ಸಕಲೇಶಪುರ (ಹಾಸನ ಜಿಲ್ಲೆ), ಜುಲೈ 30 – ಬೆಳಗೋಡು ಹೋಬಳಿಯ ಲಕ್ಮೀಪುರ ಗ್ರಾಮದಲ್ಲಿ ಪತ್ನಿಯ ಅಕ್ರಮ ಸಂಬಂಧ ಪತ್ತೆಹಚ್ಚಿದ ಪತಿಯ ಮೇಲೆ ಪ್ರಿಯಕರನಿಂದ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಪತಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಆರೋಪಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ, ಲಕ್ಮೀಪುರ ನಿವಾಸಿ ನಂದೀಶ್ ಎಂಬವರು ಪಕ್ಕದ ಹೊಸಪೇಟೆ ಗ್ರಾಮದ ಹೋಂಗಾರ್ಡ್ ಆಗಿರುವ ಸುಜಿತ್ ಎಂಬ ಯುವಕನಿಂದ ಹಲ್ಲೆಗೀಡಾದವರು. ವಿಚಾರದ ಮೂಲವೆಂದರೆ ನಂದೀಶ್ ಪತ್ನಿ ಶ್ರುತಿ ಹಾಗೂ ಸುಜಿತ್ ನಡುವೆ ಕಳೆದ ಆರು ತಿಂಗಳಿಂದ ಅಕ್ರಮ ಸಂಬಂಧವಿದ್ದಂತೆ ತಿಳಿದುಬಂದಿದೆ.

ಸೋಮವಾರದಂದು ನಂದೀಶ್ ತನ್ನ ದೈನಂದಿನ ಕೆಲಸಕ್ಕೆ ತೆರಳಿದ್ದರೂ, ಅನಿರೀಕ್ಷಿತವಾಗಿ ಅರ್ಧ ಗಂಟೆ ಬಳಿಕ ಮನೆಗೆ ಹಿಂದಿರುಗಿದಾಗ ಪತ್ನಿ ಶ್ರುತಿ ಮತ್ತು ಸುಜಿತ್ ಇಬ್ಬರೂ ಮನೆಯೊಳಗೆ ಇದ್ದ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಅನುಮಾನ ಸತ್ಯವಾಯಿತು. ಈ ವೇಳೆ ಗದರಿಕೆಗೆ ಒಳಗಾದ ಸುಜಿತ್, ಸಂಬಂಧ ಬಯಲಾಗುತ್ತದೆ ಎಂಬ ಆತಂಕದಲ್ಲಿ ನಂದೀಶ್ ಮೇಲೆ ಹಲ್ಲೆ ನಡೆಸಿದ್ದಾನೆ.

ಘಟನೆಯಲ್ಲಿ ತೀವ್ರ ಗಾಯಗೊಂಡ ನಂದೀಶ್ ಅವರನ್ನು ತಕ್ಷಣ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳೀಯರು ಮಾಹಿತಿ ನೀಡಿದ ಬೆನ್ನಲ್ಲೇ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ನಂದೀಶ್ ಸಂಬಂಧಿಕರು ಸುಜಿತ್ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಪೋಲೀಸರು ಪ್ರಕರಣದ ಕುರಿತು ತನಿಖೆ ಮುಂದುವರೆಸಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ಭರವಸೆ ನೀಡಿದ್ದಾರೆ.

***

“ಭ್ರಷ್ಟರ ಬೇಟೆ” ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088070392

Leave a Reply

Your email address will not be published. Required fields are marked *

Related News

error: Content is protected !!