Categories: JobsLatest

ರೈಲ್ವೆ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: 11,127 ಅಸಿಸ್ಟಂಟ್ ಲೊಕೊ ಪೈಲಟ್ ಹುದ್ದೆಗಳ ನೇಮಕಾತಿ ಘೋಷಣೆ

ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಯುವಕರಿಗೆ ಸಂತಸದ ಸುದ್ದಿ ಬಂದಿದೆ. Railway Recruitment Board (ಆರ್‌ಆರ್‌ಬಿ) ದೇಶಾದ್ಯಂತ 11,127 ಅಸಿಸ್ಟಂಟ್ ಲೊಕೊ ಪೈಲಟ್ (ALP) ಹುದ್ದೆಗಳ ಭರ್ತಿಗೆ ಶಾರ್ಟ್ ನೋಟಿಫಿಕೇಷನ್ ಪ್ರಕಟಿಸಿದೆ. ಈ ನೇಮಕಾತಿ ಮೂಲಕ ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2026ರ ಮೇ 15ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2026ರ ಜೂನ್ 14 ಎಂದು ತಿಳಿಸಲಾಗಿದೆ.

ಹುದ್ದೆಗಳ ವಿವರ

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 11,127 ಅಸಿಸ್ಟಂಟ್ ಲೊಕೊ ಪೈಲಟ್ ಹುದ್ದೆಗಳು ಭರ್ತಿಯಾಗಲಿವೆ.

ವಯೋಮಿತಿ

2026ರ ಜುಲೈ 1ರ ಪ್ರಕಾರ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷವಾಗಿರಬೇಕು. ಗರಿಷ್ಠ ವಯೋಮಿತಿ 30 ವರ್ಷ ನಿಗದಿಪಡಿಸಲಾಗಿದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ವಿದ್ಯಾರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿದ್ದು, ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರಬೇಕು. ಇದಲ್ಲದೆ, ಸಂಬಂಧಿತ ಕ್ಷೇತ್ರದಲ್ಲಿ ಎಂಜಿನಿಯರಿಂಗ್ ಡಿಪ್ಲೊಮಾ ಅಥವಾ ಪದವಿ ಪಡೆದವರು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಆಯ್ಕೆ ಪ್ರಕ್ರಿಯೆ

ಈ ನೇಮಕಾತಿಯಲ್ಲಿ ಅಭ್ಯರ್ಥಿಗಳನ್ನು ಹಲವು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

ಮೊದಲ ಹಂತ (CBT-1): ಪ್ರಾಥಮಿಕ ತಪಾಸಣೆ ಪರೀಕ್ಷೆ.

ಎರಡನೇ ಹಂತ (CBT-2): ತಾಂತ್ರಿಕ ಹಾಗೂ ಸಾಮಾನ್ಯ ವಿಷಯಗಳ ಮೇಲೆ ಆಧಾರಿತ ಪರೀಕ್ಷೆ.

ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್ (CBAT): ಅಸಿಸ್ಟಂಟ್ ಲೊಕೊ ಪೈಲಟ್ ಹುದ್ದೆಗೆ ಕಡ್ಡಾಯ ಪರೀಕ್ಷೆ.

ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ: ಅಭ್ಯರ್ಥಿಗಳು ದೈಹಿಕವಾಗಿ ಸದೃಢರಾಗಿದ್ದು ‘A-1’ ದೃಷ್ಟಿ ಮಾನದಂಡ ಹೊಂದಿರಬೇಕು.

ಸಂಬಳ

ಅಸಿಸ್ಟಂಟ್ ಲೊಕೊ ಪೈಲಟ್ ಹುದ್ದೆ 7ನೇ ವೇತನ ಆಯೋಗದ ಲೆವಲ್-2 ಅಡಿಯಲ್ಲಿ ಬರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕವಾಗಿ ₹19,900 ಮೂಲ ವೇತನ ನೀಡಲಾಗುತ್ತದೆ. ಇದಕ್ಕೆ ಜೊತೆಗೆ ರೈಲ್ವೆಯ ವಿವಿಧ ಭತ್ಯೆಗಳು ಕೂಡ ಲಭ್ಯವಾಗುತ್ತವೆ.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಪ್ರಕ್ರಿಯೆ ಆರಂಭವಾದ ಬಳಿಕ ಅಭ್ಯರ್ಥಿಗಳು ರೈಲ್ವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು. ಇದಕ್ಕಾಗಿ rrbapply.gov.in ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಭ್ರಷ್ಟರ ಬೇಟೆ

Recent Posts

ಸ್ನೇಹಿತನ ಸಹೋದರಿ ಜೊತೆ ಆಕ್ರಮ ಸಂಬಂಧ; ಕೊಲೆಯಲ್ಲಿ ಅಂತ್ಯ

ಗುಂಡ್ಲುಪೇಟೆ ಪಟ್ಟಣದ ಸಮೀಪದ ದೊಡ್ಡಕೆರೆ ಏರಿ ಬಳಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಮೂಖಹಳ್ಳಿ ಗ್ರಾಮದ…

4 hours ago

ಪ್ರಿಯಕರನೊಂದಿಗೆ ಲಾಡ್ಜ್‌ನಲ್ಲಿ ಪತ್ನಿ; ರೆಡ್ ಹ್ಯಾಂಡ್ ಆಗಿ ಪೊಲೀಸರೊಂದಿಗೆ ಹೋಗಿ ಬಯಲಿಗೆಳೆದ ಪತಿ

ಪ್ರಿಯಕರನೊಂದಿಗೆ ಲಾಡ್ಜ್‌ನಲ್ಲಿ ಇದ್ದ ಪತ್ನಿಯನ್ನು ಪತಿಯೇ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಹಿಂದೆ…

10 hours ago

ಹುಚ್ಚುನಾಯಿ ಕಡಿತ, 13 ಜನಕ್ಕೆ ಗಾಯ.

ಪಟ್ಟಣದಲ್ಲಿ ಹುಚ್ಚುನಾಯಿ ಹಾವಳಿಯಿಂದಾಗಿ 13 ಜನಕ್ಕೆ ಕಚ್ಚಿ ಪಟ್ಟಣವನ್ನು ಬೆಚ್ಚಿ ಬೀಳಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಜಮ್ಮಾ ಮಸೀದಿ,…

17 hours ago

ನನ್ನ ಮಗುವನ್ನು ಬೆಳೆಸಲು ನಾನು ಯಾರ ಜೊತೆಗೆ ಬೇಕಾದರೂ ಮಲಗಲು ಸಿದ್ಧ- ‘ವಡಾ ಪಾವ್ ಗರ್ಲ್’

ಸಾಮಾಜಿಕ ಮಾಧ್ಯಮಗಳಲ್ಲಿ ‘ವಡಾ ಪಾವ್ ಗರ್ಲ್’ ಎಂದು ಖ್ಯಾತಿ ಪಡೆದಿರುವ ಚಂದ್ರಿಕಾ ದೀಕ್ಷಿತ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ಅವರು…

17 hours ago

ನಕಲಿ ದಾಖಲೆಗಳಿಂದ ಉದ್ಯೋಗ ಪಡೆಯಲು ಯತ್ನ – ರಾಜ್ಯದಲ್ಲಿ 20 ಅತಿಥಿ ಉಪನ್ಯಾಸಕರು ಪತ್ತೆ..!

ರಾಜ್ಯದಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಉದ್ಯೋಗ ಪಡೆಯಲು ಪ್ರಯತ್ನಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಉನ್ನತ ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರ…

1 day ago

ರಾಜ್ಯದಲ್ಲಿ 5764 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಕಂಡುಬಂದಿದೆ. ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಲು…

1 day ago