
ಮುಂಡಗೋಡ: ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ 2025 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು (RWBCIS) ಉತ್ತರ ಕನ್ನಡ ಜಿಲ್ಲೆಯಲ್ಲಿ Reliance General Insurance Company Limited ಅಧಿಸೂಚಿತ ವಿಮಾ ಅನುಷ್ಠಾನ ಸಂಸ್ಥೆಯಾಗಿರುತ್ತದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರು ವಿಮಾ ಕಂತನ್ನು ಪಾವತಿಸಲು ದಿ:11-08-2025 ಕೊನೆಯ ದಿನವಾಗಿದ್ದು, ಮುಂಡಗೋಡ ತಾಲೂಕಿನಲ್ಲಿ ಅಡಿಕೆ, ಮಾವು ಮತ್ತು ಶುಂಠಿ ಬೆಳೆಗಳಿಗೆ ಬೆಳೆ ವಿಮಾ ಸೌಲಭ್ಯವಿರುತ್ತದೆ. ವಿಮಾ ಚಂದಾದಾರರಾಗಲು ರೈತರು FID ಯನ್ನು ಹೊಂದುವುದು ಕಡ್ಡಾಯವಾಗಿದ್ದು, ನಿಗದಿತ ಅರ್ಜಿ ನಮೂನೆ, ಬ್ಯಾಂಕ್ ಪಾಸ್ ಪುಸ್ತಕದ ಯಥಾ ಪ್ರತಿ, ಬೆಳೆ ನಮೂದಿರುವ ಪಹಣಿ ಪತ್ರಿಕೆ, ಸ್ವಯಂ ದೃಢೀಕರಣ, ನಾಮಿನಿ ವಿವರ ಮತ್ತು ಆಧಾರ್ ಕಾರ್ಡ್ ನ ಪ್ರತಿಯೊಂದಿಗೆ ಸಂಬಂಧಿತ ಬ್ಯಾಂಕ್/ಸಾಮಾನ್ಯ ಸೇವಾ ಕೇಂದ್ರ/ಗ್ರಾಮ್ ಒನ್ ಗಳಲ್ಲಿ ಅಂತಿಮ ದಿನಾಂಕದ ಒಳಗಾಗಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ. ಅಡಿಕೆ ಬೆಳೆಗೆ ಒಟ್ಟು ವಿಮಾ ಮೊತ್ತ ಪ್ರತೀ ಎಕರೆಗೆ ರೂ 51200 ಇದ್ದು, ರೈತರು ಪಾವತಿಸಬೇಕಾದ ಒಟ್ಟು ವಿಮಾ ಕಂತು ರೂ 2591ಹಾಗೂ ಶುಂಠಿ ಬೆಳೆಗೆ ಒಟ್ಟು ವಿಮಾ ಮೊತ್ತ ಪ್ರತೀ ಎಕರೆಗೆ ರೂ 52000 ಇದ್ದು, ರೈತರು ಪಾವತಿಸಬೇಕಾದ ಒಟ್ಟು ವಿಮಾ ಕಂತು ರೂ 2631 ಹಾಗೂ ಮಾವು ಬೆಳೆಗೆ ಒಟ್ಟು ವಿಮಾ ಮೊತ್ತ ಪ್ರತೀ ಎಕರೆಗೆ ರೂ 32000 ಇದ್ದು, ರೈತರು ಪಾವತಿಸಬೇಕಾದ ಒಟ್ಟು ವಿಮಾ ಕಂತು ರೂ 5505 ಇದ್ದು ಕೊನೆಯ ದಿನಾಂಕ 11-08-2025 ಇರುತ್ತದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಂಡಗೋಡ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಕಛೇರಿ ಅಥವಾ ಹತ್ತಿರದ ಬ್ಯಾಂಕ್/ಸಾಮಾನ್ಯ ಸೇವಾ ಕೇಂದ್ರ/ಗ್ರಾಮ್ ಒನ್ ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಶ್ರೀ ಕೃಷ್ಣಾ ಟಿ. ಕುಳ್ಳೂರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ಮುಂಡಗೋಡ ರವರು ತಿಳಿಸಿರುತ್ತಾರೆ. ವರದಿ: ಮಂಜುನಾಥ F H
***
“ಭ್ರಷ್ಟರ ಬೇಟೆ” ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088070392