ಚಿತ್ರದುರ್ಗ: ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮದ ಹತ್ತಿರ ನಡೆದ ವಿಶಿಷ್ಟ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಾಧುಗಳ ವೇಷ ತಾಳಿ ರೈತರ ವಿಶ್ವಾಸ ಗೆದ್ದು ಚಿನ್ನದ ಉಂಗುರ ದೋಚಿದ್ದ ಐವರ ತಂಡವನ್ನು ತುರುವನೂರು ಠಾಣೆ ಪೊಲೀಸರು ಸಿಕ್ಕಿಬಿದ್ದಿದ್ದಾರೆ.

ಘಟನೆಯ ವಿವರ ಹೀಗಿದೆ: ರಾಷ್ಟ್ರೀಯ ಹೆದ್ದಾರಿ 50ರ ಸಮೀಪ ರೈತ ರವಿಕುಮಾರ್ ಅವರ ಜಮೀನಿಗೆ ಕಾರಿನಲ್ಲಿ ಬಂದ ಆರೋಪಿಗಳು ಮೊದಲು ಮೆಕ್ಕೆಜೋಳದ ತೆನೆ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ “ಒಂದೆರಡು ತೆನೆಗಳನ್ನು ಮುರಿದುಕೊಳ್ಳೋಣ” ಎಂದು ಹೇಳಿ ರೈತರೊಂದಿಗೆ ಮಾತುಕತೆ ಮುಂದುವರೆಸಿದರು.

ಆಮೇಲೆ ಭವಿಷ್ಯ ಹೇಳುವುದಾಗಿ ನಂಬಿಸಿ ರವಿಕುಮಾರ್ ಅವರನ್ನು ಕಾರಿನೊಳಗೆ ಕೂರಿಸಿಕೊಂಡು, ಅವರ ಕೈಯಲ್ಲಿದ್ದ ಚಿನ್ನದ ಉಂಗುರವನ್ನು ತೆಗೆದು ಬಾಯಲ್ಲಿ ಹಾಕಿಕೊಂಡರು. ತಕ್ಷಣ ರೈತನನ್ನು ಕೆಳಗಿಳಿಸಿ ಕಾರಿನಲ್ಲಿ ಪರಾರಿಯಾದರು.

ಈ ಕುರಿತು ರವಿಕುಮಾರ್ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಪೊಲೀಸರು ತನಿಖೆ ನಡೆಸಿ, ಸಾಧುಗಳ ವೇಷದಲ್ಲಿದ್ದ ನಾಲ್ವರು ಕಳ್ಳರು ಮತ್ತು ಕಾರು ಚಾಲಕನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಳಸಿದ ಕಾರು ಹಾಗೂ ಕಳವು ಮಾಡಿದ ಚಿನ್ನವನ್ನು ವಶಪಡಿಸಿಕೊಳ್ಳಲು ಕ್ರಮ ಜರುಗಿದೆ.

Leave a Reply

Your email address will not be published. Required fields are marked *

error: Content is protected !!