Latest

ಯುಗಾದಿ ಹಬ್ಬದ ಸಂದರ್ಭದಲ್ಲಿ ಮನೆ ಕಳ್ಳತನ: ಪೊಲೀಸ್ ಕಾನ್ಸ್ಟೇಬಲ್ ಮನೆಯಲ್ಲಿ 5.3 ಲಕ್ಷ ಮೌಲ್ಯದ ಚಿನ್ನ, ದೋಚಿದ ಕಳ್ಳರು

ದಾವಣಗೆರೆ: ಹರಿಹರ ಪಟ್ಟಣದ ವಿದ್ಯಾನಗರದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಊರಿಗೆ ತೆರಳಿದ್ದ ಪೊಲೀಸರ ಮನೆಯಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯನಾಯ್ಕ ಅವರ ನಿವಾಸವಿದು.

ಮಾರ್ಚ್ 29ರಂದು ಕುಟುಂಬದೊಂದಿಗೆ ಯುಗಾದಿ ಆಚರಿಸಲು ಊರಿಗೆ ತೆರಳಿದ್ದ ಜಯನಾಯ್ಕ ಅವರು, ರಾತ್ರಿ ಪಾಳಿ ಕರ್ತವ್ಯದ ನಿಮಿತ್ತ ಮರಳಿ ಬಂದು ಮನೆಗೆ ಬೀಗ ಹಾಕಿ ತೆರಳಿದ್ದರು. 9.30ರ ಹೊತ್ತಿಗೆ ಮನೆಗೆ ಹಿಂದಿರುಗಿದಾಗ ಗೇಟ್ ಮತ್ತು ಬಾಗಿಲಿನ ಇಂಟರ್ ಲಾಕ್ ಮುರಿದು ಹಾಕಿರುವುದು ಗಮನಕ್ಕೆ ಬಂತು. ತಕ್ಷಣಕ್ಕೆ ಒಳಗೆ ಪರಿಶೀಲಿಸಿದಾಗ ಸುಮಾರು 60.5 ಗ್ರಾಂ ತೂಕದ ಚಿನ್ನಾಭರಣಗಳು – ಚೈನ್ ಸರ, ಉಂಗುರ, ಬ್ರಾಸ್ ಲೇಟು, ಕಿವಿಓಲೆಗಳು ಹಾಗೂ ರೂ. 50,000 ನಗದು ಕಳ್ಳತನಗೊಂಡಿರುವುದು ಗೊತ್ತಾಗಿದೆ.

ಒಟ್ಟು ರೂ. 5.3 ಲಕ್ಷ ಮೌಲ್ಯದ ಆಸ್ತಿ ಕಳ್ಳತನಗೊಂಡಿದ್ದು, ಈ ಸಂಬಂಧ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಕಳ್ಳರ ಪತ್ತೆಗಾಗಿ ಸಿಸಿಟಿವಿ ಫುಟೇಜ್‌ಗಳ ಪರಿಶೀಲನೆ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

ಹಬ್ಬದ ಸಂದರ್ಭದಲ್ಲಿ ಖಾಲಿ ಮನೆಗಳನ್ನು ಗುರಿಯಾಗಿಸುವ ಕಳ್ಳರ ಚಟುವಟಿಕೆ ಮತ್ತೊಮ್ಮೆ ಮರುಕಳಿಸಿರುವ ಈ ಘಟನೆ, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ.

nazeer ahamad

Recent Posts

ಮನೆ ಬಳಕೆಗೆ ಸಿಗದ ಗೃಹಬಳಕೆಯ ಸಿಲಿಂಡರ್‌ಗಳು ಹೋಟೆಲ್‌ಗಳಲ್ಲಿ , ಅಧಿಕಾರಿಗಳ ನಿರ್ಲಕ್ಷ್ಯ

ಮುಂಡಗೋಡ: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಅಮೇರಿಕಾ ಉದ್ವಿಗ್ನತೆ (ಯುದ್ಧ) ಪರಿಣಾಮವಾಗಿ ಇಂಧನ ಕ್ಷೇತ್ರದಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯ…

12 minutes ago

ಕರ್ನಾಟಕ ಹೈಕೋರ್ಟ್‌ನಲ್ಲಿ 70 ಹುದ್ದೆಗಳು: ಆಸಕ್ತರಿಗೆ ಉದ್ಯೋಗದ ಸುವರ್ಣಾವಕಾಶ

ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…

6 hours ago

ಕೋರ್ಟ್ ಉದ್ಯೋಗದ ಹೆಸರಿನಲ್ಲಿ ಕೋಟಿ ಕೋಟಿ ಮೋಸ: ಬೆಂಗಳೂರಿನಲ್ಲಿ ಫ್ರಾಡ್ ದಂಪತಿ ಬಂಧನ

ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…

6 hours ago

ಗಂಡ ಬಿಟ್ಟ ಮಹಿಳೆಯರೇ ಇವನ ಟಾರ್ಗೆಟ್; 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ..!

ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…

6 hours ago

ಗಂಡನಿಲ್ಲದ ವೇಳೆ ಬಾಡಿಗೆಗೆ ಇದ್ದ ಯುವಕನ ಜೊತೆ ಸರಸ; ಅಡ್ಡಿಯಾದ ಅತ್ತೆಯನ್ನು ಕೊಂದ ಸೊಸೆ

ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…

6 hours ago

ಗೌರಿಬಿದನೂರಿನಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಸಾವು, ಪುತ್ರನಿಗೆ ಗಾಯ

ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…

7 hours ago