ಅಮೆರಿಕಾ ಮತ್ತು ಇರಾಕ್ ಸೇನೆಗಳು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ISIS ಉನ್ನತ ನಾಯಕ ಅಬು ಖದಿಜಾ ವಧೆಯಾಗಿರುವುದು ದೃಢಪಟ್ಟಿದೆ. ಅಮೆರಿಕಾ ಸೆಂಟ್ರಲ್ ಕಮಾಂಡ್ (CENTCOM) ಈ ದಾಳಿಯ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಇರಾಕ್‌ನ ಅಲ್ ಅನ್ಬಾರ್ ಪ್ರಾಂತ್ಯದಲ್ಲಿ ನಡೆದ ನಿಖರವಾದ ವಾಯುದಾಳಿಯಲ್ಲಿ ಅಬು ಖದಿಜಾ ಮತ್ತು ಮತ್ತೊಬ್ಬ ISIS ಕಾರ್ಯಕರ್ತ ಹತರಾಗಿದ್ದಾರೆ.

ಅಬು ಖದಿಜಾ ISIS ನ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯ ಎಮಿರ್ ಆಗಿದ್ದನು. ಆತ ಜಾಗತಿಕ ಮಟ್ಟದಲ್ಲಿ ಈ ಸಂಘಟನೆಯ ಕಾರ್ಯಾಚರಣೆಗಳು, ಲಾಜಿಸ್ಟಿಕ್ಸ್ ಮತ್ತು ಹಣಕಾಸು ವ್ಯವಸ್ಥೆಗಳ ಸಂಯೋಜನೆಗೆ ಪ್ರಭಾವಶಾಲಿ ಪಾತ್ರ ವಹಿಸುತ್ತಿದ್ದನು.

CENTCOM ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಭಯೋತ್ಪಾದಕರು ಸ್ಫೋಟಗೊಳ್ಳದ “ಆತ್ಮಹತ್ಯಾ ಜಾಕೆಟ್”ಗಳನ್ನು ಧರಿಸಿದ್ದಿದ್ದು, ಬಹು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆಂದು ಕಾಣಿಸುತ್ತದೆ. ಅಮೆರಿಕಾ ಸೇನೆ, ಹಿಂದಿನ ದಾಳಿಯಲ್ಲಿ ಸಂಗ್ರಹಿಸಿದ ಡಿಎನ್‌ಎ ಪರೀಕ್ಷೆಯ ಮೂಲಕ ಅಬು ಖದಿಜಾವನ್ನು ಗುರುತಿಸಿದ್ದು, ಈ ದಾಳಿ ತೀವ್ರ ನಿಗಾ ಮತ್ತು ಪೂರ್ವಯೋಜನೆಯೊಂದಿಗೆ ನಡೆಸಲಾಗಿತ್ತು.

CENTCOM ಕಮಾಂಡರ್ ಜನರಲ್ ಮೈಕೆಲ್ ಎರಿಕ್ ಕುರಿಲ್ಲಾ ಈ ಕುರಿತು ಹೇಳಿಕೆ ನೀಡುತ್ತಾ, “ಅಬು ಖದಿಜಾ ISIS ನ ಪ್ರಮುಖ ಸದಸ್ಯನಾಗಿದ್ದ. ನಮ್ಮ ದೇಶ ಮತ್ತು ಮಿತ್ರ ರಾಷ್ಟ್ರಗಳಿಗೆ ಅಪಾಯ ಉಂಟುಮಾಡುವ ಭಯೋತ್ಪಾದಕರ ವಿರುದ್ಧ ಹೋರಾಟ ಮುಂದುವರಿಯುತ್ತದೆ” ಎಂದಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಕಾರ್ಯಾಚರಣೆಯ ಬಗ್ಗೆ ಪ್ರತಿಕ್ರಿಯಿಸಿ, “ಇರಾಕ್ ಮತ್ತು ಕುರ್ದಿಶ್ ಪ್ರಾದೇಶಿಕ ಸರ್ಕಾರದ ಸಹಕಾರದೊಂದಿಗೆ ಅಬು ಖದಿಜಾನನ್ನು ಹತ್ಯೆ ಮಾಡಲಾಗಿದೆ. ಬಲದ ಮೂಲಕ ಶಾಂತಿ!” ಎಂದು ಹೇಳಿಕೆ ನೀಡಿದ್ದಾರೆ.

Related News

error: Content is protected !!