ಚಿಕ್ಕಮಗಳೂರು, ಜುಲೈ 19: ಜಿಲ್ಲೆಯಲ್ಲಿ ಮಾನವೀಯತೆಗೂ ಮಿತಿ ಇರುವ ಭಯಾನಕ ಘಟನೆ ನಡೆದಿದೆ. ಗಾಂಧಿನಗರದಲ್ಲಿರುವ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿ ಕೆಲಸ ಮಾಡುವ ಶಿಶು ಆರೈಕಾ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಒಂದು ವರ್ಷ ಮೂರೂ ತಿಂಗಳ ಹೆಣ್ಣು ಮಗು ಗಂಭೀರವಾಗಿ ಗಾಯಗೊಂಡಿರುವ ದುರಂತ ನಡೆದಿದೆ.
ಘಟನೆ ಜುಲೈ 9ರಂದು ನಡೆದಿದ್ದು, ಮಲ ವಿಸರ್ಜನೆ ಮಾಡಿದ ಮಗುವನ್ನು ಶುದ್ಧಮಾಡುವ ಸಂದರ್ಭ ಬಿಸಿ ನೀರು ಸುರಿದ ಪರಿಣಾಮವಾಗಿ ಮಗುವಿನ ಸೊಂಟದ ಕೆಳಭಾಗ ಸಂಪೂರ್ಣ ಸುಟ್ಟು ಹೋಗಿದೆ. ಈ ಅನಾಥ ಮಗು ದತ್ತು ಪಡೆಯಲು ಪೋಷಕರು ಸಿದ್ಧತೆ ನಡೆಸುತ್ತಿದ್ದರು. ಆದರೆ ಆಸ್ಪತ್ರೆ ಬೆಡ್‌ನಲ್ಲಿ ನರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ದತ್ತು ಸಂಸ್ಥೆ ಮಕ್ಕಳ ರಕ್ಷಣಾ ನಿರ್ದೇಶನಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅನಾಥ ಮತ್ತು ತ್ಯಜಿತ ಮಕ್ಕಳ ಆರೈಕೆ ಹಾಗೂ ಸುರಕ್ಷತೆಗಾಗಿ ಸ್ಥಾಪಿಸಲಾಗಿದೆ. ಆದರೆ ಇಲ್ಲಿನ ಸಿಬ್ಬಂದಿಯ ಅಸಡ್ಡೆ ಮತ್ತು ಅಜಾಗರೂಕತೆಯಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಘಟನೆಯಾದ ಬಳಿಕ ವಿಷಯವನ್ನು ಮೇಲಧಿಕಾರಿಗಳಿಗೆ ಮುಚ್ಚಿಹಾಕಲು ಸಿಬ್ಬಂದಿ ಯತ್ನಿಸಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಇನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ತೀವ್ರ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಕರಣ ಸಾಮಾಜಿಕ ಮತ್ತು ಮಕ್ಕಳ ಹಕ್ಕು ರಕ್ಷಣಾ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಂಬಂಧಿತ ಇಲಾಖೆಗಳು ಘಟನೆಯ ಬಗ್ಗೆ ತನಿಖೆ ಆರಂಭಿಸಬೇಕೆಂಬ ಒತ್ತಾಯ ಹೆಚ್ಚಾಗಿದ್ದು, ನಿರ್ಲಕ್ಷ್ಯ ಪ್ರದರ್ಶಿಸಿದ ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…
ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…
ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…
ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…
ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…
ಗೌರಿಬಿದನೂರು: ನಗರದಲ್ಲಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ, ತಹಸೀಲ್ದಾರ್ ಅರವಿಂದ್…