ಮುಂಡಗೋಡ :- ತಾಲೂಕಿನಲ್ಲಿ ಕೆ.ಪಿ.ಎಮ್.ಇ ಖಾಯಿದೆ ಅಡಿಯಲ್ಲಿ ಕೆ.ಪಿ.ಎಮ್.ಇ ಮುಂಡಗೋಡ ಪ್ರಾಧಿಕಾರದ ತಂಡವು ದಾಳಿ ನಡೆಸಿ ಅನಧೀಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ ಕ್ಲಿನಿಕ್ ಗಳನ್ನು ಬಂದು ಮಾಡಿಸಿ ನೋಟಿಸ್ ನೀಡಿದ್ದಾರೆ.. ಮುಂಡಗೋಡ ಪಟ್ಟಣದ ಪ್ರದೇಶದಲ್ಲಿ 3 ಕ್ಲಿನಿಕ್ ಮತ್ತು ಗ್ರಾಮೀಣ ಪ್ರದೇಶದಲ್ಲಿ 1 ಕ್ಲಿನಿಕ್ ಮೇಲೆ ದಾಳಿ ಮಾಡಿ ಕ್ಲಿನಿಕ್ ಗೆ ಬೀಗ ಜಡಿದಿದ್ದಾರೆ. ಗ್ರಾಮೀಣ ಭಾಗದಲ್ಲಿ ಸಾಲಗಾಂವ ಗ್ರಾಮದಲ್ಲಿ ವಿನೋದ್ ಕಾಮಗಾರಿ ಎಂಬ ನಕಲಿ ವೈದ್ಯ ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಹೊಂದದೇ ಮನೆಯೊಂದರಲ್ಲಿ ಕ್ಲಿನಿಕ್ ನಡೆಸುತ್ತಿದ್ದನು ಈ ಕ್ಲಿನಿಕ್ ಗೆ ಭೇಟಿ ನೀಡಿ ನೋಟಿಸ್ ಜಾರಿ ಮಾಡಿ ಬಂದ್ ಮಾಡಲಾಗಿದೆ.
ಡಾ| ಕಿರಣ ಮಕ್ಕಳ ಆಸ್ಪತ್ರೆ, ಹುಬ್ಬಳ್ಳಿ – ಸಿರ್ಸಿ ರೋಡ ಮುಂಡಗೋಡ ಕ್ಲಿನಿಕ್, ಶ್ರೀ ಪಾಂಡುರಂಗ ಕ್ಲಿನಿಕ್ ಹುಬ್ಬಳ್ಳಿ – ಸಿರ್ಸಿ ರೋಡ ಮುಂಡಗೋಡ ಕ್ಲಿನಿಕ್ , ಡಾ॥ ಭಾಸ್ಕರ್ ರಾವ್ (ರೋಣ ಮೆಡಿಕಲ್ಸ್,) ಟಿ.ಡಿ.ಬಿ ರೋಡ್ ಮುಂಡಗೋಡ ಕ್ಲಿನಿಕ್ ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಕ್ಲಿನಿಕ್ ಅನ್ನು ಬಂದ ಮಾಡಿಸಲಾಯಿತು. ಹಾಗೂ PCPNDT ACT ಅಡಿಯಲ್ಲಿ ಮುಂಡಗೋಡ ತಾಲೂಕಿನ ಸ್ಕ್ಯಾನಿಂಗ್ ಕೇಂದ್ರಗಳಾದ ತಾಲೂಕಾ ಆಸ್ಪತ್ರೆ, ಮುಂಡಗೋಡ, ಖುಷಿ ಆಸ್ಪತ್ರೆ ಮುಂಡಗೋಡ, ಹೆಗಡೆ ಆಸ್ಪತ್ರೆ ಮುಂಡಗೋಡ ಹಾಗೂ ಜ್ಯೋತಿ ಆಸ್ಪತ್ರೆ, ಮುಂಡಗೋಡ ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸದರಿ ಕಾರ್ಯಾಚರಣೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಯಾದ ಡಾ॥ ಅಶ್ವಿನಿ ಬೋರಕರ್ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ| ನರೇಂದ್ರ ಪವಾರ, ಡಾ॥ ಸಂಜೀವ ಗಲಗಲಿ ಆಯುಷ್ ವೈದ್ಯಾಧಿಕಾರಿಗಳು, ಹಾಗೂ ಡಾ॥ ಭರತ ಡಿ.ಟಿ, ಡಾ॥ ಸ್ವರೂಪರಾಣಿ ಪಾಟೀಲ್ ಆಡಳಿತ ವೈದ್ಯಾಧಿಕಾರಿಗಳು, ತಾಲೂಕಾ ಆಸ್ಪತ್ರೆ, ಮುಂಡಗೊಡ ಶ್ರೀ ಜಿ.ವಾಯ್ ಹೊಂಗಲ್ ಎ.ಎಸ್.ಆಯ್. ಪೋಲಿಸ್ ಠಾಣೆ ಮುಂಡಗೋಡ ಶ್ರೀ ಸಿ.ಬಿ ರಾಠೋಡ್ ಹೆಡ್ ಕಾನ್ಸೆಬಲ್ ಪೋಲಿಸ್ ಠಾಣೆ ಮುಂಡಗೋಡ ಮುಂತಾದವರು ದಾಳಿಯಲ್ಲಿ ಭಾಗವಹಿಸಿದ್ದರು.
ಹಾಗೂ ಈ ಮೂಲಕ ಮುಂಡಗೋಡ ತಾಲೂಕಿನಲ್ಲಿ ಕೆ.ಪಿ.ಎಮ್.ಇ ಖಾಯಿದೆ ಅಡಿಯಲ್ಲಿ ನೊಂದಣಿ ಮಾಡಿಸದೇ ಕ್ಲಿನಿಕ್ ನಡೆಸುತ್ತಿರುವ ನಕಲಿ ವೈದ್ಯರಿಗೆ ತಕ್ಷಣ ಕ್ಲಿನಿಕ್ ಅನ್ನು ಬಂದು ಮಾಡಲು ಹಾಗೂ ಕೆ.ಪಿ.ಎಮ್.ಇ ಖಾಯಿದೆ ಅಡಿಯಲ್ಲಿ ಪರವಾನಿಗೆ ಪಡೆದು ಕ್ಲಿನಿಕ್ ನಡೆಸಲು ಈ ಮೂಲಕ ತಾಲೂಕಾ ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡಿರುತ್ತಾರೆ.
ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…
ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…