ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಗ್ರಾಮದ ಖಾಸಗಿ ಬ್ಲಾಸಮ್ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಶಿಕ್ಷಕಿ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಶಾಲೆಯ ಪ್ರಥಮ ತರಗತಿಯ ವಿದ್ಯಾರ್ಥಿಗೆ ಶಿಕ್ಷಕಿ ರಂಜಿತಾ, ಶುಕ್ರವಾರದಂದು ಶರೀರದ ಮೇಲೆ ಬಾಸುಂಡೆಗಳು ಬೀಳುವಂತೆ ಬಡಿದಿರುವ ಘಟನೆ ನಡೆದಿದೆ. ಬಾಲಕನ ಬೆನ್ನಿನ ಮೇಲೆ ಸ್ಪಷ್ಟವಾದ ಗಾಯದ ಗುರುತುಗಳು ಕಂಡುಬಂದಿದ್ದು, ಇದರಿಂದ ಆತ ನೋವಿನಿಂದ ಬಳಲುತ್ತಿದ್ದ.
ಘಟನೆಗನುಗುಣವಾಗಿ ಬಾಲಕನ ಪೋಷಕರು ತಕ್ಷಣ ಶಾಲೆಯ ಮುಖ್ಯ ಶಿಕ್ಷಕರ ಬಳಿ ದೂರು ಸಲ್ಲಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗೆ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ವೈದ್ಯರ ಪ್ರಾಥಮಿಕ ವರದಿಯಲ್ಲೂ ಹಲ್ಲೆಯ ಸ್ಪಷ್ಟತೆ ದೃಢಪಟ್ಟಿದೆ.
ಈ ಕುರಿತಂತೆ ವಿದ್ಯಾರ್ಥಿಯ ಪೋಷಕರು ನ್ಯಾಯಕ್ಕಾಗಿ ಆಗ್ರಹಿಸಿ, ಶಿಕ್ಷಕಿಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸ್ಥಳೀಯರು ಕೂಡ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಶಾಲಾ ಆಡಳಿತದಿಂದ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದ್ದಾರೆ.
ಶಾಲೆಯಲ್ಲಿ ಮಕ್ಕಳು ಸುರಕ್ಷಿತವಾಗಿ ಓದಲು ಅವಕಾಶ ಸಿಗಬೇಕು ಎಂಬುದು ಪೋಷಕರ ಬೇಡಿಕೆ. ವಿಷಯದ ಕುರಿತು ಇನ್ನೂ ಶಾಲಾ ಆಡಳಿತ ಅಥವಾ ಶಿಕ್ಷಣ ಇಲಾಖೆ ಪ್ರತಿಕ್ರಿಯೆ ನೀಡಬೇಕಾಗಿದೆ.
ಮುಂಡಗೋಡ: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಅಮೇರಿಕಾ ಉದ್ವಿಗ್ನತೆ (ಯುದ್ಧ) ಪರಿಣಾಮವಾಗಿ ಇಂಧನ ಕ್ಷೇತ್ರದಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯ…
ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…
ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…
ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…
ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…
ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…