ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ನಟಿ ರನ್ಯಾ ಬೇಲ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಮಾರ್ಚ್ 14ರಂದು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಅವರ ಬಗ್ಗೆ ಅಂತಿಮ ತೀರ್ಪು ನೀಡಲಿದೆ.
ಚಿನ್ನ ಕಳ್ಳಸಾಗಣೆಯ ಸ್ಫೋಟಕ ಮಾಹಿತಿ
ಕಳೆದ ವರ್ಷ ರನ್ಯಾ ರಾವ್ ದುಬೈನಲ್ಲಿ ಎರಡು ಬಾರಿ ಚಿನ್ನ ಖರೀದಿ ಮಾಡಿದ್ದರು. ಅವರು ಸ್ವಿಟ್ಜರ್‌ಲೆಂಡ್‌ಗೆ ಚಿನ್ನ ಕೊಂಡೊಯ್ಯುವುದಾಗಿ ಸುಳ್ಳು ಹೇಳಿ, ತಂತ್ರ ಮಾಡಿ ನೇರವಾಗಿ ಭಾರತಕ್ಕೆ ಬಂದಿದ್ದರು ಎಂಬ ಮಾಹಿತಿ ಡಿಆರ್‌ಐ (Directorate of Revenue Intelligence) ತನಿಖೆಯಿಂದ ಬಹಿರಂಗವಾಗಿದೆ. ಕಸ್ಟಮ್ಸ್ ಅಧಿಕಾರಿಗಳನ್ನು ತಡತಡಿಸಿಕೊಂಡು ಈ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.
ಜಾಮೀನು ವಿಚಾರಣೆ – ರನ್ಯಾ ಪರ ವಕೀಲರ ವಾದ
ರನ್ಯಾ ಬೇಲ್ ಅವರ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ, ಅವರ ಪರ ವಕೀಲರು ಹಲವು ವಾದಗಳನ್ನು ಮಂಡಿಸಿದರು. “ಸರ್ಚ್ ಪ್ರಕ್ರಿಯೆ ಕಾನೂನು ಪ್ರಕಾರ ನಡೆದಿಲ್ಲ, ರನ್ಯಾಗೆ ನಿದ್ದೆಯ ಹಕ್ಕು ಕಿತ್ತುಕೊಳ್ಳಲಾಗಿದೆ, ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದೆ” ಎಂಬ ಆರೋಪಗಳನ್ನು ಅವರು ಎತ್ತಿ ಹಿಡಿದರು. “ರನ್ಯಾ ಮದುವೆಯಾದ ಮಹಿಳೆ, ಅವರು ಪರಾರಿಯಾಗುವುದಿಲ್ಲ. ಆದ್ದರಿಂದ ಜಾಮೀನು ನೀಡಬೇಕು” ಎಂದು ವಕೀಲರು ಮನವಿ ಮಾಡಿದರು.
ಈ ಎಲ್ಲಾ ಪರಿಗಣನೆಯ ನಂತರ, ನಟಿ ರನ್ಯಾ ಬೇಲ್ ಭವಿಷ್ಯ ಏನಾಗಲಿದೆ ಎಂಬುದು ಮಾ.14ಕ್ಕೆ ನಿರ್ಧಾರವಾಗಲಿದೆ.
ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…
ಮೈಸೂರು: ನಕಲಿ ದಾಖಲೆಗಳ ಆಧಾರದಲ್ಲಿ ನೋಂದಣಿ ಮಾಡಿಕೊಂಡು ತೆರಿಗೆ ವಂಚನೆ ಮಾಡುತ್ತಿದ್ದ ದುಬಾರಿ ಕಾರುಗಳ ಮೇಲೆ ಸಾರಿಗೆ ಇಲಾಖೆಯ ಅಧಿಕಾರಿಗಳು…
ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿ ಮುರುಕನಹಳ್ಳಿಯಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಸುಮಾರು 17 ಕಿಲೋಗ್ರಾಂ…
ರಾಜ್ಯ ಸರ್ಕಾರ ಓಲಾ, ಉಬರ್ ಹಾಗೂ ರ‍್ಯಾಪಿಡೋ ಸೇರಿದಂತೆ ಎಲ್ಲ ಬೈಕ್ ಟ್ಯಾಕ್ಸಿ ಸೇವೆಗಳನ್ನು ಬೆಂಗಳೂರಿನಲ್ಲಿ ರ‍್ಯಾಪಿಡೋ ಚಾಲಕನಿಂದ ಮಹಿಳೆಯ…
ಪುತ್ತೂರು, ಜೂನ್ 16 – ಪುತ್ತೂರು ಹೊರವಲಯದ ಚಿಕ್ಕಪುತ್ತೂರಿನಲ್ಲಿ ಏಳು ತಿಂಗಳ ಗರ್ಭಿಣಿಯಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ…
ಕೋಲಾರ್ (ಜೂನ್ 16): ನಗರದ ಸಹಕಾರ ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರವೊಂದರಲ್ಲಿ ಭಾನುವಾರ ರಾತ್ರಿ ಸಂಭವಿಸಿದ…