Latest

ನಂಜನಗೂಡಿನಲ್ಲಿ ನುಂಗಣ್ಣ ಹಾಗೂ ಭ್ರಷ್ಟ ಪಿಡಿಒ ವಿರುದ್ಧ ಅನ್ನದಾತರ ಆಕ್ರೋಶ

ನಂಜನಗೂಡು :ನಂಜನಗೂಡು ತಾಲೂಕು ಹೆಗ್ಗಡಹಳ್ಳಿ ಹಾಗೂ ಯಡಿಯಾಲ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭ್ರಷ್ಟ ಪಿಡಿಒ ನಾಗರಾಜು ಎಂಬುವವರನ್ನು ಅಮಾನತ್ತು ಗೊಳಿಸುವಂತೆ ಒತ್ತಾಯಿಸಿ ಏಕೀಕರಣದ ಹಾದಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು
ಜಿಲ್ಲಾ ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ನಂಜನಗೂಡು ತಾಲೂಕು ಪಂಚಾಯಿತಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಭ್ರಷ್ಟ ಪಿಡಿಓ ರನ್ನು ಕೂಡಲೆ ಅಮಾನತುಗೊಳಿಸುವಂತೆ ಒತ್ತಾಯಿಸಿ ಆತನ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಬಳಿಕ ಅವರು ಮಾತನಾಡಿ ಯಡಿಯಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾರ್ವತಿಪುರ ಗ್ರಾಮದ ವೃದ್ಧ ಮಹಿಳೆ ಮಾರಿಯಮ್ಮ ಎಂಬುವವರ ಜಾಗಕ್ಕೆ ಸಂಬಂಧಿಸಿದಂತೆ 11 ಬಿ ನೀಡಿ ಖಾತೆ ಮಾಡಿಸಿಕೊಡಲು 25,000 ಪಡೆದಿರುತ್ತಾರೆ .ಆಕೆಯಿಂದ ಲಂಚದ ಹಣ ಪಡೆದಿದ್ದರೂ ಸಹ ಅದೇ ಜಾಗವನ್ನು ಬೇರೆಯವರ ಹೆಸರಿಗೆ ಖಾತೆ ಮಾಡಿಕೊಟ್ಟು ವಂಚನೆ ಮಾಡಿರುತ್ತಾರೆ.ಅಲ್ಲದೆ ಯಡಿಯಾಲ ಗ್ರಾಮದಲ್ಲಿ ಕನಕ ಭವನಕ್ಕೆ ಸೇರಬೇಕಾದ ಜಾಗವನ್ನು ಹಣಕ್ಕಾಗಿ ಬೇರೆ ವ್ಯಕ್ತಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.ಈ ಹಿಂದೆ ಕಳಲೆ ಗ್ರಾಮ ಪಂಚಾಯಿತಿಯಲ್ಲೂ ಕೂಡ ಹಲವರು ಭ್ರಷ್ಟಾಚಾರಗಳನ್ನು ಮಾಡಿ ಬಂದಿದ್ದಾರೆ .ಪ್ರಸ್ತುತ ಈಗ ಹೆಗ್ಗಡಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೂಡ ಸರ್ಕಾರಿ ರಸ್ತೆಯನ್ನು ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಟ್ಟಿರುವುದು ಗಮನಕ್ಕೆ ಬಂದಿದ್ದು ಈ ವ್ಯಕ್ತಿ ಯಾವುದೇ ಪಂಚಾಯತಿಗೆ ಹೋದರು ಹೋದ ಕಡೆಯೆಲ್ಲ ಭ್ರಷ್ಟಾಚಾರ, ಅಕ್ರಮ ಮಾಡುವುದು ಮಾಮೂಲಿಯಾಗಿದೆ ಎಂದು ಆರೋಪಿಸಿದರು .ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ ಮಹದೇವಪ್ಪ ಹಾಗೂ ನಾನು ಇಬ್ಬರು ಒಂದೇ ಗ್ರಾಮದವರಾಗಿದ್ದು ಆತ್ಮೀಯರಾಗಿದ್ದೇವೆ ನಾನು ಏನೇ ಮಾಡಿದರು ಅವರ ಬೆಂಬಲ ಇದೆ ಎನ್ನುವ ಉಡಾಫೆ ಮಾತುಗಳನ್ನಾಡುತ್ತಾ ರಾಜಕಾರಣಿಯಂತೆ ಮೆರೆಯುತ್ತಾನೆ ಎಂದು ಆರೋಪಿಸಿದ ಅವರು ಉಸ್ತುವಾರಿ ಸಚಿವರೇ ಇಂತಹ ಪಿಡಿಒಗಳು ನಂಜನಗೂಡಿಗೆ ಅವಶ್ಯಕತೆ ಇಲ್ಲ ಬಡವರ ರಕ್ತ ಹೀರುವ ಹಾಗೂ ಸರ್ಕಾರಿ ಜಾಗಗಳನ್ನು ಮಾರಾಟ ಮಾಡುವ ಇಂತಹ ಬ್ರಷ್ಟ ಪಿಡಿಒಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು .ಒಂದು ವೇಳೆ ಇವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ವತಿಯಿಂದ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ನಂತರ ತಾಲೂಕು ಘಟಕದ ಅಧ್ಯಕ್ಷ ಸತೀಶ್ ರಾವ್ ಮಾತನಾಡಿ ಗ್ರಾಮ ಪಂಚಾಯತಿಗಳಲ್ಲಿಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಪಿಡಿಒಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಹಾಗೂ ಸಾರ್ವಜನಿಕರ ರಸ್ತೆಗಳನ್ನು ಬೇರೆಯವರ ಹೆಸರಿಗೆ ಅಕ್ರಮ ಖಾತೆ ಮಾಡಿಕೊಡುತ್ತಿದ್ದಾರೆ ಇವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸುವಂತೆ ಆಗ್ರಹಿಸಿದರು .
ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಜಲಾಲ್ಡ್ ಭೇಟಿ ನೀಡಿ ಪ್ರತಿಭಟನಾ ನಿರತರ ಸಮಸ್ಯೆಗಳನ್ನು ಆಲಿಸಿ ಸ್ಥಳಕ್ಕೆ ಪಿಡಿಒ ನಾಗರಾಜ್ ಅವರನ್ನು ಕರೆಯಿಸಿ ರೈತರ ಆರೋಪದ ಸಂಬಂಧ ವಿಚಾರಣೆ ನಡೆಸಿ ನಂತರ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಕೈ ಬಿಡಲಾಯಿತು .
ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ಹಿಮ್ಮಾವು ರಘು,ಶ್ವೇತಾ, ದೇವರಾಜು, ರವಿ, ಶಂಕರ್ ನಾಯ್ಕ, ಮಹಾದೇವನಾಯಕ, ಮಹಾದೇವಸ್ವಾಮಿ, ಪ್ರಕಾಶ್ ,ಆನಂದ್, ಸಿದ್ದರಾಜು ,ಮಹೇಶ್, ಶಿವಕುಮಾರ್, ಸಂತ್ರಸ್ತ ಮಹಿಳೆ ಮಾರಿಯಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

ಭ್ರಷ್ಟ ಪಿಡಿಒ ಗೆ ಎರಡೆರಡು ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ಯೋಗ ಇದರಿಂದಾಗಿ ನಾಗರಾಜ್ ಪ್ರಸ್ತುತ ನಂಜನಗೂಡು ತಾಲೂಕಿನ ಹೆಗ್ಗಡಳ್ಳಿ ಹಾಗೂ ಯಡಿಯಾಲ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎರಡೂ ಪಂಚಾಯಿತಿಗಳಲ್ಲಿ ಸಾಕಷ್ಟು ಹಗರಣಗಳನ್ನು ಮಾಡಿ ಭ್ರಷ್ಟತೆಗೆ ಹೆಸರುವಾಸಿಯಾಗಿದ್ದಾರೆ .ಕೇವಲ ಹಾಜರಾತಿಗೆ ಸಹಿ ಮಾಡಿ ಹೊರಟು ತನ್ನ ಸ್ವಂತ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಇವರು ಸಾರ್ವಜನಿಕ ಕೆಲಸಗಳಿಗೆ ಸಿಗುವುದಿಲ್ಲ ಈ ಪಂಚಾಯಿತಿಯಲ್ಲಿ ಕೇಳಿದರೆ ಆ ಪಂಚಾಯಿತಿ ಆ ಪಂಚಾಯಿತಿಗೆ ಕೇಳಿದರೆ ಈ ಪಂಚಾಯಿತಿ ಎಂದು ಹೇಳಿಕೊಂಡೆ ಭ್ರಷ್ಟಾಚಾರ ನಡೆಸುತ್ತಿರುವ ಇವರಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯಾವುದಾದರೂ ಒಂದು ಪಂಚಾಯತಿ ಜವಾಬ್ದಾರಿ ನೀಡಿ ಇವರ ಭ್ರಷ್ಟಾಚಾರ ಹಾಗೂ ಅಕ್ರಮ ಸಂಪಾದನೆಗೆ ಕಡಿವಾಣ ಹಾಕಬೇಕು.ಸರ್ಕಾರಿ ಜಾಗಗಳನ್ನು ಹಣಕ್ಕಾಗಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿ ಕೊಡುವುದು ಸರ್ಕಾರಿ ಹಣ ದುರುಪಯೋಗ ಹಾಗೂ ಕಾಮಗಾರಿ ಮಾಡದೆ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಜೊತೆ ಶಾಮೀಲಾಗಿ ಕಳ್ಳಬಿಲ್ ಮಾಡುವುದು ಇವರಿಗೆ ಕರಗತವಾಗಿದೆ .ಈ ಹಿಂದೆ ಕೂಡ ಯಡಿಯಾಲ ಗ್ರಾಮ ಪಂಚಾಯತಿಯಲ್ಲಿ ಇವರ ಅಕ್ರಮ ಹಾಗೂ ಭ್ರಷ್ಟಾಚಾರದ ಬಗ್ಗೆ ಭ್ರಷ್ಟರ ಬೇಟೆ ಪತ್ರಿಕೆಯಲ್ಲಿ ಸುದ್ದಿ ಮಾಡಲಾಗಿತ್ತು ” ವರದಿ: ಮೋಹನ್

nazeer ahamad

Recent Posts

ವಿವಾಹ ಭರವಸೆ ನೀಡಿ ಖಾಸಗಿ ವಿಡಿಯೋದಿಂದ ಬ್ಲ್ಯಾಕ್‌ಮೇಲ್‌: ಯುವಕನ ಬಂಧನ

ಬೆಂಗಳೂರು: ವಿವಾಹವಾಗುವ ಭರವಸೆ ನೀಡಿ ಖಾಸಗಿ ಸಂಬಂಧ ಬೆಳೆಸಿದ ಬಳಿಕ, ಆ ಸಂಬಂಧದ ವಿಡಿಯೋ ಬಳಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ…

12 hours ago

10 ಲಕ್ಷ ಲಂಚದ ಹಣದೊಂದಿಗೆ ಬಿಬಿಎಂಪಿ ಇಂಜಿನಿಯರ್ ಲೋಕಾಯುಕ್ತ ಬಲೆಗೆ”

ಬೆಂಗಳೂರು: ನಗರದಲ್ಲಿ ಮತ್ತೊಂದು ಲಂಚದ ಬಿರುಕು ಬಿಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಾರ್ಯಪಾಲಕ ಅಭಿಯಂತರನು 10 ಲಕ್ಷ…

12 hours ago

ಗೋವಾ ಪ್ರವಾಸ ದುರಂತ: ಮದುವೆ ಗೊಂದಲದಿಂದ ಪ್ರೇಮಿಯ ಕೈಯಲ್ಲಿ ಪ್ರೇಯಸಿ ಹತ್ಯೆ

ಗೋವಾ: ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದ ಜೋಡಿಯ ಕನಸು ಕೊಲೆಯ ಹಿನ್ನಲೆಯಲ್ಲಿ ದುರಂತವಾಗಿ ಕೊನೆಗೊಂಡ ಘಟನೆ ದಕ್ಷಿಣ ಗೋವಾದ…

12 hours ago

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

1 day ago

ಖಾಲಿ ಮನೆ ಟಾರ್ಗೆಟ್: ಪೆಪ್ಸಿ ರಘು ಗ್ಯಾಂಗದಿಂದ 24 ಲಕ್ಷ ಕಳ್ಳತನ, ಮೂವರು ಅರೆಸ್ಟ್

ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…

1 day ago

ಲಂಚ ಸ್ವೀಕರಿಸುತ್ತಿದ್ದ ಪಂ.ರಾಜ್ ಇಂಜಿನಿಯರಿಂಗ್ ಅಧಿಕಾರಿ ಬಂಧನ: ಲೋಕಾಯುಕ್ತದ ದಾಳಿ ಸೊರಬದಲ್ಲಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…

1 day ago