ಹಾವೇರಿ ಜಿಲ್ಲೆಯಲ್ಲಿ ಭ್ರಷ್ಟಾಚಾರ ವಿರುದ್ಧದ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆ ನಡೆಸಿದ್ದಾರೆ. ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮ ಪಂಚಾಯತ್‌ನ ಪಿಡಿಒ ಸೇರಿದಂತೆ ಉಪಾಧ್ಯಕ್ಷ ಹಾಗೂ ಮೂವರು ಸದಸ್ಯರನ್ನು ಲಂಚ ಸ್ವೀಕಾರ ಆರೋಪದಲ್ಲಿ ಬಂಧಿಸಿದ್ದಾರೆ.

ಮಾಹಿತಿಯ ಪ್ರಕಾರ, ಅಂದನೂರು ಲೇಔಟ್‌ನ ನವೀನ್ ಎಂಬುವವರ 60 ಪ್ಲಾಟ್‌ಗಳ ಎನ್.ಎ ಇ-ಸ್ವತ್ತು ಉತಾರ ಪೂರೈಸಲು ಆರೋಪಿಗಳು 4.5 ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ನವೀನ್ ಅವರು ನೀಡಿದ ದೂರಿನಂತೆ ಲೋಕಾಯುಕ್ತ ಅಧಿಕಾರಿಗಳು ಜಾಲ ಬೀರಿ, ಲಂಚ ಪಡೆಯುವ ಕ್ಷಣದಲ್ಲಿ ಆರೋಪಿಗಳನ್ನು ಬಮ್ಬಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಹೀಗಾಗಿ ಗುರುತಿಸಲಾಗಿದೆ: ಪಿಡಿಒ ಕೆ. ಮಂಜುನಾಥ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಲ್ಲಪ್ಪ ಬೂದಿಹಾಳ, ಮತ್ತು ಸದಸ್ಯರಾದ ಸೋಮಶೇಖರ್, ಪ್ರಸನ್ನ ಹಾಗೂ ಸೈಯದ್ ರೆಹಮಾನ್.

ಈ ಪ್ರಕರಣದಿಂದ ಮತ್ತೆ ಹಾವೇರಿ ಜಿಲ್ಲೆಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಲಂಚದ ಹಾವಳಿ ಕುರಿತು ಚರ್ಚೆ ಹುಟ್ಟುಹಾಕಿದ್ದು, ಮುಂದಿನ ತನಿಖೆ ಹೇಗೆ ಸಾಗಲಿದೆ ಎಂಬುದರ ಮೇಲೆ ನಿಗಾ ನೆಟ್ಟಿದೆ.

Related News

error: Content is protected !!