ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರದ ಸದ್ದು ಭಾರತದ ಬಾಕ್ಸ್ ಆಫೀಸ್‌ನಲ್ಲಿ ಕೇಳಿಬರುತ್ತಿರುವಂತೆಯೇ, ಅದರ ಪ್ರಭಾವ ನೆರೆ ರಾಷ್ಟ್ರ ಪಾಕಿಸ್ತಾನದಲ್ಲೂ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಲಿಯಾರಿ ಪ್ರದೇಶದಲ್ಲಿ ನಡೆದಿದೆಯೆಂದು ಹೇಳಲಾಗುತ್ತಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಭಾರತೀಯ ಗುಪ್ತಚರನಾಗಿ ಪಾಕಿಸ್ತಾನದ ಲಿಯಾರಿಗೆ ನುಗ್ಗಿ ಕಾರ್ಯಾಚರಣೆ ನಡೆಸುವ ಕಥಾಹಂದರ ಹೊಂದಿದೆ. ಈ ಹಿನ್ನೆಲೆ, ಪಾಕಿಸ್ತಾನದಲ್ಲಿ ಕೆಲವರು ಸಿನಿಮಾವನ್ನು ನಿಜವೆಂದು ಭಾವಿಸಿ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸುತ್ತಿರುವ ದೃಶ್ಯಗಳು ವೈರಲ್ ಆಗುತ್ತಿರುವುದು ಗಮನಸೆಳೆಯುತ್ತಿದೆ.
ಸಿನಿಮಾ ಅಧಿಕೃತವಾಗಿ ಪಾಕಿಸ್ತಾನದಲ್ಲಿ ನಿಷೇಧಗೊಂಡಿದ್ದರೂ, ಕೆಲವರು ಅದನ್ನು ನೋಡಿರುವ ಹಿನ್ನೆಲೆಯಲ್ಲಿ ಲಿಯಾರಿಯಲ್ಲಿ ಪೊಲೀಸರು ಎಚ್ಚರಿಕೆ ಕ್ರಮವಾಗಿ ಗಸ್ತು ಹೆಚ್ಚಿಸಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ ಇದುವರೆಗೆ ಯಾವುದೇ ಭಾರತೀಯ ಗುಪ್ತಚರರ ಪತ್ತೆಯಾದ ಮಾಹಿತಿ ಇಲ್ಲ.
ಇದಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನ ಪೊಲೀಸ್ ಅಧಿಕಾರಿಗಳು, ವೈರಲ್ ವಿಡಿಯೋದಲ್ಲಿ ಕಾಣಿಸುತ್ತಿರುವವರು ನಿಜವಾದ ಪೊಲೀಸರು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜನರು ವದಂತಿಗಳಿಗೆ ಕಿವಿಗೊಡಬಾರದು, ಈ ವಿಡಿಯೋ ನಿಜಾಸತ್ಯತೆ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದಾರೆ.
ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು “ಸಿನಿಮಾ ಪ್ರಭಾವದಿಂದ ಇಂತಹ ಗೊಂದಲಗಳು ಉಂಟಾಗಿವೆ” ಎಂದು ಹೇಳಿದರೆ, ಇನ್ನೂ ಕೆಲವರು “ಸಿನಿಮಾವನ್ನೇ ನಿಜವೆಂದು ನಂಬುವುದು ಅತಿಶಯ” ಎಂದು ವ್ಯಂಗ್ಯ ಮಾಡಿದ್ದಾರೆ.
ಉತ್ತರ ಪ್ರದೇಶದ ಸುಮೇರ್ಪುರ್ ಗ್ರಾಮದ ಮಾಜಿ ಅಧ್ಯಕ್ಷ ಮುಸ್ತಾಕ್ ಗುಲ್ಶನ್ ಅಲಿಯಾಸ್ ಮುನ್ನಾ, ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಪ್ರಕರಣ…
ಮುಂಡಗೋಡ: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಅಮೇರಿಕಾ ಉದ್ವಿಗ್ನತೆ (ಯುದ್ಧ) ಪರಿಣಾಮವಾಗಿ ಇಂಧನ ಕ್ಷೇತ್ರದಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯ…
ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…
ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…
ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…
ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…