ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಇಂಗಳೇಶ್ವರ ಗ್ರಾಮದ ದುಸ್ಥಿತಿ ಇದು.ಗ್ರಾಮದಲ್ಲಿ ಕೊಳಚೆ ನೀರಿನಿಂದ ರಸ್ತೆಯೆಲ್ಲ ಚರಂಡಿಮಯವಾಗಿರುವುದು ಕಂಡು ಬಂದಿರುತ್ತದೆ.ಗ್ರಾಮದ ಚರಂಡಿಗಳ ಒಳಗಡೆ ಹಾಪ್ ಬೆಳೆದಿರುವುದು ಗ್ರಾಮ ಪಂಚಾಯಿತಿ ಪಿಡಿಓ ದೇವರನಾವದಗಿಯ ದಿವ್ಯ ನಿರ್ಲಕ್ಷ್ಯ ವಹಿಸಿರುವುದೇ ಇದಕ್ಕೆ ಮೂಲ ಕಾರಣವಾಗಿದೆ.ಭೀರಲಿಂಗೇಶ್ವರ ದೇವರ ಗುಡಿಯ ಹತ್ತಿರ ಕುಡಿಯುವ ನೀರಿನ ಟ್ಯಾಂಕ್ ಇದ್ದು.ಅದರ ಸುತ್ತ ಕೊಳಚೆಮಯ ಆಗಿರುವುದು ಹಾಗೂ ದಿನಾಲೂ ಸಂಚರಿಸಲು ತುಂಬಾ ತೊಂದರೆಯಾಗುತ್ತಿದ್ದು.ಇದರಿಂದ ಇಂಗಳೇಶ್ವರ ಗ್ರಾಮವು ಕೊಳಚೆ ನೀರಿನಿಂದ ಆವೃತವಾಗಿದೆ.ಗ್ರಾಮದಲ್ಲಿ ಕೊಳಚೆ ನೀರಿನಲ್ಲಿ ಒದ್ದಾಡೋದು ನಮ್ಮ ಕಷ್ಟ ಯಾರಿಗೆ ಹೇಳಬೇಕು ಎಂದು ಅಲ್ಲಿನ ಸಾರ್ವಜನಿಕರ ಆಕ್ರೋಶದ ಮಾತಾಗಿದೆ. ಚಿಕ್ಕ ಚಿಕ್ಕ ಮಕ್ಕಳು ವಯಸ್ಸಾದ ವೃದ್ಧರು ಈ ರಸ್ತೆ ಮೇಲೆ ಬಿದ್ದು ಗಾಯ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಸೊಳ್ಳೆಗಳ ಕಾಟದಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುತ್ತಿದ್ದಾರೆ, ಗ್ರಾಮಸ್ಥರು ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈಗಲಾದರೂ ಎಚ್ಚೆತ್ತುಕೊಂಡು ಸಂಬಂಧ ಪಟ್ಟ ಅಧಿಕಾರಿಗಳು ಇದರಿಂದ ಮುಕ್ತಿ ಕೊಡಿಸಿ ಇಲ್ಲಿನ ಜನರಿಗೆ ಅನುಕೂಲ ಮಾಡಿ ಕೊಡುತ್ತಾರಾ ಇಲ್ಲವೋ ನೋಡಬೇಕಾಗಿದೆ.

ವರದಿ:ಸಂಗಪ್ಪ ಚಲವಾದಿ

Related News

error: Content is protected !!