ಬೆಂಗಳೂರು: ಮಾಜಿ ಸಚಿವ ಆನಂದ್ ಸಿಂಗ್ ವಿರುದ್ಧ ದಾಖಲಾದ ಅಕ್ರಮ ಅದಿರು ಗಣಿಗಾರಿಕೆ ಪ್ರಕರಣದ ವಿಚಾರಣೆ ಅಂತಿಮ ಹಂತ ತಲುಪಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಫೆಬ್ರವರಿ 24ರಂದು ತೀರ್ಪು ಪ್ರಕಟಿಸುವ ದಿನಾಂಕ ನಿಗದಿಪಡಿಸಿದೆ.
ನ್ಯಾಯಾಲಯದ ನಿರ್ಧಾರ:
ಇಂದು (ಫೆ.10) ತೀರ್ಪು ಪ್ರಕಟವಾಗಬೇಕಾಗಿದ್ದರೂ, ಅದನ್ನು ಫೆಬ್ರವರಿ 24ಕ್ಕೆ ಮುಂದೂಡಲಾಗಿದೆ. ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರ ಏಕಸದಸ್ಯ ಪೀಠ ಈ ಸಂಬಂಧ ಅಂತಿಮ ತೀರ್ಪು ಪ್ರಕಟಿಸಲು ದಿನಾಂಕ ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆ:
2015ರಲ್ಲಿ ಆನಂದ್ ಸಿಂಗ್ ವಿರುದ್ಧ 16,976 ಮೆಟ್ರಿಕ್ ಟನ್ ಅದಿರು ಅಕ್ರಮ ಗಣಿಗಾರಿಕೆ ಆರೋಪ ದಾಖಲಾಗಿತ್ತು. ಜೈಸಿಂಗ್ಪುರದ ಬಳಿ SVK ಫ್ಲಾಟ್‌ನಲ್ಲಿ ಅಕ್ರಮ ಗಣಿಗಾರಿಕೆ ನಡೆಸಲಾಗಿದೆ ಎಂಬ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಕೇಂದ್ರ ಶಿಷ್ಟಾಚಾರ ಆಯೋಗ (CVC) ವರದಿ ಆಧರಿಸಿ ಸುಪ್ರೀಂಕೋರ್ಟ್ ತನಿಖೆಗೆ ಆದೇಶ ನೀಡಿತ್ತು.
ಲೋಕಾಯುಕ್ತ ತನಿಖೆ:
ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕ ಲೋಕಾಯುಕ್ತ ಪ್ರಕರಣದ ತನಿಖೆ ನಡೆಸಿ ಆನಂದ್ ಸಿಂಗ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು. ಸುದೀರ್ಘ ವಿಚಾರಣೆ ಬಳಿಕ ಈ ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಲು ದಿನಾಂಕ ನಿಗದಿಯಾಗಿದೆ.
ಈ ತೀರ್ಪು ಪ್ರಕರಣದ ಭವಿಷ್ಯ ನಿರ್ಧಾರ ಮಾಡಲಿದ್ದು, ರಾಜಕೀಯ ವಲಯದ ಗಮನ ಸೆಳೆದಿದೆ.
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…