಖುರ್ಶಿ ಎಂಬ ವ್ಯಕ್ತಿಯೊಂದಿಗೆ ಪರಿಚಯವಾಯಿತು. ಇಬ್ಬರು ತಮ್ಮ ಸಂಪರ್ಕ ಸಂಖ್ಯೆಗಳನ್ನೂ ಹಂಚಿಕೊಂಡಿದ್ದರು.

ಅನಂತರ, ಸಮೀರ್ ಬೆಂಗಳೂರಿನಲ್ಲೇ ಕಾರು ಖರೀದಿಸಿ ಬಾಡಿಗೆ ಓಡಿಸಲು ಉತ್ಸುಕರಾಗಿದ್ದರು. ಈ ಬಗ್ಗೆ ಖುರ್ಶಿಯೊಂದಿಗೆ ಚರ್ಚಿಸಿದ ಅವರು, ಕಡಿಮೆ ಬೆಲೆಯಲ್ಲಿ ಕಾರು ದೊರಕಿಸಿಕೊಡುವ ಭರವಸೆ ಪಡೆದಿದ್ದರು. ಹೀಗಾಗಿ, ಜ. 19ರಂದು ಖುರ್ಶಿಯನ್ನು ಭೇಟಿಯಾದ ಸಮೀರ್,  ಮಾತುಗಳನ್ನು ನಂಬಿ ಬ್ಯಾಂಕ್ ಖಾತೆಯ ಮೂಲಕ ರೂ. 5.40 ಲಕ್ಷ ಹಣ ವರ್ಗಾಯಿಸಿದರು.

ಆದರೆ, ಖುರ್ಶಿ ತಕ್ಷಣ ಕಾರು ನೀಡಲು ಸಾಧ್ಯವಿಲ್ಲವೆಂದು ಹೇಳಿ, “ನಿಮ್ಮ ಹಣ ಸುರಕ್ಷಿತವಾಗಿರಲು ನಾನು ರೂ. 6 ಲಕ್ಷ ನಗದು ನೋಟುಗಳನ್ನು ಬಂಡಲ್ ರೂಪದಲ್ಲಿ ನೀಡುತ್ತೇನೆ. ಕಾರು ತರುವವರೆಗೆ ಇದನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ” ಎಂದನು. ಈ ಸಂದರ್ಭ ಬಂಡಲ್ ಮೇಲೆ ಸೈಯದ್ ಸಮೀರ್ ನಂಬಿ ಬಿಟ್ಟರು.

ಆದರೆ, ಹೂಡಿಕೆ ಬಳಿಕ ಬಂಡಲ್ ಪರಿಶೀಲಿಸಿದಾಗ ನೋಟುಗಳಲ್ಲಿ ಮೇಲ್ಭಾಗದಲ್ಲಿ ಅಸಲಿ 500 ರೂಪಾಯಿ ನೋಟುಗಳಿದ್ದು, ಉಳಿದವು ನಕಲಿ ಎಂಬುದು ತಿಳಿಯಿತು. ಯತ್ನಿಸಿದರೂ ಖುರ್ಶಿಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.

ಈ ಕುರಿತು ಸಮೀರ್ ಕೂಡಲೇ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಕಲಿ ನೋಟುಗಳ ತಪಾಸಣೆ ನಡೆಸಿದ ಪೊಲೀಸರು ಪ್ರಕರಣದ ತೀವ್ರತೆ ಅರಿದು, ಆರೋಪಿ ಖುರ್ಶಿಯನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

nazeer ahamad

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

1 week ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago