Latest

ಗಂಜಾ ಪೆಡ್ಲರ್ ಮೇಲೆ ಕೋಲಾರ ಪೊಲೀಸರ ದಾಳಿ, ಆರೋಪಿ ಪೊಲೀಸರ ಅತಿಥಿ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಐ ಶ್ಕಾಂತರಾಜ್.ಕೆ ರವರು ಇದೇ ತಿಂಗಳ ಜೂನ್ 26 ರಂದು ಸಂಜೆ ಸಮಯ ಠಾಣೆಯಲ್ಲಿದ್ದಾಗ ಕೋಲಾರ-ವೇಮಗಲ್ ರಸ್ತೆಯ ಸಂಗೊಂಡಹಳ್ಳಿ ಗ್ರಾಮದ ಸಮೀಪ ಇರುವ ಖಂಡಿ ಗಣಪತಿ ದೇವಸ್ಥಾನದ ರಸ್ತೆಯಲ್ಲಿ ಒಬ್ಬ ವ್ಯಕ್ತಿ ಆಟೋದಲ್ಲಿ ಗಾಂಜ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳಾದ ಶೇಕ್ ಸಾಧಿಕ್ ಪಾಷ. ರವಿಕುಮಾರ್, ಮುರಳಿ ಮೋಹನ್, ಆಂಜಿನಪ್ಪ, ಸತೀಶ್, ನವೀನ್‌ಕುಮಾ‌ರ್, ಆರತಿ, ರವರು ದಾಳಿ ಮಾಡಿ ಆರೋಪಿಯಾದ ಕೋಲಾರ ನಗರ ವಾಸಿ ಮುಭಾರಕ್ ಪಾಷ 40 ವರ್ಷ, ಇವರನ್ನು ವಶಕ್ಕೆ ಪಡೆದುಕೊಂಡು ಸುಮಾರು ಎರಡು ಲಕ್ಷ ಬೆಲೆ ಬಾಳುವ ನಾಲ್ಕು ಕೆ.ಜಿ ಮಾಧಕ ವಸ್ತುವಾದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಆಟೋ ಸಂಖ್ಯೆ ಕೆ.ಎ-19-ಡಿ-8010 ಹಾಗೂ ಒಂದು ಡಿಜಿಟಲ್ ತೋಕದ ಯಂತ್ರ ವಶಪಡಿಸಿಕೊಂಡು ಮೊ. ಸಂಖೆ 262/2025, 20(b)(ii)(B) NDPS Act-1985 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಕಾರ್ಯವೈಖರಿಯದ ಬಗ್ಗೆ ಕೋಲಾರ ಜಿಲ್ಲೆ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಐಪಿಎಸ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರವಿಶಂಕರ್ ಮತ್ತು ಶ್ ಜಗದೀಶ್ ಹಾಗು ಎಂ.ಎಚ್. ನಾಗ್ತೆ ಪೊಲೀಸ್ ಉಪಾಧೀಕ್ಷಕರು ಕೋಲಾರ ಉಪ ವಿಭಾಗ ರವರು ಮೆಚ್ಚಿ ಪ್ರಸಂಶೆ ವ್ಯಕ್ತ ಪಡಿಸಿದ್ದಾರೆ. ವರದಿ ರೋಷನ್ ಜಮೀರ್

nazeer ahamad

Recent Posts

ಸ್ನಾನಗೃಹದಲ್ಲಿ ಇಣುಕಿ ನೋಡಿದ ಯುವಕನಿಗೆ ಸಾರ್ವಜನಿಕರ ತೀಕ್ಷ್ಣ ಪಾಠ: ಹೊನ್ನಾವರದಲ್ಲಿ ಘಟನೆ

ಹೊನ್ನಾವರ: ಮಹಿಳೆಯರ ಗೌರವ ಮತ್ತು ಗೌಪ್ಯತೆ ಕಡೆಗಣಿಸುವ ಆತ್ಮಹೀನ ಕೃತ್ಯವೊಂದು ಹೊನ್ನಾವರದಲ್ಲಿ ಬೆಳಕಿಗೆ ಬಂದಿದೆ. ಸ್ನಾನ ಮಾಡುವ ಮಹಿಳೆಯನ್ನೇ ಇಣುಕಿ…

28 minutes ago

ಧಾರವಾಡದಲ್ಲಿ ಕುಡಿದ ಮತ್ತಿನಲ್ಲಿ ಆಟೋ ಪಲ್ಟಿ: ಚಾಲಕನಿಗೆ ಗಂಭೀರ ಗಾಯ

ಧಾರವಾಡ: ನಗರದ ಹಳೆ ಕೋರ್ಟ್ ವೃತ್ತದ ಬಳಿ ಆಘಾತಕಾರಿ ಘಟನೆ ಒಂದರಲ್ಲಿ, ಕಂಠಪೂರ್ತಿ ಮದ್ಯಪಾನ ಮಾಡಿಕೊಂಡು ಆಟೋ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬನು…

1 hour ago

ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಗಾಂಜಾ ವಶ: 5 ಲಕ್ಷ ಮೌಲ್ಯದ ಮಾದಕ ವಸ್ತು ಪತ್ತೆ

ಹುಬ್ಬಳ್ಳಿ, ಜೂನ್ 27 – ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ನಡೆದ ಸಂಯುಕ್ತ ತಪಾಸಣೆಯಲ್ಲಿ ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದೆ.…

2 hours ago

ವಿಜಯೇಂದ್ರ ವಿರುದ್ಧ ಯತ್ನಾಳ್ ಕಿಡಿಕಾರಿ: ಬಿಜೆಪಿ ನೇತೃತ್ವಕ್ಕೆ ಸವಾಲು

ಬೆಂಗಳೂರು: ಕರ್ನಾಟಕ ಬಿಜೆಪಿ ಶಿಬಿರದಲ್ಲಿ ಆಂತರಿಕ ಬಿಕ್ಕಟ್ಟು ಮತ್ತಷ್ಟು ಗಂಭೀರ ಸ್ವರೂಪ ಪಡೆಯುತ್ತಿದ್ದು, ನಾಯಕತ್ವದ ವಿರುದ್ ಸಮಾಧಾನ ದಿನದಿಂದ ದಿನಕ್ಕೆ…

4 hours ago

ಮಂಗಳೂರು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಪಿಎಫ್‌ಐ ನಂಟು, ವಿದೇಶಿ ಹಣದ ಜಾಡು ಶೋಧನೆ

ಮಂಗಳೂರು: ವಿವಾದಾತ್ಮಕ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ಹತ್ಯೆ ಪ್ರಕರಣದಲ್ಲಿ ಬಂಧಿತ ಪ್ರಮುಖ…

6 hours ago

ಮೂಕ ಜಾನುವಾರುಗಳ ಮೇಲೂ ಕ್ರೂರತೆ: ಆಂಧ್ರದಲ್ಲಿ ಮೂರು ಎಮ್ಮೆಗಳಿಗೆ ಶಿರಚ್ಛೇದಿಸಿ ಹತ್ಯೆ.

ಆಂಧ್ರಪ್ರದೇಶದಲ್ಲಿ ಪಶುಪ್ರೇಮಿಗಳಿಗೆ ಮತ್ತು ಗ್ರಾಮಸ್ಥರಲ್ಲಿ ಆಕ್ರೋಶ ಹುಟ್ಟಿಸುವಂತ ಘಟನೆ ನಡೆದಿದೆ. ಎಲೂರು ಜಿಲ್ಲೆಯ ಲಿಂಗಪಾಲಂ ಮಂಡಲದ ಮಾಥ ಗುಡೆಮ್ ಉಪನಗರದ…

7 hours ago