
ಚಿಕ್ಕಮಗಳೂರು: ಸಾಮಾಜಿಕ ಮಾಧ್ಯಮದ ಮೂಲಕ ಪ್ರಾರಂಭವಾದ ಪ್ರೀತಿಯ ಕಥೆ, ಕೊನೆಗೆ ಯುವಕನೊಬ್ಬನಿಗೆ ಕಹಿಯಾದ ಪಾಠವನ್ನೇ ಕಲಿಸಿದ ಘಟನೆ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಕೋಲಾರದ ಶ್ರೀನಿವಾಸಪುರ ತಾಲೂಕಿನ ದ್ವಾರಸಂದ್ರ ಗ್ರಾಮದ ನಿವಾಸಿ 25 ವರ್ಷದ ನವನೀತ್ ಎಂಬ ಯುವಕ, ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಮಹಿಳೆಯನ್ನು ಹುಡುಕಿಕೊಂಡು ನೂರಾರು ಕಿಲೋಮೀಟರ್ ದೂರದ ಚಿಕ್ಕಮಗಳೂರಿಗೆ ಬಂದಿದ್ದ. ಇನ್ಸ್ಟಾಗ್ರಾಂನಲ್ಲಿ ಪ್ರೀತಿಯ ಮಾತುಗಳಿಂದ ಹತ್ತಿರವಾದ ಈ ಸಂಬಂಧ ಒಂದು ವರ್ಷದವರೆಗೆ ಚಾಟ್ ಮೂಲಕ ಮುಂದುವರಿದಿತ್ತು. ಬಳಿಕ ಮಹಿಳೆ ನವನೀತ್ ಮನೆಯವರೆಗೂ ಬಂದು ಮೂರು ದಿನಗಳ ಕಾಲ ಉಳಿದು ಹೋಗಿದ್ದಳು.
ಅನ್ನಪೂರ್ಣ ಎಂಬ 35 ವರ್ಷದ ಈ ಮಹಿಳೆ, ತಾನು ಮದುವೆಯಾಗಿಲ್ಲ ಎಂದು ನವನೀತ್‌ಗೆ ಭರವಸೆ ನೀಡಿದ್ದಳು. ನಾನಿನ್ನೂ ಮದುವೆಯಾಗಿಲ್ಲ, ನೀನು ನನ್ನ ಜೀವನಸಂಗಾತಿಯಾಗು ಎಂದು ಹೇಳಿದಳು. ನವನೀತ್ ಕೂಡ ಈ ಭರವಸೆಯ ಮೇಲೆ ತಮ್ಮ ಸಂಬಂಧವನ್ನು ಮುಂದುವರಿಸಿದ್ದ. ಮದುವೆಗೆ ಮೊದಲಿಗೆ ಒಪ್ಪಿಗೆ ಸೂಚಿಸಿದ ಮಹಿಳೆ, ನಂತರ ಆರು ತಿಂಗಳ ನಂತರ ಮದುವೆಯಾಗೋಣ ಎಂದು ಕಾಲ ತೆಗೆದಿದ್ದಳು.
ಆಕೆ ನವನೀತ್ ಮನೆಗೆ ಬಂದು ಇರುತ್ತಿದ್ದ ಸಂದರ್ಭದಲ್ಲೂ ಅವರ ಅಕ್ಕ-ಭಾವ ಮಾದರಿ ಪ್ರೀತಿಯನ್ನು ಕಂಡು ಮದುವೆಯಾಗಿ ಕೊಳ್ಳೋಣ ಎಂದು ಸಲಹೆ ನೀಡಿದ್ದರು. ಆದರೆ ಅಪ್ಪಣೆಯಾಗಲಿಲ್ಲ. ಕೆಲ ದಿನಗಳ ನಂತರ ಊರಿಗೆ ಹಿಂದಿರುಗಿದ್ದ ಮಹಿಳೆ, ತನ್ನ ಅಣ್ಣನ ಮಗನಿಗೆ ಆರೋಗ್ಯ ಸಮಸ್ಯೆ ಎಂದು ಹೇಳಿ ಹಣ ಕೇಳಿದ್ದಳು. ನವನೀತ್ ಹಣ ಕಳುಹಿಸಿದ ಕೂಡಲೇ, ಆಕೆ ಮೊಬೈಲ್ ನಂಬರ್ ಬ್ಲಾಕ್ ಮಾಡಿ ಸಂಪರ್ಕ ಕಡಿದಿದ್ದಳು.
ಯಾಕೆ ಹೀಗೆ ಮಾಡಿದೆ ಎಂಬ ಸ್ಪಷ್ಟತೆಯ ಉದ್ದೇಶದಿಂದ ನವನೀತ್ ತನ್ನ ಬೆನ್ನುಹತ್ತಿ ಹೊಸಕೆರೆ ಗ್ರಾಮದವರೆಗೂ ಹೋಗಿ ಆಕೆಯ ಮನೆಗೆ ತಲುಪಿದಾಗ ಸತ್ಯ ಬಹಿರಂಗವಾಯಿತು. ಯಾಕೆಂದರೆ ಆಕೆಯಿಗೂ ಪತಿಯೂ ಇದ್ದರು. ಮದುವೆಯಾಗಿ ಮೂರು ಮಕ್ಕಳನ್ನು ಹೆತ್ತಿದ್ದಳು ಅನ್ನಪೂರ್ಣ. ಈ ಸತ್ಯ ತಿಳಿದಾಗ ನವನೀತ್ ಆತಂಕದಿಂದ ಶಾಕ್‌ನಲ್ಲೇ ಬಿದ್ದಿದ್ದ.
ತಾನೊಬ್ಬ ಪ್ರೀತಿಗೋಸ್ಕರ ನಂಬಿಕೆಯಿಂದ ಎಲ್ಲವನ್ನೂ ಕೊಟ್ಟು ಬಿಟ್ಟಿದ್ದೆ, ಹಣವೂ ಹೋದ್, ಭರವಸೆಗೂ ದರೋಡೆ ಆಯಿತು ಎಂದು ನವನೀತ್ ಅಕ್ರೋಶದಿಂದ ಹೇಳಿಕೊಂಡಿದ್ದಾನೆ. ಇನ್ಸ್ಟಾಗ್ರಾಂ ಚಾಟ್‌ನ ಪ್ರೇಮ ಸಂಬಂಧವೇ ಅವನ ಬದುಕಿನಲ್ಲಿ ಗಂಭೀರ ತೊಂದರೆಯಾಗಿ ಪರಿಣಮಿಸಿದೆ.