ಬಾಗಲಕೋಟೆ: ಜಿಲ್ಲೆಯ ಗುಡೂರು ಗ್ರೇಡ್-1 ಗ್ರಾಮ ಪಂಚಾಯಿತಿಯಲ್ಲಿ ಸಮಯಕ್ಕೆ ಸರಿಯಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಯಾವ ಅಧಿಕಾರಿಗಳು ಬರುತ್ತಿಲ್ಲವೆಂದು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.
ಒಂದು ಗ್ರಾಮ ಪಂಚಾಯಿತಿ ಎಂದರೆ ಸಾಕಷ್ಟು ಕೆಲಸಗಳನ್ನು ಮಾಡಿಸಿಕೊಳ್ಳುವ ಸಲುವಾಗಿ ಗ್ರಾಮಸ್ಥರು ಬರುವುದು ಸಹಜ. ಆದರೆ ಈ ಕೆಲಸಗಳನ್ನು ಮಾಡಿಕೊಡಬೇಕಾದ ದ್ವಿತೀಯ ದರ್ಜೆ ಸಹಾಯಕ, ಪ್ರಥಮ ದರ್ಜೆ ಸಹಾಯಕ, ಹಾಗೂ ಇನ್ನುಳಿದ ಕೆಲವು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಯಾರ ಹತ್ತಿರ ಹೋಗಿ ಗ್ರಾಮಸ್ಥರು ತಮ್ಮ ಕೆಲಸ, ಕಾರ್ಯಗಳನ್ನು ಮಾಡಿಸಬೇಕು ಎಂಬುದು ಇಲ್ಲಿ ಗ್ರಾಮಸ್ಥರಿಗೆ ಪ್ರಶ್ನೆಯಾಗಿದೆ?
ಅಷ್ಟೇ ಅಲ್ಲದೆ ಇಲ್ಲಿನ ಗ್ರಾಮಸ್ಥರು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಕೊಡಿ ಎಂದು ಕೇಳಿದರೆ ಎಲ್ಲಾ ಗ್ರಾಮಸ್ಥರಿಗೂ ಕೆಲಸ ಕೊಡಲು ಆಗುವುದಿಲ್ಲ ಎಂದು ಇಲ್ಲಿನ ಪಿಡಿಒ ಬಸವರಾಜ ರೇವಡಿ ದುರಹಂಕಾರದಿಂದ ಹೇಳುತ್ತಾನಂತೆ. ಆದರೆ ತಮಗೆ ಬೇಕಾದ ಕೆಲವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುತ್ತಾರೆಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಅಲ್ಲಿನ ಗ್ರಾಮಸ್ಥರು ಪಿಡಿಒ ಗೆ ಮನವಿ ಸಲ್ಲಿಸಿದ್ದಾರೆ.
ನಾವು ನಾನ್ ಗ್ರಾಕ್ಸೋ ಸಂಘಟನೆಯವರಾಗಿದ್ದು ನಮಗೆ ಐದು ತಿಂಗಳುಗಳಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಟ್ಟಿಲ್ಲ ಆದರೆ ಗ್ರಾಕ್ಸೋ ಸಂಘಟನೆಯವರಿಗೆ ಮಾತ್ರ ನಮ್ಮ ಮುಂದೆಯೇ ಕೆಲಸ ಕೊಟ್ಟಿದ್ದಾರೆಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ನಮಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡದಿದ್ದರೆ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಈ ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಗ್ರಾಮಸ್ಥರ ಅಳಲನ್ನು ಕೇಳಬೇಕು ಎಂದು ಭ್ರಷ್ಟರ ಬೇಟೆ ಪತ್ರಿಕೆ ಆಗ್ರಹಿಸುತ್ತದೆ.

ವರದಿ: ವಿಶ್ವನಾಥ ಭಜಂತ್ರಿ

error: Content is protected !!