Latest

ಧರ್ಮಸ್ಥಳ ದೇಗುಲವೇ ಉಗ್ರರ ನಿಜವಾದ ಗುರಿ? ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದ ನೂತನ ಬಹಿರಂಗ!

ಬೆಂಗಳೂರು, ಆಗಸ್ಟ್ 7: 2022ರ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದು ಸಂಚಲನಕಾರಿ ಮಾಹಿತಿ ಹೊರಬಿದ್ದಿದೆ. ಈ ಸ್ಫೋಟದ ಮೂಲ ಉದ್ದೇಶ ಮಂಗಳೂರು ಅಲ್ಲ, ಧರ್ಮಸ್ಥಳದ ಪ್ರಸಿದ್ಧ ಮಂಜುನಾಥಸ್ವಾಮಿ ದೇವಾಲಯವಾಗಿತ್ತೆಂಬ ಸ್ಫೋಟಕ ಮಾಹಿತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ವೇಳೆ ಬಹಿರಂಗಪಡಿಸಿದೆ.

ಇ.ಡಿ. ವರದಿ ಪ್ರಕಾರ, ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಈ ಸ್ಫೋಟಕ ಸಾಧನವನ್ನು ಧರ್ಮಸ್ಥಳದ ದೇಗುಲದಲ್ಲಿ ಇಟ್ಟು ಬಾಂಬ್ ಸ್ಫೋಟ ನಡೆಸುವ ಪ್ಲಾನ್ ರೂಪಿಸಿಕೊಂಡಿದ್ದ. ಆದರೆ, ಬಾಂಬ್‌ಗೆ ಬಳಸಲಾಗಿದ್ದ ಟೈಮರ್ ಅನ್ನು ತಪ್ಪಾಗಿ ಹೊಂದಿಸಿದ್ದ ಕಾರಣ, ಸಂಚು ವಿಫಲವಾಯಿತು. ಮೂಲತಃ 90 ನಿಮಿಷಗಳ ನಂತರ ಸ್ಫೋಟವಾಗಬೇಕಾಗಿದ್ದ ಬಾಂಬ್, ಕೇವಲ 9 ಸೆಕೆಂಡುಗಳಲ್ಲಿ ಸ್ಫೋಟಗೊಂಡು ಆಟೋ ರಿಕ್ಷಾದೊಳಗೆ ಭಯಾನಕ ದುರಂತ ಸೃಷ್ಟಿಸಿತ್ತು.

ಈ ಘಟನೆಯ ನಂತರ ಶಾರಿಕ್‌ನ್ನು ಗಂಭೀರ ಗಾಯದ ಸ್ಥಿತಿಯಲ್ಲಿ ಬಂಧಿಸಲಾಗಿತ್ತು ಮತ್ತು ತನಿಖೆ ಮುಂದುವರೆದಿತ್ತು. ಇದೀಗ ಇ.ಡಿ. ನಡೆಸಿದ ವಿಚಾರಣೆಯು ಶಾರಿಕ್ ಮತ್ತು ಇತರ ಶಂಕಿತರು ಹಿಂದಿನಿಂದಲೂ ಧರ್ಮಸ್ಥಳದ ದೇವಾಲಯವನ್ನು ಉಗ್ರ ಕ್ರಮಗಳ ಲಕ್ಸ್ಯವನ್ನಾಗಿ ಮಾಡಿಕೊಂಡಿದ್ದನ್ನು ದೃಢಪಡಿಸಿದೆ.

ಪ್ರಸಿದ್ಧ ಧಾರ್ಮಿಕ ತಾಣವನ್ನೇ ನಾಶಮಾಡಲು ಸಂಚು ರೂಪಿಸಲಾಗಿದ್ದ ಈ ಬೆಳವಣಿಗೆ ಧರ್ಮಸ್ಥಳದ ಭದ್ರತೆ ಕುರಿತಾಗಿ ಗಂಭೀರ ಚರ್ಚೆಗೆ ಕಾರಣವಾಗಿದ್ದು, ತನಿಖಾ ಸಂಸ್ಥೆಗಳು ಮತ್ತಷ್ಟು ಎಚ್ಚರದಿಂದ ಕಾರ್ಯನಿರ್ವಹಿಸುತ್ತಿವೆ.

ಇದೀಗ ಈ ಹೊಸ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಹಿಂದಿನ ಸ್ಫೋಟದ ಹಿಂದೆ ಉಳ್ಳ ನಿಖರ ಉದ್ದೇಶ ಮತ್ತು ಶಾರಿಕ್‌ನ ಸಂಪರ್ಕಗಳು ಮತ್ತಷ್ಟು ತೆರೆದ ಮೇಲೆ ಬರಲಿವೆ ಎಂದು ನಿರೀಕ್ಷಿಸಲಾಗಿದೆ.

nazeer ahamad

Recent Posts

ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಮತ್ತೊಂದು ಆರೋಪ: 2018 ರಿಂದ 2023 ರವರೆಗೆ ಮುಖ್ಯ ಶಿಕ್ಷಕಿಯ ಮೇಲೆ ಲೈಂಗಿಕ ದೌರ್ಜನ್ಯ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್…

13 hours ago

ರಾಜ್ಯದಲ್ಲಿ ಪಾರ್ಲೆ-ಜಿ ಉತ್ಪಾದನೆ ಸ್ಥಗಿತ, ಬಿಸ್ಕೆಟ್ ಅಭಾವದ ಆತಂಕ

Iran-Israel ಸಂಘರ್ಷದ ಪರೋಕ್ಷ ಪರಿಣಾಮವಾಗಿ ರಾಜ್ಯದಲ್ಲಿ ಬಿಸ್ಕೆಟ್ ಅಭಾವದ ಭೀತಿ ಎದುರಾಗಿದೆ. ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಬಳಸುವ Parle-G ಬಿಸ್ಕೆಟ್‌ಗಳ…

14 hours ago

ನವಲಗುಂದದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಮುಖ್ಯಶಿಕ್ಷಕ ಬಂಧನ

ಧಾರವಾಡ ಜಿಲ್ಲೆಯ Navalgund ತಾಲೂಕಿನ ಒಂದು ಗ್ರಾಮದಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯಶಿಕ್ಷಕನ ವಿರುದ್ಧ 10 ವರ್ಷದ…

1 day ago

ಮೇಲಾಧಿಕಾರಿ ಕಿರುಕುಳ ಆರೋಪ: ಪಾವಗಡದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಆತ್ಮಹತ್ಯೆ

ತುಮಕೂರು ಜಿಲ್ಲೆಯ Pavagada ಪಟ್ಟಣದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಮೇಲಾಧಿಕಾರಿಗಳ ಕಿರುಕುಳದಿಂದ ಮನನೊಂದು ಅಧಿಕಾರಿಯೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು…

1 day ago

14ರ ಬಾಲಕನಿಂದ ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭಿಣಿ? ವೈರಲ್ ವಿಡಿಯೋಗೆ ಆಕ್ರೋಶ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. X ನಲ್ಲಿ ವೈರಲ್ ಆಗಿರುವ ಈ ವಿಡಿಯೋ…

1 day ago

ಕೊನೆಗೂ 21 ದಿನಗಳ ಬಳಿಕ ಅಣುಸ್ಥಾವರದ ಮೇಲೆ ಅಮೆರಿಕ ದಾಳಿ! ಇರಾನ್ ಅಣು ಕೇಂದ್ರ ವಿಕಿರಣ ಸೋರಿಕೆ ಭೀತಿ ಹೆಚ್ಚಳ?

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ United States ಮತ್ತು Israel ಪಡೆಗಳು Iranನ ಅತ್ಯಂತ ಪ್ರಮುಖ ಪರಮಾಣು ಕೇಂದ್ರವಾದ Natanz…

1 day ago