Latest

ಜಾತಿ ಸಮೀಕ್ಷೆ ಉದ್ದೇಶ ಮರೆವೆಯೆ? ಸಮೀಕ್ಷೆ ಇಲ್ಲದೆ ಸ್ಟಿಕ್ಕರ್ ಅಂಟಿಸುವ ಬಿಬಿಎಂಪಿ ಸಿಬ್ಬಂದಿ ವಿರುದ್ಧ ಜನರ ಆಕ್ರೋಶ

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ 3.6 ಕೋಟಿ ರೂಪಾಯಿ ವೆಚ್ಚ ಮಾಡಿರುವು ಆದರೆ, ನಿಜವಾದ ಸಮೀಕ್ಷೆ ನಡೆಯದೆ, ಬಿಬಿಎಂಪಿ ಸಿಬ್ಬಂದಿ ಮನೆ ಮನೆಗೆ ತೆರಳದೆ ಕೇವಲ ‘ಸರ್ವೇ ಪೂರ್ಣ’ ಎಂಬ ಸ್ಟಿಕ್ಕರ್ ಅಂಟಿಸಿ ಹೋಗುತ್ತಿರುವುದಕ್ಕೆ ಸಾರ್ವಜನಿಕ ಆಕ್ರೋಶ ಹೊರಹೊಮ್ಮಿದೆ.

ಬೆಂಗಳೂರು ನಗರದ ಹಲವು ಕಡೆ, ವಿಶೇಷವಾಗಿ ಥಣಿಸಂದ್ರ ಸೇರಿದಂತೆ ಹಲವೆಡೆ, ಸಮೀಕ್ಷೆ ನಡೆದೇ ಇಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಕೆಲವು ಸ್ಥಳಗಳಲ್ಲಿ ಮನೆಗಳಲ್ಲಷ್ಟೇ ಅಲ್ಲದೆ, ಬೇಕರಿ ಹಾಗೂ ಕಾಂಡಿಮೆಂಟ್ಸ್ ಅಂಗಡಿಗಳ ಮೇಲೂ ‘ಜಾತಿ ಸಮೀಕ್ಷೆ ಪೂರ್ಣ’ ಎಂಬ ಸ್ಟಿಕ್ಕರ್‌ಗಳು ಅಂಟಿಸಿರುವುದು ಬೆಳಕಿಗೆ ಬಂದಿದೆ. ಇದು ಜನರ ಕೋಪಕ್ಕೆ ಕಾರಣವಾಗಿದ್ದು, “ಅಂಗಡಿಯವರಿಗೆ ಜಾತಿಯ ಕುರಿತು ಹೇಗೆ ಮಾಹಿತಿ ಸಂಗ್ರಹಿಸುತ್ತಾರೆ?” ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಮೀಕ್ಷೆಯ ವಿಷಯದಲ್ಲಿ ಅಸಡ್ಡೆಪೂರಿತ ವಹಿವಾಟು ನಡೆಯುತ್ತಿರುವುದನ್ನು ತೋರಿಸುವ ಫೋಟೋಗಳು ಈಗ ವೈರಲ್ ಆಗುತ್ತಿವೆ. ಈ ಮೂಲಕ ಸರ್ಕಾರದ ಭದ್ರತೆ ಮತ್ತು ಕಾರ್ಯಪದ್ಧತಿಯ ಮೇಲೂ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಥಳೀಯ ನಿವಾಸಿಗಳು, “ಇದು ಸಾರ್ವಜನಿಕ ಹಣದ ನಿಷ್ಫಲ ಬಳಕೆ. ಸಮೀಕ್ಷೆಯ ಉದ್ದೇಶವನ್ನು ನಿರ್ಲಕ್ಷಿಸುವ, ಕೇವಲ ಕೆಲಸ ಮುಗಿಸಿದ ನಾಟಕವನ್ನೇ ಬಿಬಿಎಂಪಿ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ವೇ ನಿಜವಾಗಿಯೂ ನಡೆದಿದೆಯೇ? ಅಥವಾ ಕೇವಲ ಪಟ್ಟಿ ಪೂರ್ಣವಾಯಿತೆಂದು ತೋರಿಸಲು ಸ್ಟಿಕ್ಕರ್‌ಗಳ ಮೂಲಕ ಲೋಕದೃಷ್ಟಿ ಮಾಯಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಾಗಿದೆ.

nazeer ahamad

Recent Posts

“ರಾಕ್ಷಸೀ ಕೃತ್ಯ: ಪ್ರೇಮದ ಹೆಸರಿನಲ್ಲಿ ಮಹಿಳೆಯ ಹತ್ಯೆ, ಬಳಿಕ ಖಾಸಗಿ ಭಾಗ ಹರಿದು ಕರುಳು ಹೊರತೆಗೆದ ಕ್ರೂರಿ!”

ಉತ್ತರ ಪ್ರದೇಶದ ಫತೇಪುರ ಜಿಲ್ಲೆಯಲ್ಲಿ ನರ್ಬಯಾ ಪ್ರಕರಣವನ್ನು ನೆನಪಿಸುವಂತೆಯೇ ಒಂದು ಹೃದಯವಿದ್ರಾವಕ ಅಪರಾಧ ಬೆಳಕಿಗೆ ಬಂದಿದೆ. ಯುವಕನೊಬ್ಬ ತನ್ನ ಪ್ರೇಮಿಕೆಯನ್ನು…

9 hours ago

40 ವರ್ಷದ ವ್ಯಕ್ತಿಯ ಜೊತೆ 13 ವರ್ಷದ ಬಾಲಕಿಯ ಮದುವೆ.!

ಹೈದರಾಬಾದ್, ಜುಲೈ 31: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಬಾಲ್ಯವಿವಾಹದ ಸಂಸ್ಕೃತಿಯ ಕುರಿತಂತೆ ಆತಂಕ ಹೆಚ್ಚಿಸುವ ಘಟನೆ ಬೆಳಕಿಗೆ ಬಂದಿದೆ. ಕೇವಲ…

10 hours ago

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಶುಂಠಿ,ಮಾವು,ಅಡಿಕೆಗೆ ಅವಕಾಶ

ಮುಂಡಗೋಡ: ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ 2025 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ…

10 hours ago

ಪೈಪ್ ನಲ್ಲಿ ಸಿಕ್ಕಿಕೊಂಡಿದ್ದ ನಾಗರ ಹಾವನ್ನು ರಕ್ಷಿಸಿದ ಗಸ್ತು ವನಪಾಲಕ ಮುತ್ತುರಾಜ

ಮುಂಡಗೋಡ: ತಾಲೂಕಿನ ಕಾತೂರ ವಲಯದ ಓರಲಗಿ ಗಸ್ತಿನ ಮಾಲತೇಶ ಗೊಂದಿ ಅವರ ಹೊಲದಲ್ಲಿ ಪೈಪ್ ನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತಿದ್ದ ನಾಗರಹಾವನ್ನು…

11 hours ago

ಸಿನಿಮಾ ಕ್ಷೇತ್ರದಲ್ಲಿ ಬಿರುಕು ಬಿಡಬೇಡಿ: ರಮ್ಯಾ–ದರ್ಶನ್ ಅಭಿಮಾನಿ ವಿವಾದಕ್ಕೆ ರಾಕ್‌ಲೈನ್ ವೆಂಕಟೇಶ್ ಗಂಭೀರ ಎಚ್ಚರಿಕೆ”

ಬೆಂಗಳೂರು – ನಟಿ ರಮ್ಯಾ ಮತ್ತು ನಟ ದರ್ಶನ್ ಅವರ ಅಭಿಮಾನಿಗಳ ನಡುವಿನ ಸಾಮಾಜಿಕ ಮಾಧ್ಯಮ ಜಟಾಪಟಿಗೆ ಸಂಬಂಧಿಸಿದಂತೆ ಇದೀಗ…

11 hours ago

ಅಭಿಮಾನಿಗಳ ಮಾತಿಗೆ ಸಂಯಮ ತರಲು ದರ್ಶನ್ ಜೊತೆ ಮಾತನಾಡುತ್ತೇನೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ”

ಮಂಡ್ಯ, ಜುಲೈ 31: "ನಟ ದರ್ಶನ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಜವಾಬ್ದಾರಿತನದ ಮೂಲಕ ಕೆಟ್ಟ ಕಾಮೆಂಟ್‌ಗಳು ಮಾಡುತ್ತಿರುವುದು ಅನಾವಶ್ಯಕ.…

12 hours ago