Crime

ಮೇಲ್ಜಾತಿ ಹುಡುಗಿಯೊಂದಿಗೆ ಪ್ರೇಮ– ದಲಿತ ಯುವಕನ ಮೇಲೆ ಹಲ್ಲೆ, ಯುವಕ ಮೃತ.

ಬೀದರ್: ಮೇಲ್ಜಾತಿ ಬಾಲಕಿಯನ್ನು ಪ್ರೀತಿಸಿದ ಕಾರಣಕ್ಕೆ ದಲಿತ ಯುವಕನನ್ನು ಹಲ್ಲೆ ಮಾಡಿ ಕೊಂದ ಘಟನೆ ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನ ಕುಶನೂರ ಗ್ರಾಮದಲ್ಲಿ ನಡೆದಿದ್ದು, ಈ ದುರಂತದಲ್ಲಿ 19 ವರ್ಷದ ಯುವಕ ಸುಮಿತ್ ಮೃತಪಟ್ಟಿದ್ದಾರೆ.
ಮೃತ ಯುವಕವು ಬೇಡಕುಂದಾ ಗ್ರಾಮ ನಿವಾಸಿ ಸುಮಿತ್ ಎಂದು ಗುರುತಿಸಲಾಗಿದೆ. ಆದರೆ ಭಾನುವಾರ ಬಾಲಕಿ ಸುಮಿತ್ ನನ್ನು ಮನೆಗೆ ಬಾ ಎಂದು ಕರೆದಿದ್ದಾಳೆ. ಆಕೆಯ ಪೋಷಕರು, ಅಣ್ಣ ಮತ್ತು ಆತನ ಸ್ನೇಹಿತರು, ಮನೆಯಲ್ಲಿ ಕೂಡಿ ಹಾಕಿ ಅವನನ್ನು ಮನಸ್ಸೋ ಇಚ್ಛೆ ಥಳಿಸಿದ್ದರು.
ಈ ವೇಳೆ, ಯುವಕ ತಪ್ಪಾಯ್ತು ಕ್ಷಮೆ ಕೇಳಿದರೂ, ಅವರಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿತು. ಹಲ್ಲೆಗೆ ಒಳಪಟ್ಟ ಸಂತೃಪ್ತಿಯು, ಅದರ ನಂತರ ಯುವಕನನ್ನು ಬಿಡಲಾಗಿತ್ತು. ಆತನ ಪರಿಸ್ಥಿತಿ ಕಂಡು ಕುಟುಂಬಸ್ಥರು ಸ್ಥಳೀಯರ ನೆರವಿನಿಂದ, ಯುವಕನನ್ನು ಮಹಾರಾಷ್ಟ್ರದ ಉದಗೀರ್ ಮತ್ತು ಲಾತೂರ್ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜ.7ನೇ ತಾರೀಕು ಸುಮಿತ್ ಸಾವನ್ನಪ್ಪಿದ್ದಾನೆ. ಈ ವೇಳೆ, ಸಂತೃಪ್ತಿಯ ಪೋಷಕರು ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ, ಧರಣಿ ನಡೆಸಿದ್ದಾರೆ.
ಮೃತ್ಯು ಪ್ರಕರಣದ ಸಂಬಂಧ, ಪೋಷಕರ ದೂರಿನ ಮೇರೆಗೆ, ಬಾಲಕಿಯ ಕುಟುಂಬಸ್ಥರು ಮತ್ತು ಅವಳ ಅಣ್ಣನ ಸ್ನೇಹಿತರ ವಿರುದ್ಧ SC/ST ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪ್ರಾಥಮಿಕ ತನಿಖೆ ನಡೆಸಲು ಪೊಲೀಸರ ತಂಡ ರೂಪಿಸಲಾಗಿದೆ.

nazeer ahamad

Recent Posts

ಖಾರದ ಪುಡಿ ಎರಚಿ ಒಡವೆ ಕದ್ದಿದ್ದ ಖದೀಮ ಪೊಲೀಸರ ಬಲೆಗೆ..!

ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…

1 month ago

ನಿವೇಶನದ ಅಳತೆ ಸರ್ವೆಯರ್ ಸಹಾಯಕ ಲೋಕಾಯುಕ್ತ ಬಲೆಗೆ; 65 ಸಾವಿರ ಮೌಲ್ಯದ ನಿವೇಶನ ಅಳತೆಗೆ ₹ 23 ಸಾವಿರ ಲಂಚ..!

ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…

1 month ago

ಅಲಿಗಢದಲ್ಲಿ ವರದಕ್ಷಿಣೆ ಕಿರುಕುಳ ದುರಂತ: ಅತ್ತೆ-ಮಾವ ಒತ್ತಾಯಕ್ಕೆ ತತ್ತರಿಸಿದ ಸೊಸೆ ಟೆರೇಸ್ ಯಿಂದ ಹಾರಾಟ.!

ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…

3 months ago

4 ಕೋಟಿ ವರದಕ್ಷಿಣೆಗಾಗಿ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ ಪತಿ!!

ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…

3 months ago

ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ.!!

ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…

3 months ago

ಪ್ರೇಯಸಿ ಫೋನ್‌ ಎತ್ತಿಲ್ಲ: ಕೋಪದಲ್ಲಿ ಯುವಕ ಇಡೀ ಹಳ್ಳಿಯ ಕರೆಂಟ್ ಕಟ್!

ಪ್ರೇಯಸಿ ಫೋನ್‌ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…

3 months ago