Latest

ಸೈಟು ಮತ್ತು ಜಮೀನುಗಳ ನಕಲಿ ದಾಖಲೆ ಸೃಷ್ಠಿಸಿ ಮೋಸ ಮಾಡುತ್ತಿದ್ದ ಮೂವರ ಬಂಧನ.

ಮೈಸೂರಿನ ಕುವೆಂಪುನಗರದ ಸರ್ವಿಸ್ ಅಪಾರ್ಟ್ಮೆಂಟ್‌ವೊಂದರಲ್ಲಿ ಮೂರು ಜನ ಆಸಾಮಿಗಳು ಸೈಟ್‌ಗಳು ಮತ್ತು ಜಮೀನುಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜನರನ್ನು ವಂಚಿಸಿ ಮೋಸದಿಂದ ಅಕ್ರಮ ಲಾಭ ಮಾಡಿ ಕೊಳ್ಳುತ್ತಿರುವುದಾಗಿ ಮೈಸೂರು ನಗರದ ಡಿ.ಸಿ.ಪಿ. ಕಾನೂನು ಮತ್ತು ಸುವ್ಯವಸ್ಥೆ ರವರಾದ ಶ್ರೀ ಪ್ರದೀಪ್ ಗುಂಟಿ, ಐಪಿಎಸ್ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಈ ಆರೋಪಿಗಳ ಪತ್ತೆ ಸಂಬಂಧ ಡಿ.ಸಿ.ಪಿ.ರವರು ವಿಶೇಷ ತಂಡವನ್ನು ರಚನೆ ಮಾಡಿ ಮೈಸೂರುನಗರದ ಕುವೆಂಪುನಗರ ಪೊಲೀಸ್ ಠಾಣಾ ಸರಹದ್ದಿನ ರಾಮಕೃಷ್ಣನಗರ ಐ ಬ್ಲಾಕ್‌ನ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಗೋಲ್ಡನ್ ಬೆಲ್ಸ್ ಸರ್ವೀಸ್ ಅರ್ಪಾಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿರುವ ರೂಂ ನಂ: ೩೦೧ ಸ್ಥಳದ ಮೇಲೆ ದಿನಾಂಕ: ೦೫/೦೯/೨೦೨೨ ರಂದು ದಾಳಿ ಮಾಡಿ ಪರಿಶೀಲಿಸಿದ್ದು, ಮೂವರು ಆರೋಪಿಗಳು ಸೈಟ್‌ಗಳು ಮತ್ತು ಜಮೀನುಗಳ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿರುವ ಕೃತ್ಯದಲ್ಲಿ ತೊಡಗಿರುವುದು ಕಂಡು ಬಂದ ಮೇರೆಗೆ ಮೂರು ಜನ ಆರೋಪಿಗಳನ್ನು ಬಂಧಿಸಿ, ಅವರುಗಳು ನಕಲಿ ದಾಖಲಾತಿಗಳನ್ನು ಸೃಷ್ಟಿಸಲು ಬಳಸುತ್ತಿದ್ದ ಲ್ಯಾಪ್‌ಟಾಪ್, ಪ್ರಿಂಟರ್, ಸ್ಕಾö್ಯನರ್‌ಗಳು, ಮೊಬೈಲ್‌ಗಳು ಹಾಗೂ ವಿವಿಧ ಬ್ಯಾಂಕ್‌ಗಳು ಮತ್ತು ವಿವಿಧ ಇಲಾಖೆಗಳಿಗೆ ಸೇರಿದ ನಕಲಿ ಸೀಲ್‌ಗಳು, ಅಧಿಕಾರಿಗಳ ನಕಲಿ ಸೀಲ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಸಂಬಂದ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.
ಈ ಪತ್ತೆ ಕಾರ್ಯವನ್ನು ಡಿ.ಸಿ.ಪಿ., ಕಾನೂನು ಮತ್ತು ಸುವ್ಯವಸ್ಥೆ ರವರಾದ ಶ್ರೀ ಪ್ರದೀಪ್ ಗುಂಟಿ, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಕೃಷ್ಣರಾಜ ವಿಭಾಗದ ಎ.ಸಿ.ಪಿ.ರವರಾದ ಶ್ರೀ ಗಂಗಾಧರಸ್ವಾಮಿ ಎಸ್.ಇ ರವರ ಉಸ್ತುವಾರಿಯಲ್ಲಿ, ಕುವೆಂಪುನಗರ ಪೊಲೀಸ್ ಠಾಣೆಯ ಪಿ.ಐ ರವರಾದ ಶ್ರೀ ಷಣ್ಮುಗ ವರ್ಮ ಕೆ, ಪಿಎಸ್‌ಐ ರವರಾದ ಕು.ರಾಧ ಎಂ, ಶ್ರೀ ಗೋಪಾಲ್, ಎಸ್ ಪಿ, ಪ್ರೊ.ಪಿಎಸ್‌ಐ ಶ್ರೀ ಪ್ರಭು ಹಾಗೂ ಎ.ಎಸ್.ಐಮುರಳೀಗೌಡ ಸಿಬ್ಬಂದಿಯವರಾದ ಪುರುಷೋತ್ತಮ್, ಕೃಷ್ಣ ಮಂಜುನಾಥ್ ಕೆ.ಎನ್., ರಾಜುಸಾಬ್, ಮೌನೇಶ, ಅಮೋಘ್, ಪುಟ್ಟಪ್ಪ ಎನ್‌ಕೆ, ಹಜರತ್ ಅಲಿ, ಮಹೇಶ್.ಎಂ, ಯೋಗೇಶ, ರವರು ಮಾಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.

ಭ್ರಷ್ಟರ ಬೇಟೆ

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

2 weeks ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago