ಕೋಲಾರ: ವಿಶೇಷ ಸವಲತ್ತಿನ ಎ.ಸಿ ಕೋಚ್ ಹತ್ತಿ ಪ್ರತಿಭಟನೆ ನಡೆದ ಸ್ಥಳಕ್ಕೆ ದೌಡಾಯಿಸಿದ ಡಿ.ಆರ್.ಎಂ ನೆನ್ನೆ ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ನಡೆಸಿದ ರೈಲು ತಡೆದು ಪ್ರತಿಭಟನೆಯ ವಿವರ ಪಡೆಯಲು ಮತ್ತು ಮಾಧ್ಯಮಗಳಿಗೆ ಪತ್ರಿಕಾ ಗೋಷ್ಠಿ ನೀಡಲು ಆಗಮಿಸಿದ ಬೆಂಗಳೂರು ಡಿವಿಜನಲ್ ರೈಲ್ವೆ ಮ್ಯಾನೇಜರ್ (ಡಿ.ಆರ್.ಎಂ.) ಅಮಿತೇಶ್ ಕುಮಾರ್ ಸಿನ್ಹಾ.
ಗಾಢ ನಿದ್ರೆಯಲ್ಲಿ ಮಲಗಿದ್ದ ಬೆಂಗಳೂರು ರೈಲ್ವೆ ಅಧಿಕರಿಗಳು ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ನೆನ್ನೆ ಜ. 29 ರಂದು ಮಾರಿಕುಪ್ಪಂ – ಕೆ.ಎಸ್.ಆರ್ ಮೆಮೊ ರೈಲು ಸಂಖ್ಯೆ 66512 ದೈನಂದಿನ ಪ್ರಯಾಣಿಕರು ರೈಲು ತಡೆಯುವ ಮೂಲಕ ನಡೆಸಿದ ಪ್ರತಿಭಟನೆಯಿಂದ ಅಧಿಕಾರಿಗಳಿಗೆ ಬಿಸಿ ಮುಟ್ಟಿದೆ ತಮ್ಮ ಗಾಢ ನಿದ್ರೆಯಿಂದ ಎಚ್ಚೆತ್ತುಕೊಂಡು ಕೂಡಲೇ ಮಾಧ್ಯಮ ಸುದ್ದಿಗೋಷ್ಠಿ ನಡೆಸಲು ದೌಡಾಯಿಸಿದ ಡಿ ಆರ್ ಎಂ ಮತ್ತು ರೈಲ್ವೆ ಅಧಿಕಾರಿಗಳು.
ಪ್ರತಿಭಟನೆಗೆ ಸ್ಪಂದಿಸಿ ಮುಂದೆ ಆಗಬಹುದಾದ ದೊಡ್ಡ ಅನಾಹುತದಿಂದ ಪಾರಾಗುವ ಭರವಸೆ ನೀಡಿ ಕೂಡಲೇ ಜನರ ಹಿತ ದೃಷ್ಟಿಯಿಂದ ಹೆಚ್ಚುವರಿ ಕೋಚ್ ಗಳನ್ನು ಅಂತವಾಗಿ ಅಳವಡಿಸಲಾಗುವುದು ಎಂದು ಡಿ.ಆರ್.ಎಂ. ಅಮಿತೇಶ್ ಕುಮಾರ್ ಸಿನ್ಹಾ ತಿಳಿಸಿದರು.
ಈ ವೇಳೆ ಮಧ್ಯಮ ಸುದ್ದಿಗೋಷ್ಠಿ ನಡೆಸಿದ ಕೋಲಾರ ಸಂಸಾರದ ಎಂ. ಮಲ್ಲೇಶ್ ಬಾಬು ಮತ್ತು ಡಿವಿಜನಲ್ ರೈಲ್ವೆ ಮ್ಯಾನೇಜರ್ (ಡಿ.ಆರ್.ಎಂ.) ಅಮಿತೇಶ್ ಕುಮಾರ್ ಸಿನ್ಹಾ ರವರು ಜ. 30 ರಿಂದ ಹೆಚ್ಚುವರಿ ಬೋಗಿ ಅಳವಡಿಸ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ, ಹಲವು ರೈಲ್ವೆ ಭೋಗಿಗಳು ದುರಸ್ತಿ ಕಾರ್ಯದಲ್ಲಿರುವ ಕಾರಣ 12 ರಿಂದ 8 ಭೋಗಿಗಳಿಗೆ ಇಳಿಸಬೇಕಾದ ಪರಿಸ್ಥಿ ಉಂಟಾಯಿತು, ಇದರ ಪರಿಣಾಮ ಪ್ರಯಾಣಿಕರಿಗೆ ಭಾರಿ ತೊಂದರೆ ಉಂಟಾಗಿದ್ದು ಕಂಡುಬಂದಿದೆ, ತಕ್ಷಣ 8 ಭೋಗಿಗಳಿಗೆ 4 ಭೋಗಿಗಳು ಜೋಡಿಸಿ ರೈಲನ್ನು 12 ಬುಗಿಗಳಾಗಿ ಜ. 30 ರಿಂದಲೆ ಜಾರಿಗೆ ತರುತ್ತೇವೆ ಮತ್ತು ಒಂದು ತಿಂಗಳ ಒಳಗಾಗಿ ಇದನ್ನು ಮತ್ತೊಮ್ಮೆ ನಾಲ್ಕು ಹೆಚ್ಚುವರಿ ಭುಗಿಗಳನ್ನು ಜೋಡಿಸಿ ಒಟ್ಟು 16 ಭೋಗಿಗಳಾಗಿ ಎಂದಿನಂತೆ ಮಾಡಲಾಗುವುದು ಇದರಿಂದ ಸಾರ್ವಜನಿಕರಿಗೆ ಬಹಳ ಅನುಕೂಲವುದು ಎಂದು ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಸಂಸದರು ಮತ್ತು ಡಿ.ಆರ್.ಎಂ ಭರವಸೆ ನೀಡಿದ್ದಾರೆ.
ಇದೇ ವೇಳೆ ಮರಿಕುಪ್ಪಂ (ಕೆಜಿಎಫ್) ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಆಂಧ್ರಪ್ರದೇಶದ ಕುಪ್ಪಂ ಮಾರ್ಗಕ್ಕೆ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ಹಳಿ ಪರಿಶೀಲನೆ ನಡೆಸಿ ಬಂಗಾರಪೇಟೆ ಸುತ್ತಲಿನ ಬೂದಿಕೋಟೆ ಮುಖ್ಯರಸ್ತೆ, ಬಂಗಾರಪೇಟೆ – ಕೋಲಾರ ಮುಖ್ಯರಸ್ತೆಯಲ್ಲಿ ಎಸ್ ಎನ್ ರೆಸಾರ್ಟ್ ಹತ್ತಿರ ಮತ್ತು ಸ್ಯಾನಿಟೋರಿಯಂ ಹತ್ತಿರ ಮತ್ತು ಕಾಮಸಮುದ್ರ ರಸ್ತೆಯಲ್ಲಿ ನಡೆಯುವ ರೈಲ್ವೆ ಓವರ್ ಬ್ರಿಜ್ (ಆರ್.ಒ.ಬಿ) ಮತ್ತು ರೈಲ್ವೆ ಅಂಡರ್ ಬ್ರಿಡ್ಜ್ (ಆರ್. ಯು. ಬಿ) ಕಾಮಗಾರಿಗಳ ಆದಷ್ಟು ಬೇಗ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ವರದಿ: ರೋಷನ್ ಜಮೀರ್.
ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ…
ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…
ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…
ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…
ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…