ಉಡುಪಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಶಂಕೆಯ ಹಿನ್ನೆಲೆ, ಕಾರ್ಕಳ ಮೆಸ್ಕಾಂ ಅಕೌಂಟ್ಸ್ ಅಧಿಕಾರಿ ಗಿರೀಶ್ ರಾವ್ ವಿರುದ್ಧ ಲೋಕಾಯುಕ್ತ ಪೊಲೀಸರು ಶನಿವಾರ ಬೆಳಗ್ಗೆಯಿಂದ ಸುದೀರ್ಘ ದಾಳಿ ನಡೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಪುಲ್ಕೇರಿಯಲ್ಲಿ ಇರುವ ಗಿರೀಶ್ ರಾವ್ ಅವರ ನಿವಾಸ, ವಾಣಿಜ್ಯ ಸಂಕೀರ್ಣ ಹಾಗೂ ಇತರ ಮೂರು ಸ್ಥಳಗಳ ಮೇಲೆ ದಾಳಿ ನಡೆಯಿತು. ಈ ತನಿಖೆಯನ್ನು ಲೋಕಾಯುಕ್ತ ಡಿವೈಎಸ್‌ಪಿ ಮಂಜುನಾಥ್ ಅವರ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳ ತಂಡ ನಡೆಸಿತ್ತು.
ಮೂಲಗಳ ಪ್ರಕಾರ, ಗಿರೀಶ್ ರಾವ್ ಅವರ ಹೊಂದಿರುವ ಆಸ್ತಿ, ಆಯವ್ಯಯಕ್ಕೆ ತಕ್ಕಷ್ಟು ಅಡಾಲು ದಾಖಲೆ ನೀಡದಿರುವ ಕಾರಣದಿಂದಾಗಿ ಈ ದಾಳಿಯ ಅವಶ್ಯಕತೆ ಉಂಟಾಯಿತು ಎಂದು ಹೇಳಲಾಗಿದೆ. ದಾಳಿಯ ವೇಳೆ ದಾಖಲೆಗಳು, ಆಸ್ತಿ ವಿವರಗಳು ಹಾಗೂ ಬ್ಯಾಂಕ್ ಲೆಕ್ಕಪತ್ರಗಳ ಪರಿಶೀಲನೆ ನಡೆದಿದ್ದು, ಮೌಲ್ಯಮಾಪನ ಪ್ರಕ್ರಿಯೆ ಮುಂದುವರಿದಿದೆ.
ಈ ಕುರಿತು ಹೆಚ್ಚಿನ ಮಾಹಿತಿ ಮುಂದಿನ ತನಿಖೆ ನಂತರ ಬಹಿರಂಗವಾಗುವ ಸಾಧ್ಯತೆ ಇದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಲೋಕಾಯುಕ್ತ ಇಲಾಖೆ ಸ್ಪಷ್ಟಪಡಿಸಿದೆ.
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…
ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…
ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ಘಟನೆ ಹುಬ್ಬಳ್ಳಿಯ ಚನ್ನಪೇಟೆ…
ಹಾವೇರಿ: ಹಾನಗಲ್ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಕ್ರಮ ಜರುಗಿದ್ದು, ಇದಕ್ಕೆ ಕಾರಣವಾಗಿರುವುದು ಸಮುದಾಯದ…
ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…