ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎರಡು ಮಂದಿ ಸಿಬ್ಬಂದಿ ಲಂಚವೊತ್ತಾಯ ಪ್ರಕರಣದಲ್ಲಿ ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ. ಅಬ್ದುಲ್ ವಲಿ ಹಾಗೂ ಕಂಪ್ಯೂಟರ್ ಆಪರೇಟರ್ ಸೌಮ್ಯ ಬಡಿಗೇರ್ ಬಂಧಿತರು.
ಆಂಗನವಾಡಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶಕುಂತಲಾ ಕಾಂಬಳೆ ಎಂಬುವವರಿಂದ ಹಣ ಬೇಡಿಕೆ ಇಟ್ಟಿರುವ, ಒಟ್ಟು 30,000 ರೂಪಾಯಿ ಲಂಚದಂತೆ ಒತ್ತಾಯಿಸಿದ್ದರು ಎಂದು ಮೂಲಗಳು ತಿಳಿಸಿವೆ. ಈ ಪೈಕಿ ಮೊದಲ ಹಂತದ 15,000 ರೂಪಾಯಿ ಪಡೆಯುವ ಸಂದರ್ಭದಲ್ಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಸ್ಥಳದಲ್ಲೇ ಬಂಧಿಸಿದ್ದಾರೆ.
ದಾಳಿ ವೇಳೆ ಸೌಮ್ಯ ಬಡಿಗೇರ್ ಹೊತ್ತಿನಲ್ಲಿ ಅಸ್ವಸ್ಥರಾಗಿದ್ದು, ತಕ್ಷಣವೇ ಸ್ಥಳೀಯ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗಿದೆ. ಇದೀಗ ಇಬ್ಬರನ್ನೂ ವಿಚಾರಣೆಗಾಗಿ ಲೋಕಾಯುಕ್ತ ಅಧಿಕಾರಿಗಳ ವಶದಲ್ಲಿಡಲಾಗಿದೆ.
ಈ ಘಟನೆ ಬಳಿಕ ಇಲಾಖೆಯೊಳಗಿನ ಲಂಚ ವ್ಯಾಪಾರದ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದ್ದು, ಇಲಾಖೆಯ ಶುದ್ಧೀಕರಣದ ಅಗತ್ಯ ಮತ್ತೊಮ್ಮೆ ಎತ್ತಿ ಹಿಡಿದಿದೆ
