ಗದಗದಲ್ಲಿ ಲೋಕಾಯುಕ್ತದ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದ ವಕ್ಫ್ ಇಲಾಖೆಯ ಅಧಿಕಾರಿಯೊಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ. ಮುಳಗುಂದದ ಮಸೀದಿಗೆ ಅನುದಾನ ಬಿಡುಗಡೆ ಸಂಬಂಧಿತ ದಾಖಲೆಗಳಿಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಅಧಿಕಾರಿಯೊಬ್ಬರು ಲಂಚ ಕೇಳಿದ್ದಾಗಿ ತಿಳಿದು ಬಂದಿದೆ.
ವಕ್ಫ್ ಇಲಾಖೆಯ ಅಧಿಕಾರಿ ರೆಹಮತ್ತುಲ್ಲಾ ಪೆಂಡಾರಿ ಅವರು, ಎಸ್ ಎ ಮಕಾನದಾರ್ ಎಂಬ ವ್ಯಕ್ತಿಯಿಂದ ಹಣಕಾಸು ಲೆಕ್ಕಪತ್ರಗಳಿಗೆ ಅನುಮೋದನೆ ನೀಡಲು ಹಣಕಾಸು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಸಂಬಂಧ ಎಸ್ ಎ ಮಕಾನದಾರ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಲೋಕಾಯುಕ್ತದ ತಂಡ ಪ್ಲಾನ್ ಮಾಡಿ ಅಧಿಕಾರಿಗೆ ಲಂಚ ನೀಡುವ ವೇಳೆಯಲ್ಲೇ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದೆ.
ಪ್ರಸ್ತುತ ಬಂಧಿತ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಘಟನೆ ಹಿನ್ನೆಲೆಯಲ್ಲಿ ಇಲಾಖೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಸಾರ್ವಜನಿಕರಿಂದ ಒತ್ತಾಯ ವ್ಯಕ್ತವಾಗಿದೆ.
ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ…
ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…
ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…
ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…