
ಹೊಸ ರೂಪದಲ್ಲಿ ಶೀಘ್ರದಲ್ಲೇ ರೂ.20 ನೋಟು ಮಾರುಕಟ್ಟೆಗೆ ಬರುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸತತವಾಗಿ ನೋಟುಗಳಲ್ಲಿ ಸುಧಾರಣೆಗಳನ್ನು ಮಾಡುತ್ತಾ ಬರುತ್ತಿದ್ದು, ಇದೀಗ ಹೊಸ ರೂ.20 ನೋಟು ಬಿಡುಗಡೆಗೆ ಘೋಷಣೆ ನೀಡಿದೆ. ಈ ನೋಟಿನಲ್ಲಿ ಪ್ರಸ್ತುತ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿ ಇರುವುದು ಪ್ರಮುಖ ವೈಶಿಷ್ಟ್ಯವಾಗಿದೆ.
RBI ತಿಳಿಸಿದಂತೆ, ಈ ನೋಟು ಹೊಸ ಶ್ರೇಣಿಯ ಭಾಗವಾಗಿದ್ದು, ಹಳೆಯ ವಿನ್ಯಾಸವನ್ನು ಉಳಿಸಿಕೊಂಡಿದ್ದರೂ ಕೆಲವು ನವೀನ ವೈಶಿಷ್ಟ್ಯಗಳೊಂದಿಗೆ ಬರಲಿದೆ. ಜನಸಾಮಾನ್ಯರ ಚಲಾವಣೆಗೆ ಅನುಕೂಲವಾಗುವಂತೆ ಭದ್ರತಾ ಅಂಶಗಳಲ್ಲಿ ಸುಧಾರಣೆ ಮಾಡಲಾಗಿದೆ.
ಹೊಸ ರೂ.20 ನೋಟಿನ ಪ್ರಮುಖ ವೈಶಿಷ್ಟ್ಯಗಳು:
ಬಣ್ಣ: ಹಸಿರು-ಹಳದಿ ಮಿಶ್ರ ಛಾಯೆ
ಗಾತ್ರ: 63 ಮಿ.ಮೀ. x 129 ಮಿ.ಮೀ.
ಹಿಂಬದಿ ಚಿತ್ರ: ಮಹಾರಾಷ್ಟ್ರದ ಪ್ರಸಿದ್ಧ ಎಲ್ಲೋರಾ ಗುಹೆಗಳ ಚಿತ್ರಣ
ಸಂಖ್ಯೆ ಮುದ್ರಣ: “20” ಸಂಖ್ಯೆಯನ್ನು ಹೂವಿನ ವಿನ್ಯಾಸದಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿಯೂ ಮುದ್ರಿಸಲಾಗಿದೆ
ಲಿಪಿ: “20” ಸಂಖ್ಯೆಯನ್ನು ದೇವನಾಗರಿಯಲ್ಲಿ ಮುದ್ರಿಸಲಾಗಿದೆ
ಸೂಕ್ಷ್ಮ ಲೆಖನಗಳು: RBI, ಭಾರತ, India ಮತ್ತು “20” ಎಂಬ ಬರಹ ಸೂಕ್ಷ್ಮಾಕ್ಷರಗಳಲ್ಲಿ ಅಳವಡಿಸಲಾಗಿದೆ
ಇತರೆ ಅಂಶಗಳು:
ಮಹಾತ್ಮ ಗಾಂಧೀಜಿ ಭಾವಚಿತ್ರ
ಅಶೋಕ ಸ್ತಂಭ ಚಿಹ್ನೆ
ಸ್ವಚ್ಛ ಭಾರತ ಅಭಿಯಾನದ ಲೋಗೋ
ಭಾಷಾ ಫಲಕ
ಭದ್ರತೆಗಾಗಿ ಗವರ್ನರ್ ಸಹಿ, ಗ್ಯಾರಂಟಿ ಘೋಷಣೆ, RBI ಚಿಹ್ನೆ ಮುಂತಾದವು
ಹಳೆಯ ನೋಟುಗಳು ಎಂತು?
ಜನರಲ್ಲಿ ಆತಂಕ ಮೂಡದಂತೆ RBI ಸ್ಪಷ್ಟನೆ ನೀಡಿದ್ದು, ಈಗ ಚಲಾವಣೆಯಲ್ಲಿರುವ ಹಳೆಯ ರೂ.20 ನೋಟುಗಳು ಪೂರ್ಣ ಪ್ರಮಾಣದಲ್ಲಿ ಮಾನ್ಯವಾಗಿರುವುದೇ ಸತ್ಯ. ಹೊಸ ನೋಟು ಪರಿಚಯಿಸುವುದರಿಂದ ಹಳೆಯ ನೋಟು ಅಮಾನ್ಯವಾಗಲ್ಲ. ಎಲ್ಲ ನೋಟುಗಳೂ ಸಹಪ್ರಯೋಗಕ್ಕೆ ಲಭ್ಯವಿರುತ್ತವೆ.
RBIಯ ಉದ್ದೇಶ ಸ್ಪಷ್ಟ – ಜನರಿಗೆ ಗುಣಮಟ್ಟದ, ನಕಲಿ ನೋಟುಗಳಿಂದ ಸುರಕ್ಷಿತ ಹಾಗೂ ಸಾಂಸ್ಕೃತಿಕ ಪಾರದರ್ಶಕತೆ ಹೊಂದಿರುವ ನೋಟುಗಳನ್ನು ಒದಗಿಸುವುದು. ಈ ಹೊಸ ನೋಟು ಆರ್ಥಿಕ ಲೆನದೆನಗಳಲ್ಲಿ ಹೆಚ್ಚಿನ ನಂಬಿಕೆ ಹಾಗೂ ಭದ್ರತೆಯನ್ನು ನೀಡಲಿದ್ದು, ಭಾರತದ ಪರಂಪರೆಯ ವೈಭವವನ್ನೂ ಪ್ರತಿಬಿಂಬಿಸುತ್ತದೆ.