Latest

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಶುಂಠಿ,ಮಾವು,ಅಡಿಕೆಗೆ ಅವಕಾಶ

ಮುಂಡಗೋಡ: ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ 2025 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು (RWBCIS) ಉತ್ತರ ಕನ್ನಡ ಜಿಲ್ಲೆಯಲ್ಲಿ Reliance General Insurance Company Limited ಅಧಿಸೂಚಿತ ವಿಮಾ ಅನುಷ್ಠಾನ ಸಂಸ್ಥೆಯಾಗಿರುತ್ತದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ವಿಮಾ ಕಂತನ್ನು ಪಾವತಿಸಲು ದಿ:11-08-2025 ಕೊನೆಯ ದಿನವಾಗಿದ್ದು, ಮುಂಡಗೋಡ ತಾಲೂಕಿನಲ್ಲಿ ಅಡಿಕೆ, ಮಾವು ಮತ್ತು ಶುಂಠಿ ಬೆಳೆಗಳಿಗೆ ಬೆಳೆ ವಿಮಾ ಸೌಲಭ್ಯವಿರುತ್ತದೆ. ವಿಮಾ ಚಂದಾದಾರರಾಗಲು ರೈತರು FID ಯನ್ನು ಹೊಂದುವುದು ಕಡ್ಡಾಯವಾಗಿದ್ದು, ನಿಗದಿತ ಅರ್ಜಿ ನಮೂನೆ, ಬ್ಯಾಂಕ್ ಪಾಸ್ ಪುಸ್ತಕದ ಯಥಾ ಪ್ರತಿ, ಬೆಳೆ ನಮೂದಿರುವ ಪಹಣಿ ಪತ್ರಿಕೆ, ಸ್ವಯಂ ದೃಢೀಕರಣ, ನಾಮಿನಿ ವಿವರ ಮತ್ತು ಆಧಾರ್ ಕಾರ್ಡ್ ನ ಪ್ರತಿಯೊಂದಿಗೆ ಸಂಬಂಧಿತ ಬ್ಯಾಂಕ್/ಸಾಮಾನ್ಯ ಸೇವಾ ಕೇಂದ್ರ/ಗ್ರಾಮ್ ಒನ್ ಗಳಲ್ಲಿ ಅಂತಿಮ ದಿನಾಂಕದ ಒಳಗಾಗಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ. ಅಡಿಕೆ ಬೆಳೆಗೆ ಒಟ್ಟು ವಿಮಾ ಮೊತ್ತ ಪ್ರತೀ ಎಕರೆಗೆ ರೂ 51200 ಇದ್ದು, ರೈತರು ಪಾವತಿಸಬೇಕಾದ ಒಟ್ಟು ವಿಮಾ ಕಂತು ರೂ 2591ಹಾಗೂ ಶುಂಠಿ ಬೆಳೆಗೆ ಒಟ್ಟು ವಿಮಾ ಮೊತ್ತ ಪ್ರತೀ ಎಕರೆಗೆ ರೂ 52000 ಇದ್ದು, ರೈತರು ಪಾವತಿಸಬೇಕಾದ ಒಟ್ಟು ವಿಮಾ ಕಂತು ರೂ 2631 ಹಾಗೂ ಮಾವು ಬೆಳೆಗೆ ಒಟ್ಟು ವಿಮಾ ಮೊತ್ತ ಪ್ರತೀ ಎಕರೆಗೆ ರೂ 32000 ಇದ್ದು, ರೈತರು ಪಾವತಿಸಬೇಕಾದ ಒಟ್ಟು ವಿಮಾ ಕಂತು ರೂ 5505 ಇದ್ದು ಕೊನೆಯ ದಿನಾಂಕ 11-08-2025 ಇರುತ್ತದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಂಡಗೋಡ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಕಛೇರಿ ಅಥವಾ ಹತ್ತಿರದ ಬ್ಯಾಂಕ್/ಸಾಮಾನ್ಯ ಸೇವಾ ಕೇಂದ್ರ/ಗ್ರಾಮ್ ಒನ್ ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಶ್ರೀ ಕೃಷ್ಣಾ ಟಿ. ಕುಳ್ಳೂರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ಮುಂಡಗೋಡ ರವರು ತಿಳಿಸಿರುತ್ತಾರೆ. ವರದಿ: ಮಂಜುನಾಥ F H

***

“ಭ್ರಷ್ಟರ ಬೇಟೆ” ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088070392

nazeer ahamad

Recent Posts

ಬೈಂದೂರು: ಬೀದಿಯಲ್ಲಿ ಮಲಗಿದ್ದ ಗೋವುಗಳನ್ನು ಕದ್ದ ಕಳ್ಳರು.!

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಪೇಟೆಯಲ್ಲಿ ಗೋವು ಕಳವು ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿ ಮಹತ್ವದ ವಿಜಯ ಸಾಧಿಸಿದ್ದಾರೆ.…

1 hour ago

ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ದೋಷಿ: ಜನಪ್ರತಿನಿಧಿಗಳ ಕೋರ್ಟ್ ತೀರ್ಪು

ಬೆಂಗಳೂರು, ಆಗಸ್ಟ್ 1 – ಮನೆಗೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಯುವ ನಾಯಕ ಮತ್ತು ಮಾಜಿ ಸಂಸದ ಪ್ರಜ್ವಲ್…

2 hours ago

ಸೆಪ್ಟೆಂಬರ್ 1ರಿಂದ ರಿಜಿಸ್ಟರ್ಡ್ ಪೋಸ್ಟ್ ಸೇವೆಗೆ ವಿದಾಯ: ಇನ್ನುಮುಂದೆ ಸ್ಪೀಡ್ ಪೋಸ್ಟ್ ಮತ್ತು ನಾರ್ಮಲ್ ಪೋಸ್ಟ್ ಮಾತ್ರ

ಅಂಚೆ ಇಲಾಖೆ ತನ್ನ ಬಹುಮಾನ್ಯ ಸೇವೆಗಳಲ್ಲಿ ಒಂದಾದ ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಸೆಪ್ಟೆಂಬರ್ 1ರಿಂದ ಈ…

2 hours ago

ಶೆಡ್ ಕೆಡವಿದ ಆಕ್ರೋಶ: ಕಾಂಗ್ರೆಸ್ ಶಾಸಕರ ಕಚೇರಿಯ ಆವರಣದಲ್ಲಿ ಎಮ್ಮೆಗಳನ್ನು ಕಟ್ಟಿದ ರೈತ ದಂಪತಿ!

ತೆಲಂಗಾಣ, ಆಗಸ್ಟ್ 1: ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು ತೆಲಂಗಾಣದ ರೈತ ದಂಪತಿಯೊಬ್ಬರು ವಿಶೇಷ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಜಗ್ಗಾಯಪೇಟೆ…

4 hours ago

15 ವರ್ಷದ ಬಾಲಕಿ ಅಪಹರಣ: ಸ್ಕೂಲ್ ಗೇಟ್ ಎದುರೇ ಕೃತ್ಯ, ಸಿಸಿಟಿವಿಯಲ್ಲಿ ಸೆರೆ

ಉತ್ತರ ಪ್ರದೇಶದ ನೋಯ್ಡಾದಲ್ಲಿ 15 ವರ್ಷದ ಬಾಲಕಿಯ ಅಪಹರಣ ಪ್ರಕರಣ one ಚಿಂತೆಗೆ ಕಾರಣವಾಗಿದೆ. ಈ ಶೋಕಾಂತ ಘಟನೆ ಮದರ್…

4 hours ago

ಮಾಹಿತಿ ಪಡೆಯಲು ಬಂದ ಪೊಲೀಸಪ್ಪನ ಮುಂದೆ ಸೀರೆ ಬಿಚ್ಚಿ ಡ್ರಾಮ ಮಾಡಿದ ರತ್ನಮ್ಮ !

ನಂಜನಗೂಡು ತಾಲ್ಲೂಕಿನ ಶಿರಮಳ್ಳಿ ಗ್ರಾಮದಲ್ಲಿ ಅಚ್ಚರಿಯ ಘಟನೆ ಒಂದು ಬೆಳಕಿಗೆ ಬಂದಿದೆ. ಶಿರಮಳ್ಳಿ ಗ್ರಾಮದ ನಿವಾಸಿ ರತ್ನಮ್ಮ ಎಂಬ ಮಹಿಳೆ,…

5 hours ago