ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಒಂದಿಷ್ಟು ಆಶ್ಚರ್ಯ ಮತ್ತು ಒಂದಿಷ್ಟು ಗೊಂದಲ ಮೂಡಿಸಿರುವ ವಿಚಿತ್ರ ಘಟನೆ ಒಂದು ಇದೀಗ ವೈರಲ್ ಆಗಿದೆ. ದೇವಾಲಯವೊಂದರಲ್ಲಿ ಶ್ರೀಕೃಷ್ಣನ ವಿಗ್ರಹದಿಂದ ಹೃದಯ ಬಡಿತದ ಶಬ್ದ ಕೇಳಿಸುತ್ತಿದೆ ಎಂಬ ಭಕ್ತನ ಅಚ್ಚರಿಯ ಹೇಳಿಕೆಯಿಂದ ಆರಂಭವಾದ ಘಟನೆ, ವೈದ್ಯರ ನಿರೀಕ್ಷಿತ ಆಗಮನದವರೆಗೆ ತಲುಪಿದೆ.

ವಿಡಿಯೊದಲ್ಲಿನ ದೃಶ್ಯಗಳನ್ನು ಗಮನಿಸಿದರೆ, ಶ್ರದ್ಧಾಭಕ್ತನೊಬ್ಬ ದೇವಾಲಯದ ಪೂಜಾ ಸಂದರ್ಭದಲ್ಲಿ ವಿಗ್ರಹದ ಹತ್ತಿರ ಹೋಗಿ “ಹೃದಯ ಬಡಿತದಂತದ್ದೊಂದು ಶಬ್ದ ಕೇಳಿಸುತ್ತಿದೆ” ಎಂದು ಹೇಳುತ್ತಾನೆ. ತಕ್ಷಣವೇ ಈ ವಿಷಯವು ಅಲ್ಲಿರುವ ಭಕ್ತರ ನಡುವೆ ಕುತೂಹಲ ಜಗಮೆತ್ತಿತು. ಇನ್ನು ವಿಷಯದ ಸತ್ಯಾಸತ್ಯತೆ ತಿಳಿಯಲು ವೈದ್ಯರೊಬ್ಬರನ್ನು ಸ್ಥಳಕ್ಕೆ ಆಹ್ವಾನಿಸಲಾಯಿತು.

ಡಾಕ್ಟರ್‌ ವಿಗ್ರಹದ ಹತ್ತಿರ ಹೋಗಿ ಸ್ಟೆತಸ್ಕೋಪ್‌ನ ಸಹಾಯದಿಂದ ವಿಗ್ರಹದ ಎದೆ ಭಾಗವನ್ನು ಪರೀಕ್ಷಿಸುತ್ತಿರುವ ದೃಶ್ಯ ವೀಡಿಯೊದಲ್ಲಿ ಕಂಡು ಬರುತ್ತದೆ. ಇನ್ನೊಬ್ಬ ವ್ಯಕ್ತಿಯು ಕೂಡ ಇದೇ ಕ್ರಮವನ್ನು ಅನುಸರಿಸುತ್ತಿರುವ ದೃಶ್ಯ ಪಕ್ಕದಲ್ಲಿಯೇ ಸೆರೆಹಿಡಿದಿದೆ.

ಈ ವಿಡಿಯೋ ಯಾವ ದೇವಾಲಯದದು, ಯಾವ ರಾಜ್ಯದಲ್ಲಿ ಸಂಭವಿಸಿದೆ, ಅಥವಾ ಯಾವ ದಿನಾಂಕದಲ್ಲಿ ಚಿತ್ರೀಕರಣವಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಭಕ್ತರಿಗೆ ನಂಬಿಕೆಯ ಸಂಗತಿಯಾಗಿ ಕಂಡುಬರುತ್ತಿದ್ದರೆ, ಇನ್ನೊಂದೆಡೆ ಕೆಲವರು ಇದನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕಾದ ಸಂಗತಿಯೆಂದು ಗುರುತಿಸುತ್ತಿದ್ದಾರೆ.

 

Related News

error: Content is protected !!