ಬೆಂಗಳೂರು, ಜು.25 – ತಿರುಪತಿ ದೇವಾಲಯದ ದರ್ಶನಕ್ಕೆ ನಿತ್ಯವೂ ಸಾವಿರಾರು ಕನ್ನಡಿಗರು ತೆರಳುತ್ತಿರುವುದು ಸಾಮಾನ್ಯ. ಆದರೆ, ಅಲ್ಲಿ ಕನ್ನಡಿಗರಿಗಾಗುವ ಅನ್ಯಾಯ ಮತ್ತು ಅವಮಾನಗಳು ಈಗ ಮತ್ತೊಮ್ಮೆ ಚರ್ಚೆಗೆ ಬಂದಿವೆ. ಕನ್ನಡಿಗರೆಂದು ಗುರುತಿಸುವ ಸ್ಟಿಕರ್‌ಗಳನ್ನು ತಮ್ಮ ಕಾರಿನಲ್ಲಿ ಹಾಕಿಕೊಂಡಿದ್ದಕ್ಕೆ, ತಿರುಪತಿಯಲ್ಲಿ ಕೆಲವರಿಗೆ ಅವಮಾನ ಅನುಭವವಾಗಿದೆ.

ಹೌದು, ತಿರುಪತಿಗೆ ತೆರಳಿದ ಕೆಲ ಯುವಕರು, “ಕನ್ನಡಿಗ” ಎಂಬ ಪದವಿರುವ ಸ್ಟಿಕರ್‌ಗಳನ್ನು ತಮ್ಮ ವಾಹನದ ಮೇಲೆ ಹಾಕಿಕೊಂಡಿದ್ದರು. ಆದರೆ ಸ್ಥಳೀಯ ಅಧಿಕಾರಿಗಳು ಅಥವಾ ಸ್ಥಳೀಯರು ಅದನ್ನು ತೆಗೆಸಿದ ಘಟನೆ ನಡೆದಿದೆ. ಈ ಕುರಿತು ಯುವಕರೊಬ್ಬರು ವಿಡಿಯೋ ಮೂಲಕ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ.

“ನಾವು ನಮ್ಮ ಹಣದಲ್ಲಿ ಕನ್ನಡಿಗ ಎಂದು ಕಾರಿನಲ್ಲಿ ಹಾಕಿಸಿಕೊಂಡರೆ, ಆದರೆ ತಿರುಪತಿಗೆ ಬಂದಾಗ ‘ಕನ್ನಡಿಗ’ ಅಂದರೆ ಸಹಿಸದ ಪರಿಸ್ಥಿತಿ ಇದೆ. ಕಾರಿನ ಗ್ಲಾಸ್‌ನ ಸ್ಟಿಕರ್ ತೆಗೆಸಲು ಒತ್ತಾಯ ಮಾಡ್ತಾರೆ,” ಎಂದು ಯುವಕನೊಬ್ಬ ನೋವು ವ್ಯಕ್ತಪಡಿಸಿದ್ದಾರೆ.

ಇನ್ನೊಬ್ಬ ಯುವಕ ಮಾತನಾಡುತ್ತಾ, “ಫೋಟೋ ತೆಗೆಸೋದಕ್ಕೂ ಮೊದಲು ನಿರ್ಬಂಧ ಇತ್ತು, ಅದೂ ಸಹಿ. ಆದರೆ ಈಗ ನಮ್ಮ ಭಾಷೆಯಲ್ಲಿ ಏನಾದರೂ ಬರೆದುಕೊಂಡರೂ ತೊಂದರೆ ಆಗ್ತಾ ಇದೆ. ಇದು ನಮ್ಮ ಹಕ್ಕಿನ ಮೇಲೆ ಕತ್ತರಿ ಹಾಕಿದಂತಾಗಿದೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇಂಥ ಘಟನೆಗಳು ಕನ್ನಡಿಗರಲ್ಲಿ ಆಕ್ರೋಶ ಉಂಟುಮಾಡಿದ್ದು, ಇತರ ರಾಜ್ಯಗಳಲ್ಲಿ ಕನ್ನಡಿಗರಿಗೆ ಸೂಕ್ತ ಗೌರವ ಸಿಗುತ್ತಿಲ್ಲ ಎಂಬ ಆರೋಪ ಮತ್ತೊಮ್ಮೆ ಮೇಲಕ್ಕೆತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸರ್ಕಾರ ಹಾಗೂ ತಿರುಪತಿ ದೇವಾಲಯದ ಆಡಳಿತದಿಂದ ಸ್ಪಷ್ಟನೆ ನಿರೀಕ್ಷಿಸಲಾಗಿದೆ.

Related News

error: Content is protected !!