
ಬೆಳ್ತಂಗಡಿ, ಜುಲೈ 31 – ಧರ್ಮಸ್ಥಳದ ನೇತ್ರಾವತಿ ನದಿ ತಟದಲ್ಲಿ ನಿಗೂಢವಾಗಿ ಹೂತ ಶವಗಳ ಮಾಹಿತಿ ಹಿನ್ನೆಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಇಂದು ಮೂರನೇ ದಿನವೂ ಉತ್ಖನನ ಕಾರ್ಯಾಚರಣೆ ಮುಂದುವರಿಸಿದೆ.
ಈಗಾಗಲೇ ಶಂಕಿತ 13 ಸ್ಥಳಗಳನ್ನು ಗುರುತಿಸಲಾಗಿದೆ. ಸೋಮವಾರದಿಂದ ಪ್ರಾರಂಭವಾದ ಕಾರ್ಯಾಚರಣೆಯಲ್ಲಿಂದು 5 ಸ್ಥಳಗಳಲ್ಲಿ ಗುಂಡಿ ಅಗೆಲಾಗಿದ್ದು, ಯಾವುದೇ ಅಸ್ಥಿಪಂಜರ ಅಥವಾ ಶವಾಧಾರಗಳು ಲಭಿಸಿಲ್ಲ. ಇಂದಿನ ಕಾರ್ಯಚರಣೆ ಉತ್ಕಂಠೆ ಮೂಡಿಸಿದ್ದು, ಬಾಕಿಯಿರುವ 8 ಜಾಗಗಳಲ್ಲಿ 20 ಕಾರ್ಮಿಕರ ತಂಡ ಮಾನವ ಶ್ರಮದ ಮೂಲಕ ನೆಲ ಅಗೆಲಿದೆ. ಈ ಕಾರ್ಯದಲ್ಲಿ ಸ್ಥಳೀಯರ ಸಹಕಾರ ಕೂಡ ಪಡೆದಿದ್ದು, ಸ್ಥಳದಲ್ಲೇ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ, ಪುತ್ತೂರಿನ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ನೇತೃತ್ವ ವಹಿಸಿದ್ದಾರೆ.
ನೇತ್ರಾವತಿ ನದಿಯ 6ನೇ ಪಾಯಿಂಟ್ ಬಳಿ ಕಾರ್ಯಾಚರಣೆ ಆರಂಭವಾಗಿದ್ದು, ಅನಾಮಿಕ ದೂರುದಾರನ ಒದಗಿಸಿದ ಮಾಹಿತಿಯಂತೆ ಇಲ್ಲಿ ಅತಿಮುಖ್ಯ ಸ್ಪಾಟ್‌ಗಳು ಇವೆ ಎನ್ನಲಾಗಿದೆ. ಹೀಗಾಗಿ ಇಂದಿನ ನೆಲ ಅಗೆಯುವ ಪ್ರಕ್ರಿಯೆ ಹೆಚ್ಚು ಪ್ರಾಮುಖ್ಯತೆ ಹೊಂದಿದೆ.
ಈ ಮಧ್ಯೆ ಬುಧವಾರ ರಾತ್ರಿ ಅನಾಮಿಕ ವ್ಯಕ್ತಿಯೊಬ್ಬನಿಗೆ ಎಸ್ಐಟಿ ತೀವ್ರ ವಿಚಾರಣೆ ನಡೆಸಿದ್ದು, ಆತ ನೀಡಿದ ಪೂರಕ ಮಾಹಿತಿಗಳು ತನಿಖೆಗೆ ಹೊಸ ದಿಕ್ಕು ನೀಡಿವೆ. ಪ್ರಮುಖವಾಗಿ, ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಹೆಸರನ್ನು ಆತ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ. ಈ ಅಧಿಕಾರಿ ಧರ್ಮಸ್ಥಳದ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದ ವ್ಯಕ್ತಿಯಾಗಿದ್ದು, ಎಸ್ಐಟಿ ಅವರನ್ನೂ ಶೀಘ್ರವೇ ವಿಚಾರಣೆಗೆ ಒಳಪಡಿಸಬಹುದೆಂಬ ಅರ್ಥವೊಂದು ಮೂಡಿದೆ.
ಅಲ್ಲದೇ, ಅನಾಮಿಕ ವ್ಯಕ್ತಿ ನೀಡಿದ ಮಾಹಿತಿ ಆಧಾರವಾಗಿ ಹಲವು ಹೊಸ ಹೆಸರುಗಳು ತನಿಖಾ ವ್ಯಾಪ್ತಿಗೆ ಬಂದಿವೆ. ಹೀಗಾಗಿ, ಅವರಿಗೂ ನೋಟಿಸ್ ಜಾರಿ ಮಾಡಿ ಪ್ರಶ್ನಿಸಬಹುದಾದ ನಿರೀಕ್ಷೆಯಿದೆ.
ಈಗಾಗಲೇ ನಡೆದಿರುವ ಕಾರ್ಯಾಚರಣೆಗಳಿಂದ ಶವ ಅಥವಾ ಅಸ್ಥಿಪಂಜರ ಪತ್ತೆಯಾಗದಿದ್ದರೂ, SIT ನ ಇಂದು ನಡೆಯುವ ದಳದ ಉತ್ಖನನ ಕಾರ್ಯವು ನಿರ್ಣಾಯಕ ಹಂತದಲ್ಲಿ ನಿಂತಿದೆ. ಹೀಗಾಗಿ ಇಂದಿನ ದಿನದ ಬೆಳವಣಿಗೆಗೆ ಶ್ರದ್ಧಾ ಕೇಂದ್ರದ ಸುತ್ತಮುತ್ತ ವ್ಯಾಪಕ ತಲೆಕೆಡಿಸಿಕೊಳ್ಳುತ್ತಿರುವ ಸಾರ್ವಜನಿಕರಲ್ಲಿ ಇನ್ನಷ್ಟು ಕುತೂಹಲ ಮೂಡಿದೆ.
ಜಿಲ್ಲಾ ಹಾಗೂ ರಾಜ್ಯದ ತನಿಖಾ ತಂತ್ರಗಳನ್ನು ಹೊತ್ತಿ ಹಾಕಿಕೊಳ್ಳುವ ಈ ಪ್ರಕ್ರಿಯೆಯಲ್ಲಿ ಯಾವುದೇ ಪತ್ತೆಯಾದರೂ ಭವಿಷ್ಯದಲ್ಲಿನ ಮಹತ್ವದ ಬೆಳವಣಿಗೆಗೆ ನಾಂದಿಯಾಗಲಿದೆ.
***
“ಭ್ರಷ್ಟರ ಬೇಟೆ” ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088070392