Categories: Latest

ಅಖಾಡಕ್ಕಿಳಿದ ಆರೋಗ್ಯ ಇಲಾಖೆ: ಭಟ್ಕಳದಲ್ಲಿ 3 ಕ್ಲಿನಿಕ್ ಸೀಜ್!

ಭಟ್ಕಳ: ಸಾರ್ವಜನಿಕರ ಆರೋಗ್ಯ ರಕ್ಷಣೆಯನ್ನು ಪ್ರಮುಖವಾಗಿ ಪರಿಗಣಿಸಿರುವ ಜಿಲ್ಲಾ ಆರೋಗ್ಯ ಇಲಾಖೆ, ಭಟ್ಕಳ ಪಟ್ಟಣದಲ್ಲಿ ನಕಲಿ ಕ್ಲಿನಿಕ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಸೋಮವಾರ ಟಿಎಚ್‌ಒ ಡಾ. ಸನಾ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಮೂರು ಕ್ಲಿನಿಕ್‌ಗಳನ್ನು ಸೀಲ್ ಮಾಡಲಾಗಿದೆ.

ಜಿಲ್ಲಾ ಆರೋಗ್ಯ ಇಲಾಖೆಯ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ನೋಡಲ್ ಅಧಿಕಾರಿ, ಆಯುಷ್ ಅಧಿಕಾರಿ, ನಗರ ಠಾಣೆ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು. ತಂಡವು ಭಟ್ಕಳ ಪಟ್ಟಣದ ನಾಲ್ಕು ಕ್ಲಿನಿಕ್‌ಗಳು ಹಾಗೂ ಶಿರಾಲಿಯ ಒಂದು ಕ್ಲಿನಿಕ್‌ನಲ್ಲಿ ಪರಿಶೀಲನೆ ನಡೆಸಿತು.

ಪರಿಶೀಲನೆ ವೇಳೆ ವೈದ್ಯರು ಹೊಂದಿರುವ ಎಂ.ಬಿ.ಬಿ.ಎಸ್., ಬಿ.ಎ.ಎಂ.ಎಸ್., ಬಿ.ಎಚ್‌.ಎಂ.ಎಸ್. ಹಾಗೂ ಯುನಾನಿ ಪದವಿಗಳ ಪ್ರಮಾಣಪತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. ಈ ವೇಳೆ ಅಗತ್ಯ ಮಾನ್ಯತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಮೂರು ಕ್ಲಿನಿಕ್‌ಗಳನ್ನು ತಕ್ಷಣ ಸೀಲ್ ಮಾಡಲಾಗಿದೆ.

ಮದಿನಾ ಕಾಲನಿಯಲ್ಲಿರುವ ಒಂದು ಕ್ಲಿನಿಕ್ ಮಾಲೀಕರು ಸ್ವಯಂಪ್ರೇರಿತವಾಗಿ ಕ್ಲಿನಿಕ್ ಮುಚ್ಚಿದ್ದು, ಅವರ ಬಾಗಿಲಿಗೆ ಆರೋಗ್ಯ ಇಲಾಖೆ ನೋಟಿಸ್ ಅಂಟಿಸಿದೆ.

ಈ ಕುರಿತು ವರದಿಯನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ರವಾನಿಸಲಾಗಿದ್ದು, ಸಮಗ್ರ ತನಿಖೆಯ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಟಿಎಚ್‌ಒ ಡಾ. ಸನಾ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಪಟ್ಟಣ ಹಾಗೂ ತಾಲೂಕಿನ ವಿವಿಧ ಭಾಗಗಳಲ್ಲಿ ಇಂತಹ ದಾಳಿ ಮತ್ತು ಪರಿಶೀಲನೆ ಮುಂದುವರಿಯಲಿದ್ದು, ಸಾರ್ವಜನಿಕರು ಅನಧಿಕೃತ ವೈದ್ಯರಿಂದ ಚಿಕಿತ್ಸೆ ಪಡೆಯಬಾರದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಸರ್ಕಾರದಿಂದ ಮಾನ್ಯತೆ ಪಡೆದ ನೋಂದಾಯಿತ ವೈದ್ಯರನ್ನು ಮಾತ್ರ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

ಭ್ರಷ್ಟರ ಬೇಟೆ

Recent Posts

ಮಥುರಾದಲ್ಲಿ ಬಾಲಕಿಯ ಅಳಲು: ‘ಬಾಬಾ’ ವಿರುದ್ಧ ಅತ್ಯಾಚಾರ ಆರೋಪ, ಆರೋಪಿಗಾಗಿ ಪೊಲೀಸರು ಹುಡುಕಾಟ

ಉತ್ತರ ಪ್ರದೇಶದ ಮಥುರಾದಲ್ಲಿ 17 ವರ್ಷದ ಬಾಲಕಿಯೊಬ್ಬಳು ಸ್ಥಳೀಯವಾಗಿ ‘ಬಾಬಾ’ ಎಂದು ಕರೆಯಲ್ಪಡುವ ವ್ಯಕ್ತಿಯ ವಿರುದ್ಧ ಅತ್ಯಾಚಾರದ ಗಂಭೀರ ಆರೋಪ…

3 hours ago

ಹೆಂಡತಿಯ ಕಾಟ ತಾಳಲಾರದೆ ರೈಲಿಗೆ ತಲೆ ಕೊಟ್ಟ ಗಂಡ

ಮಹಾರಾಷ್ಟ್ರದ ಕಲ್ಯಾಣ್ ಸಮೀಪದ ಅಂಬರನಾಥ್ ಮತ್ತು ಬದ್ಲಾಪುರ್ ರೈಲು ನಿಲ್ದಾಣಗಳ ಮಧ್ಯೆ ಏಪ್ರಿಲ್ 3ರ ನಸುಕಿನ ಜಾವ ದುರ್ಘಟನೆ ಸಂಭವಿಸಿದೆ.…

3 hours ago

ವಿವಾಹಿತ ಮುಸ್ಲಿಂ ಚಾಲಕನೊಂದಿಗೆ ಹಿಂದೂ ಯುವತಿ ಪರಾರಿ: ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಯುವತಿ ನಾಪತ್ತೆಯಾದ ಪ್ರಕರಣೊಂದು ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಧಾರವಾಡ ಜಿಲ್ಲೆಯ ಕೆಲಗೇರಿ ನಿವಾಸಿಯಾದ 22…

3 hours ago

ಪ್ರೇಮಿಗಳ ದುರಂತ ಅಂತ್ಯ: ಪ್ರೇಯಸಿ ಆತ್ಮಹತ್ಯೆ, ಮಾಹಿತಿ ತಿಳಿದು ಪ್ರಿಯಕರನೂ ಜೀವತ್ಯಾಗ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ಪ್ರೇಮಿಗಳಿಬ್ಬರ ಆತ್ಮಹತ್ಯೆ ಪ್ರಕರಣವು ಹೃದಯವಿದ್ರಾವಕ ಘಟನೆಯಾಗಿ ಬೆಳಕಿಗೆ ಬಂದಿದೆ. ಮದುವೆ ವಿಚಾರದಲ್ಲಿ ಮನೆಯವರ ವಿರೋಧ…

21 hours ago

ಲೋಕಾಯುಕ್ತ ದಾಳಿ: 4 ಜಿಲ್ಲೆಗಳಲ್ಲಿ ಭ್ರಷ್ಟಾಚಾರ ಆರೋಪದಡಿ ಅಧಿಕಾರಿಗಳ ಮನೆ-ಕಚೇರಿಗಳ ಮೇಲೆ ಶೋಧ

ರಾಜ್ಯದಲ್ಲಿ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಭಾರೀ ಕಾರ್ಯಾಚರಣೆ ನಡೆಸಿದ್ದು, ಬಳ್ಳಾರಿ, ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಗಳ…

1 day ago

ಅಕ್ರಮ ಆಸ್ತಿ ಪ್ರಕರಣ: ಸಹಾಯಕ ಡ್ರಗ್ ಕಂಟ್ರೋಲರ್ ಮನೆ ಮೇಲೆ ಲೋಕಾಯುಕ್ತ ದಾಳಿ – ಕೋಟ್ಯಂತರ ಆಸ್ತಿ ಪತ್ತೆ

ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸಹಾಯಕ ಡ್ರಗ್ ಕಂಟ್ರೋಲರ್ ಬಾಬು ಬಿ.ಎನ್ ಅವರ ಮನೆ ಸೇರಿದಂತೆ…

1 day ago