Latest

ಅತ್ಯಾಚಾರ ಪ್ರಕರಣದಲ್ಲಿ ಜೈನ ಮುನಿಗೆ 10 ವರ್ಷ ಜೈಲು ಶಿಕ್ಷೆ.

ಸೂರತ್: 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೈನ ಸನ್ಯಾಸಿಯೊಬ್ಬರಿಗೆ ಸೂರತ್ ಸೆಷನ್ಸ್ ಕೋರ್ಟ್ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಶಾಂತಿಸಾಗರ್‌ಜಿ ಮಹಾರಾಜ್ ಎಂಬ ಜೈನ ಮುನಿ, ಇದೀಗ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಬಂಧನದಲ್ಲಿರುವುದು ಖಚಿತವಾಗಿದೆ.

ಈ ಘಟನೆ 7 ವರ್ಷಗಳ ಹಿಂದೆ ಸಂಭವಿಸಿದ್ದು, ತಾಯಿ, ತಂದೆ ಮತ್ತು ಅಣ್ಣನೊಂದಿಗೆ ಯುವತಿ ಮಹಾವೀರ ದಿಗಂಬರ್ ಜೈನ ದೇವಸ್ಥಾನಕ್ಕೆ ಆಗಮಿಸಿದ್ದಳು. ನಂತರ ಕುಟುಂಬಸ್ಥರು ಜೈನ ಧರ್ಮಶಾಲೆಯಲ್ಲಿ ತಂಗಿದ್ದರು. ಇದೇ ಸಂದರ್ಭ ಶಾಂತಿಸಾಗರ್‌ಜಿ, ಯುವತಿಯ ತಂದೆ ಮತ್ತು ಅಣ್ಣನನ್ನು ಬೇರೆ ಕೊಠಡಿಯಲ್ಲಿ ಕೂರಿಸಿ, “ಮಂತ್ರ ಪಠಿಸುವಂತೆ” ಎಂಬ ನೆಪದಲ್ಲಿ ಯುವತಿಯಿದ್ದ ಕೋಣೆಗೆ ಪ್ರವೇಶಿಸಿದ್ದರು. ಆಕೆಯ ವಿರೋಧವನ್ನೆಲ್ಲಾ ಮೀರಿ, “ಇದನ್ನು ಒಪ್ಪಿಕೊಳ್ಳದಿದ್ದರೆ ನಿಮ್ಮ ಕುಟುಂಬಕ್ಕೆ ಬರುವ ಅನಿಷ್ಠ” ಎಂಬ ಬೆದರಿಕೆಯಿಂದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಘಟನೆ ಬಳಿಕ ಆತಂಕಗೊಂಡ ಯುವತಿ, ಧೈರ್ಯವಾಗಿ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಿದ್ದಳು. ಪ್ರಕರಣದ ತನಿಖೆ ಆರಂಭವಾಗಿ, ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪಿಗೆ ನ್ಯಾಯಾಲಯದ ಮೂಲಕ ದಂಡನೆ ವಿಧಿಸಲಾಗಿದೆ. ಅರ್ಜಿದಾರರ ಪರವಾಗಿ ಜೀವಾವಧಿ ಶಿಕ್ಷೆ ವಿಧಿಸುವಂತೆ ಕೋರಲಾಗಿದ್ದರೂ, ಎಲ್ಲಾ ದಳ್ತಾಂಶಗಳನ್ನು ಪರಿಗಣಿಸಿದ ನ್ಯಾಯಾಲಯ ಶಾಂತಿಸಾಗರ್‌ಜಿ ಮಹಾರಾಜ್‌ಗೆ 10 ವರ್ಷಗಳ ಜೈಲು ಶಿಕ್ಷೆ ನೀಡಿದೆ.

ಈ ತೀರ್ಪು, ಧಾರ್ಮಿಕವೇಷದ ಹಿಂದೆ ದುಷ್ಕೃತ್ಯಗಳಿಗೆ ಆಸ್ಪದವಿಲ್ಲ ಎಂಬ ಪಾಠವನ್ನು ಸಮಾಜಕ್ಕೆ ಕಲಿಸುತ್ತಿದೆ.

nazeer ahamad

Recent Posts

ಮನೆ ಬಳಕೆಗೆ ಸಿಗದ ಗೃಹಬಳಕೆಯ ಸಿಲಿಂಡರ್‌ಗಳು ಹೋಟೆಲ್‌ಗಳಲ್ಲಿ , ಅಧಿಕಾರಿಗಳ ನಿರ್ಲಕ್ಷ್ಯ

ಮುಂಡಗೋಡ: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಅಮೇರಿಕಾ ಉದ್ವಿಗ್ನತೆ (ಯುದ್ಧ) ಪರಿಣಾಮವಾಗಿ ಇಂಧನ ಕ್ಷೇತ್ರದಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯ…

1 hour ago

ಕರ್ನಾಟಕ ಹೈಕೋರ್ಟ್‌ನಲ್ಲಿ 70 ಹುದ್ದೆಗಳು: ಆಸಕ್ತರಿಗೆ ಉದ್ಯೋಗದ ಸುವರ್ಣಾವಕಾಶ

ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…

7 hours ago

ಕೋರ್ಟ್ ಉದ್ಯೋಗದ ಹೆಸರಿನಲ್ಲಿ ಕೋಟಿ ಕೋಟಿ ಮೋಸ: ಬೆಂಗಳೂರಿನಲ್ಲಿ ಫ್ರಾಡ್ ದಂಪತಿ ಬಂಧನ

ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…

7 hours ago

ಗಂಡ ಬಿಟ್ಟ ಮಹಿಳೆಯರೇ ಇವನ ಟಾರ್ಗೆಟ್; 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ..!

ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…

7 hours ago

ಗಂಡನಿಲ್ಲದ ವೇಳೆ ಬಾಡಿಗೆಗೆ ಇದ್ದ ಯುವಕನ ಜೊತೆ ಸರಸ; ಅಡ್ಡಿಯಾದ ಅತ್ತೆಯನ್ನು ಕೊಂದ ಸೊಸೆ

ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…

7 hours ago

ಗೌರಿಬಿದನೂರಿನಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಸಾವು, ಪುತ್ರನಿಗೆ ಗಾಯ

ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…

8 hours ago