ರಾಣೆಬೆನ್ನೂರು ತಾಲೂಕು ಮಾಕನೂರು ಗ್ರಾಮದ ಸಮೀಪದ ಲಾಟೇರ್ ಜಮೀನಿನ ಬಳಿ ನಿರ್ಮಾಣದಲ್ಲಿರುವ ಮನೆಯೊಂದರಲ್ಲಿ ನಡೆಯುತ್ತಿದ್ದ ಜೂಜಾಟಕ್ಕೆ ಪೊಲೀಸರು ಸೋಮವಾರ ರಾತ್ರಿ ದಾಳಿ ನಡೆಸಿದ್ದಾರೆ. ಈ ವೇಳೆ ₹1.74 ಲಕ್ಷ ನಗದುವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೆ, ಜೂಜಾಟದಲ್ಲಿ ತೊಡಗಿದ್ದ 18 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಮಾರಪಟ್ಟಣ ಪೊಲೀಸರು, ಅಕ್ರಮ ಚಟುವಟಿಕೆಗೆ ತೊಡಗಿದ್ದವರನ್ನು ಸ್ಥಳದಲ್ಲೇ ವಶಕ್ಕೆ ಪಡೆದುಕೊಂಡರು. ಈ ದಾಳಿಯನ್ನು ಡಿಎಸ್‌ಪಿ ಲೋಕೇಶ್ ಜೆ ಮತ್ತು ಸಿಪಿಐ ಪ್ರವೀಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಪ್ರವೀಣ್‌ಕುಮಾರ್ ವಾಲೀಕಾರ ನೇತೃತ್ವದ ತಂಡ ಯಶಸ್ವಿಯಾಗಿ ನಡೆಸಿತು.
ಈ ಸಂಬಂಧ ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಅಕ್ರಮ ಜೂಜಾಟಗಳನ್ನು ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಂಡಿದ್ದು, ಸಾರ್ವಜನಿಕರ ಸಹಕಾರವೂ ಅಗತ್ಯವಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.
***
“ಭ್ರಷ್ಟರ ಬೇಟೆ” ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088070392
ಚೆನ್ನೈ: ಕಲಾವಿದರ ಜಗತ್ತಿನಲ್ಲಿ ಒಂದು ದುಃಖದ ಸುದ್ದಿ – ಹಿರಿಯ ನಟಿ, ನಿರ್ಮಾಪಕಿ ಮತ್ತು ರಾಜಕಾರಣಿ ರಾಧಿಕಾ ಶರತ್ ಕುಮಾರ್…
ತುಮಕೂರು: ಖಾಸಗಿ ಕಾಲೇಜಿನ ಪ್ರಿನ್ಸಿಪಾಲ್ ಎನ್ನುವವನು ವಿದ್ಯಾರ್ಥಿನಿಯೊಬ್ಬಳಿಗೆ ಅಶ್ಲೀಲ ಸಂದೇಶ ಕಳುಹಿಸಿ, “ನಾನು 10 ಸಾವಿರ ರೂಪಾಯಿ ಕೊಡ್ತೀನಿ, ಬಾ”…
ಬೆಂಗಳೂರು: ಮನೆಗೂಟದ ಕಲಹ, ಆರ್ಥಿಕ ಸಂಕಷ್ಟಗಳು ಇನ್ನೊಂದು ಭೀಕರ ಘಟನೆಗೆ ಕಾರಣವಾಗಿವೆ. ತಾಯಿಯೊಬ್ಬಳು ತನ್ನ ಮಗುಗೂ ಸಹ ಇಲಿ ಪಾಷಾಣ…
ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಒಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಈ ಹತ್ಯೆ ಪ್ರಕರಣದ ಹಿಂದೆ…
ಬೆಳ್ತಂಗಡಿ, ಜುಲೈ 31: ಧರ್ಮಸ್ಥಳದ ನಿಗೂಢ ಶವ ಹೂತು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT)ಕ್ಕೆ…
ಕೊಪ್ಪಳ, ಜುಲೈ 31: ರಾಜ್ಯದ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ ಹಿಂದೆ ಹೊರಗುತ್ತಿಗೆ ಆಧಾರಿತ ಕೆಲಸ ಮಾಡುತ್ತಿದ್ದ ಕಳಕಪ್ಪ…