ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ನವಗ್ರಹ ಸಿನಿಮಾದಲ್ಲಿ ‘ಶೆಟ್ಟಿ’ ಪಾತ್ರದಲ್ಲಿ ಮೆರೆದ ನಟ ಗಿರಿ ದಿನೇಶ್ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಗಿದ್ದಾರೆ. ಶುಕ್ರವಾರ ಸಂಜೆ ಅವರು ಮನೆಯಲ್ಲಿ ಪೂಜೆ ಮಾಡುತ್ತಿದ್ದ ವೇಳೆ ಹಠಾತ್ ಕುಸಿದುಬಿದ್ದರು. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.

ಗಿರಿ ದಿನೇಶ್ ಅವರು ನವಗ್ರಹ, ವಜ್ರ ಹಾಗೂ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರ ಅನಿರೀಕ್ಷಿತ ನಿಧನದಿಂದ ಕನ್ನಡ ಚಿತ್ರರಂಗದಲ್ಲಿ ಶೋಕದ ಮಡುಗೆ ಮೂಡಿದೆ.

ಇಂದು ಅವರ ಅಂತಿಮ ವಿಧಿವಿಧಾನಗಳು ಕುಟುಂಬಸ್ಥರು ಹಾಗೂ ಆಪ್ತರ ಉಪಸ್ಥಿತಿಯಲ್ಲಿ ನೆರವೇರಲಿವೆ.

error: Content is protected !!