Belagavi ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಅಜಯಸಿಂಗ್ ರಜಪೂತ್ ಅವರ ನಿವಾಸ ಮತ್ತು ಸಂಬಂಧಿತ ಸ್ಥಳಗಳ ಮೇಲೆ Karnataka Lokayukta ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದ್ದು, ರಾಜ್ಯದಾದ್ಯಂತ ಚರ್ಚೆಗೆ ಕಾರಣವಾಗಿದೆ.
ತನಿಖೆ ವೇಳೆ ಅಜಯಸಿಂಗ್ ಅವರ ಪತ್ನಿ ಹಾಗೂ ಅತ್ತೆಯ ಹೆಸರಿನಲ್ಲಿ ಹೊಂದಿದ್ದ ಎಸ್‌ಬಿಐ ಬ್ಯಾಂಕ್ ಲಾಕರ್‌ಗಳನ್ನು ತೆರೆಯಲಾಗಿದ್ದು, ಅಧಿಕಾರಿಗಳು ಕ್ಷಣಕಾಲ ಬೆಚ್ಚಿಬಿದ್ದಿದ್ದಾರೆ. ಲಾಕರ್‌ನಲ್ಲಿ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ವಜ್ರದ ನೆಕ್ಲೆಸ್ ಹಾಗೂ ಹರಳಿನ ಉಂಗುರಗಳು ಪತ್ತೆಯಾಗಿವೆ. ಇದಲ್ಲದೆ, ಸುಮಾರು 5.96 ಕೆಜಿ ತೂಕದ ಚಿನ್ನದ ಸಂಗ್ರಹ ದೊರೆತಿದ್ದು, ಅದರಲ್ಲಿ ಸುಮಾರು 1.5 ಕೆಜಿ ಹಾಲ್‌ಮಾರ್ಕ್ ಚಿನ್ನದ ಗಟ್ಟಿಗಳು ಸೇರಿವೆ. ಜೊತೆಗೆ ಸುಮಾರು 5 ಕೆಜಿ ಬೆಳ್ಳಿ ಆಭರಣಗಳು ಮತ್ತು ಗಟ್ಟಿಗಳನ್ನೂ ಜಪ್ತಿ ಮಾಡಲಾಗಿದೆ.
ಅಷ್ಟೇ ಅಲ್ಲದೆ, Hubballi, Savadatti, Hukkeri, Gokak ಹಾಗೂ ಬೆಳಗಾವಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಒಟ್ಟು 18 ನಿವೇಶನಗಳನ್ನು ಹೊಂದಿರುವುದು ದಾಖಲೆಗಳಿಂದ ಬಹಿರಂಗವಾಗಿದೆ.
ಮನೆಯ ಶೋಧದ ವೇಳೆ ಸುಮಾರು 43 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಹಾಗೂ ದುಬಾರಿ ಬೈಕ್‌ಗಳೂ ಪತ್ತೆಯಾಗಿವೆ. ಜೊತೆಗೆ ವಿವಿಧ ಬ್ಯಾಂಕ್ ಖಾತೆಗಳಲ್ಲಿ 3.12 ಕೋಟಿ ರೂಪಾಯಿ ಮೌಲ್ಯದ ಫಿಕ್ಸೆಡ್ ಡೆಪಾಸಿಟ್ (FD) ಇರುವುದು ಬೆಳಕಿಗೆ ಬಂದಿದೆ.
ಆದಾಯದ ಮೂಲಗಳಿಗೆ ಹೋಲಿಸಿದರೆ ಹಲವಾರು ಪಟ್ಟು ಅಧಿಕ ಆಸ್ತಿ ಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಡಿವೈಎಸ್‌ಪಿ ಬಿ.ಎಸ್. ಪಾಟೀಲ್ ನೇತೃತ್ವದ ತಂಡ ತನಿಖೆಯನ್ನು ತೀವ್ರಗೊಳಿಸಿದೆ. ಸುಳ್ಳು ದಾಖಲೆಗಳ ಸೃಷ್ಟಿ ಮತ್ತು ಬೇನಾಮಿ ಆಸ್ತಿಗಳ ಕುರಿತು ಹೆಚ್ಚಿನ ಪರಿಶೀಲನೆ ಮುಂದುವರಿದಿದೆ.
ಕನ್ನಡ ಮತ್ತು ತೆಲುಗು ಸಂಗೀತ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಗಾಯಕಿ Mangli ಹಾಗೂ ಅವರ ಸಹೋದರನ ವಿರುದ್ಧ ಭಾರೀ ವಂಚನೆ…
ನೆರೆಯ ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್ ನಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ,…
ಅಂತರ್‌ಧರ್ಮೀಯ ವಿವಾಹ ಮಾಡಿಕೊಂಡಿರುವ ಯುವ ಜೋಡಿಯೊಂದು ತನ್ನ ಸುರಕ್ಷತೆಗಾಗಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ನೆರವು ಬೇಡಿರುವ ಘಟನೆ ಇದೀಗ ಗಮನ…
ದೇಶದಲ್ಲಿ ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ ಎಷ್ಟೇ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡರೂ, ಸಾರ್ವಜನಿಕ ಸ್ಥಳಗಳಲ್ಲಿ ಕಿರುಕುಳ ನೀಡುವ ಘಟನೆಗಳು ನಿಲ್ಲುವ…
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ…
ಡಿಜಿಟಲ್ ವಹಿವಾಟುಗಳಲ್ಲಿ ಹೆಚ್ಚುತ್ತಿರುವ ವಂಚನೆ ಪ್ರಕರಣಗಳನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ಭದ್ರತಾ ಕ್ರಮಗಳನ್ನು ಪರಿಗಣಿಸುತ್ತಿದೆ. ಈ…