Categories: CrimeLatest

ಕಲಬುರ್ಗಿಯಲ್ಲಿ ಮಾಜಿ ಸಚಿವರ ಅಳಿಯನ ಬರ್ಬರ ಹತ್ಯೆ

ಕಲಬುರಗಿ ನಗರದ ಹಳೇ ಜೇವರ್ಗಿ ರಸ್ತೆಯ ಪಿ & ಟಿ ಕಾಲೊನಿಯಲ್ಲಿ ಗುರುವಾರ ರಾತ್ರಿ ನಡೆದ ಭೀಕರ ಘಟನೆಯಲ್ಲಿ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.

ಅನಿಲ ವಿಠ್ಠಲ ರಾಠೋಡ (45) ಮೃತ ವ್ಯಕ್ತಿಯಾಗಿದ್ದು, ರುದ್ರವಾಡಿ ಆಸ್ಪತ್ರೆ ಎದುರಿನ ವೆಂಕಟೇಶ್ವರ ಕಾಂಪ್ಲೆಕ್ಸ್‌ನಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಮೂವರು ಅನಾಮಿಕರು ಆಟೊದಲ್ಲಿ ಬಂದು, ಅನಿಲ ಅವರು ಫೈನಾನ್ಸ್ ಕೆಲಸದಲ್ಲಿ ನಿರತರಾಗಿದ್ದ ವೇಳೆ ದಿಢೀರ್ ದಾಳಿ ನಡೆಸಿದ್ದಾರೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕ್ರೂರವಾಗಿ ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಅನಿಲ ರಾಠೋಡ ಅವರು ವಕೀಲಿಕೆ ಶಿಕ್ಷಣ ಪಡೆದಿದ್ದು, ನಂತರ ಫೈನಾನ್ಸ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಅವರು ಮಾಜಿ ಸಚಿವ ರೇವೂನಾಯಕ ಬೆಳಮಗಿ ಅವರ ಅಳಿಯನಾಗಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್‌.ಡಿ., ಡಿಸಿಪಿ ಪ್ರವೀಣ ನಾಯಕ, ಎಸಿಪಿ ಶರಣಬಸಪ್ಪ ಸುಬೇದಾರ ಹಾಗೂ ಸ್ಟೇಷನ್ ಬಜಾರ್ ಇನ್‌ಸ್ಪೆಕ್ಟರ್ ಗುರು ಪಾಟೀಲ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಾಥಮಿಕ ತನಿಖೆಯ ಪ್ರಕಾರ, ಮೃತನ ಪರಿಚಯಸ್ಥರೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹಣಕಾಸಿನ ವ್ಯವಹಾರ ಸಂಬಂಧಿತ ವೈಮನಸ್ಸೇ ಹತ್ಯೆಗೆ ಕಾರಣವಾಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಗಣಿಸಿ ತನಿಖೆ ಮುಂದುವರಿಸಲಾಗುತ್ತಿದ್ದು, ಆರೋಪಿಗಳ ಬಂಧನಕ್ಕಾಗಿ ಎಸಿಪಿಗಳ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಜಾತ್ಯಾತೀತ ಸೌಹಾರ್ದತೆಗೆ ಸಾಕ್ಷಿಯಾದ ಹರಾಳು ಅಡ್ಡಪಲ್ಲಕ್ಕಿ ಮಹೋತ್ಸವ; ಧರ್ಮಸಭೆಯಲ್ಲಿ ಉಜ್ಜಯಿನಿ ಶ್ರೀ ಜಗದ್ಗುರುಗಳಿಂದ ಆಶೀರ್ವಚನ.

ಕೊಟ್ಟೂರು:- ತಾಲ್ಲೂಕಿನ ಹರಾಳು ಗ್ರಾಮದಲ್ಲಿ ದಿನಾಂಕ 02-04-2026 ಗುರುವಾರದಂದು ಆಗಮಿಸಿದ ಶ್ರೀ ಉಜ್ಜಯಿನಿ ಜಗದ್ಗುರುಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಸಮ್ಮಳ ವಾದ್ಯ,…

2 minutes ago

ಮದುವೆಗೆ ವಿರೋಧ: ಚಾಮರಾಜನಗರದಲ್ಲಿ ಪ್ರೇಮಿಗಳ ದಾರುಣ ಅಂತ್ಯ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದೆ. ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದು ಪ್ರೇಮಿಗಳಿಬ್ಬರು…

4 hours ago

ಭಾರತದಲ್ಲಿ ಹೆಚ್ಚುತ್ತಿರುವ ‘ಅನೈತಿಕ ಸಂಬಂಧದ’ ಟ್ರೆಂಡ್: ಬೆಂಗಳೂರೇ ನಂ.1!

ಭಾರತದಲ್ಲಿ ವಿವಾಹವನ್ನು ಪವಿತ್ರ ಬಂಧ ಹಾಗೂ ಜೀವನಪರ್ಯಂತದ ಬದ್ಧತೆ ಎಂದು ಪರಿಗಣಿಸುವ ಪರಂಪರೆ ಇನ್ನೂ ಗಟ್ಟಿಯಾಗಿ ಇದೆ. ಆದರೆ ಇತ್ತೀಚಿನ…

5 hours ago

ರಾಘವ್ ಚಡ್ಡಾಗೆ ಎಎಪಿಯಿಂದ ದೊಡ್ಡ ಶಾಕ್: ರಾಜ್ಯಸಭೆಯಲ್ಲಿ ಮಾತನಾಡುವಂತಿಲ್ಲ ಮತ್ತು ಉಪನಾಯಕ ಸ್ಥಾನದಿಂದ ವಜಾ.

ಆಮ್ ಆದ್ಮಿ ಪಕ್ಷ (AAP) ತನ್ನ ರಾಜ್ಯಸಭಾ ಸಂಸದ Raghav Chadha ಅವರಿಗೆ ದೊಡ್ಡ ಹಿನ್ನಡೆ ನೀಡಿದ್ದು, ಅವರನ್ನು ರಾಜ್ಯಸಭಾ…

18 hours ago

“ನೀನು ತುಂಬಾ ಸುಂದರವಾಗಿದ್ದೀಯಾ, ನಿನ್ನ ಮಗಳು ಸುಂದರವಾಗಿರಬೇಕು. ಆಕೆಯನ್ನು ನನ್ನ ಮನೆಗೆ ಕಳುಹಿಸು, 10 ಸಾವಿರ ಕೊಡುತ್ತೇನೆ- ಕಾಮುಕ ಎ.ಎಸ್.ಐ ಬೇಡಿಕೆಗೆ ದಂಗಾದ ಮಹಿಳೆ

“ರಕ್ಷಕನೇ ಭಕ್ಷಕ” ಎನ್ನುವ ಮಾತಿಗೆ ಸಾಕ್ಷಿಯಂತ ಘಟನೆಯೊಂದು Akolaದಲ್ಲಿ ಬೆಳಕಿಗೆ ಬಂದಿದೆ. ಸಹಾಯಕ ಪೊಲೀಸ್ ಉಪನಿರೀಕ್ಷಕ (ASI) ಒಬ್ಬರು ವಶದಲ್ಲಿದ್ದ…

2 days ago

ಪ್ರೇಮ-ಮದುವೆ ಹೆಸರಿನಲ್ಲಿ ಯುವಕರಿಗೆ ಬಲೆ: ಅತ್ತೆ ಆಸ್ಪತ್ರೆ, ಸೊಸೆ ಚಿನ್ನದೊಂದಿಗೆ ನಾಪತ್ತೆ..!

ಮನೆಯ ವಿಶ್ವಾಸಕ್ಕೆ ಬಂದ ಸೊಸೆಯೇ ಅತ್ತೆಗೆ ವಿಷ ನೀಡಿ, ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಪರಾರಿಯಾದ ಬೆಚ್ಚಿಬೀಳಿಸುವ ಘಟನೆ…

2 days ago