Latest

ಮಹಿಳೆ ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಬಡವನಹಳ್ಳಿ ಪೊಲೀಸ್ ಠಾಣೆ ಮೋ.ನಂ 60/2019 ಎಸ್.ಸಿ¸ ಸಂ 5037/2019 ರಲ್ಲಿ ದಾಖಲಾದ ಠಾಣಾ ಸರಹದ್ದಿನಲ್ಲಿ ಆರೋಪಿ-01 ಶಿವಕುಮಾರ್ 42 ವರ್ಷ ವಯಸ್ಸು ಮುಗ್ಗೊಂಡನಹಳ್ಳಿ ಗ್ರಾಮ ಕೊರಟಗೆರೆ ತಾಲೂಕು ಮತ್ತು ಕೊಲೆಯಾದ ತುಂಬಾಡಿ ಗ್ರಾಮದ ಗಿರಿಜಮ್ಮ ಕೊಂ ಲೇ ಮೂಡಲಗಿರಿಯಪ್ಪ ರವರು ಪರಸ್ಪರ ಸಂಬಂಧಿಕರಾಗಿದ್ದು ಗಿರಿಜಮ್ಮ ರವರ ಬಳಿಯಿಂದ ಬಂಗಾರದ ಒಡವೆಗಳ ಆಸೆಗಾಗಿ ಆರೋಪಿ0-1 ರವರು ಗಿರಿಜಮ್ಮ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿ-02 ಮಂಜುನಾಥ್ 44 ವರ್ಷ ಮಧುಗಿರಿ ತಾಲೂಕು ಬಿಜಾವರ ಗ್ರಾಮ, ರವರೊಂದಿಗೆ ಸೇರಿ ಇಬ್ಬರು ಸಮಾನ ಉದ್ದೇಶದಿಂದ ಪೂರ್ವ ಸಿದ್ಧತೆ ಮಾಡಿಕೊಂಡು ದಿನಾಂಕ 06/06/2019 ರಂದು ಮೃತೆ ಗಿರಿಜಮ್ಮ ರವರನ್ನು ಮಧ್ಯಾಹ್ನ 12:30 ಗಂಟೆಯಲ್ಲಿ ತುಂಬಾಡಿಯಿಂದ ಕೆಎ-06-ಡಿ-3279 ಟಾಟಾ ಇಂಡಿಕಾ ವಿಸ್ತಾ ಕಾರಿನಲ್ಲಿ ಧರಣಿ ಹೊಸಕೋಟೆಗೆ ಮಟನ್ ಊಟಕ್ಕೆ ಹೋಗಿ ಬರೋಣ ಅಂತ ಹೇಳಿ ಕರೆದುಕೊಂಡು ಬಂದು ಅದೇ ದಿವಸ ಸಂಜೆ 6:30 ಗಂಟೆಗೆ ಬಡವನಹಳ್ಳಿ ಠಾಣಾ ಸರಹದ್ದು ಮಾಯಗೊಂಡನಹಳ್ಳಿ ಕ್ರಾಸ್ ಹತ್ತಿರದ ರಸ್ತೆ ಬದಿಯ ಕೆಂಪಚೆನ್ನೇಹಳ್ಳಿ ಸರ್ವೇ ನಂಬರ್ 8/1 ಪಾಳು ಜಮೀನಿಗೆ ಕರೆದುಕೊಂಡು ಬಂದು ಹೊಂಗೆಗಿಡದ ಮರೆಯಲ್ಲಿ ಕಾರುನಿಲ್ಲಿಸಿ ಕಾರಿನಲ್ಲಿಯೇ ಆರೋಪಿ-01 ರವರು ಹಗ್ಗವನ್ನು ಗಿರಿಜಮ್ಮಳ ಕುತ್ತಿಗೆಗೆ ಬಿಗಿದಿದ್ದು ಕೊಲೆ ಮಾಡುವ ಉದ್ದೇಶದಿಂದ ಆರೋಪಿ01 @ 02 ರವರು ಹಗ್ಗವನ್ನು ಬಿಗಿಯಾಗಿ ಎಳೆದು ಆರೋಪಿ-01 ರವರು ಗಿರಿಜಮ್ಮಳ್ಳ ಎದೆಗೆ ಕಾಲಿನಿಂದ ಒಂದು ಕೈಯಿಂದ ಗುದ್ದಿ ಇಬ್ಬರು ಸೇರಿ ಕೊಲೆ ಮಾಡಿರುತ್ತಾರೆ

ನಂತರ ಆಕೆಯ ಬಳಿಯಿಂದ ಸುಮಾರು 1,83,500/-ರೂ ಬೆಲೆ ಬಾಳುವ ಬಂಗಾರದ ಒಡವೆಗಳನ್ನು ಆರೋಪಿ-01 ರವರು ತೆಗೆದುಕೊಂಡು ಅದೇ ಕಾರಿನಲ್ಲಿ ಗಿರಿಜಮ್ಮಳ ಮೃತ ದೇಹದೊಂದಿಗೆ ರಂಟವಾಳಕ್ಕೆ ಬಂದು ಸಾಕ್ಷಿ-02 ಹೇಮಂತ್ ರವರ ಅಂಗಡಿಯಲ್ಲಿ 2ನೇ ಆರೋಪಿ ಡೀಸಲ್ ತೆಗೆದುಕೊಂಡು ಸಂಜೆ 7:00ಗೆ ಸಮಯದಲ್ಲಿ ಆಂಧ್ರ ಗಡಿಭಾಗದ ರಸ್ತೆ ಬದಿಯಲ್ಲಿದ್ದ ಸಾಕ್ಷಿ 01 ಪುಲಮಘಟ್ಟದ ನಾರಾಯಣಪ್ಪ ರವರ ಜಮೀನಿನಲ್ಲಿ ಕೊಲೆ ಕೃತ್ಯದ ಸಾಕ್ಷಿ ನಾಶ ಮಾಡುವ ಸಲುವಾಗಿ ಗಿರಿಜಮ್ಮಳ ಮೃತ ದೇಹಕ್ಕೆ ಡೀಸೆಲ್ ಹಾಕಿ ಮೃತಳ ಮೊಬೈಲ್ ಮತ್ತು ಸಿಮ್ ಅನ್ನು ಸಿಗದಂತೆ ಎಲ್ಲೋ ಎಸೆದು ಸಾಕ್ಷಿ ನಾಶ ಪಡಿಸಿ ಮೃತಾಳ ಮೈ ಮೇಲಿನ ಒಡವೆಗಳನ್ನು ಕೊರಟಗೆರೆಯ ಮುತ್ತೊಟ್ಟ ಫೈನಾನ್ಸನಲ್ಲಿ ನೆಕ್ಲೆಸ್ ಮತ್ತು ಉಂಗುರ ಅಡವಿಟ್ಟು ಸಾಲ ಪಡೆದು ಇನ್ನುಳಿದ ಕೊಡುಗೆಗಳನ್ನು ತೋವಿನಕೆರೆಯ ಭಾಗ್ಯಲಕ್ಷ್ಮಿ ಜ್ಯೂವೆರ‍್ಸೆಗೆ ಹೊಸದಾಗಿ ಸರ ತಾಳಿ ಓಲೆ ಮಾಡಿಕೊಡುವಂತೆ ಕೊಟ್ಟು ಬಂದಿದ್ದು ತನಿಕೆಯಿಂದ ದೃಢಪಟ್ಟ ಮೇರೆಗೆ ಆರೋಪಿತನ ವಿರುದ್ಧ ಭಾ.ದಂ.¸ಸಂ ಕಲಂ 302. 201,404 ಅಡಿಯಲ್ಲಿ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾಕರ್ ಕೆ ರವರು ದೋಷಾರೂಪಣ ಪಟ್ಟಿ ಸಲ್ಲಿಸಿದ್ದು ಪ್ರಕರಣದ ವಿಚಾರಣೆ ನಡೆಸಿದ ಮಧುಗಿರಿಯ ಮಾನ್ಯ ನಾಲ್ಕನೇ ಅಧಿಕ ಜಿಲ್ಲೆ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಯಾದವ ಕಾರೆಕೆರೆ ರವರು ದಿನಾಂಕ 24-03-2025 ರಂದು ಇಬ್ಬರು ಆರೋಪಿತರರಿಗೆ ಭಾರತೀಯ ದಂಡ ಸಂಹಿತೆಯ ಕಾಲಂ 302, 201, 404 ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲ ರು 60,000 ಗಂಡ ವಿಧಿಸಿ ತೀರ್ಪು ನೀಡಿರುತ್ತಾರೆ ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಬಿ.ಎಂ ನಿರಂಜನಮೂರ್ತಿ ಸರ್ಕಾರಿ ಅಭಿಯೋಜಕರು ವಾದ ಮಾಡಿಸಿದ್ದರು

nazeer ahamad

Recent Posts

ಖಾರದ ಪುಡಿ ಎರಚಿ ಒಡವೆ ಕದ್ದಿದ್ದ ಖದೀಮ ಪೊಲೀಸರ ಬಲೆಗೆ..!

ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…

1 month ago

ನಿವೇಶನದ ಅಳತೆ ಸರ್ವೆಯರ್ ಸಹಾಯಕ ಲೋಕಾಯುಕ್ತ ಬಲೆಗೆ; 65 ಸಾವಿರ ಮೌಲ್ಯದ ನಿವೇಶನ ಅಳತೆಗೆ ₹ 23 ಸಾವಿರ ಲಂಚ..!

ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…

1 month ago

ಅಲಿಗಢದಲ್ಲಿ ವರದಕ್ಷಿಣೆ ಕಿರುಕುಳ ದುರಂತ: ಅತ್ತೆ-ಮಾವ ಒತ್ತಾಯಕ್ಕೆ ತತ್ತರಿಸಿದ ಸೊಸೆ ಟೆರೇಸ್ ಯಿಂದ ಹಾರಾಟ.!

ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…

3 months ago

4 ಕೋಟಿ ವರದಕ್ಷಿಣೆಗಾಗಿ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ ಪತಿ!!

ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…

3 months ago

ವಿದ್ಯಾರ್ಥಿಗಳಿಂದ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ.!!

ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…

3 months ago

ಪ್ರೇಯಸಿ ಫೋನ್‌ ಎತ್ತಿಲ್ಲ: ಕೋಪದಲ್ಲಿ ಯುವಕ ಇಡೀ ಹಳ್ಳಿಯ ಕರೆಂಟ್ ಕಟ್!

ಪ್ರೇಯಸಿ ಫೋನ್‌ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…

3 months ago